
‘ತ್ರಿಬಲ್ ರೈಡಿಂಗ್’ ಚಿತ್ರ ವಿಮರ್ಶೆ: ಫ್ಯಾಮಿಲಿ ಡ್ರಾಮಾದಲ್ಲಿ ಗೋಲ್ಡನ್ ರಂಗು
Team Udayavani, Nov 26, 2022, 9:30 AM IST

ಗಣೇಶ್ ಸಿನಿಮಾಗಳೆಂದರೆ, ಅಲ್ಲೊಂದು ನವಿರಾದ ಲವ್ ಸ್ಟೋರಿ, ಕಾಮಿಡಿ ಕಚಗುಳಿ, ಒಂದಷ್ಟು ಎಮೋಶನ್, ನಡುವೆ ಗುನುಗುವಂತ ಹಾಡುಗಳು ಇರಲೇಬೇಕು ಎಂಬುದು ಅವರ ಅಭಿಮಾನಿಗಳ ನಿರೀಕ್ಷೆ. ಗಣಿ ಅಭಿಮಾನಿಗಳ ಈ ನಿರೀಕ್ಷೆಯನ್ನು ಹುಸಿ ಮಾಡದೆ ತೆರೆಗೆ ಬಂದಿರುವ ಚಿತ್ರ “ತ್ರಿಬಲ್ ರೈಡಿಂಗ್’.
ಮೊದಲೇ ಹೇಳಿದಂತೆ “ತ್ರಿಬಲ್ ರೈಡಿಂಗ್’ ಔಟ್ ಆ್ಯಂಡ್ ಔಟ್ ಲವ್ ಕಂ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾ. ಒಬ್ಬ ಹುಡುಗನ ಜೀವನದಲ್ಲಿ ಬರುವ ಮೂವರು ಹುಡುಗಿಯರು, ಅವನನ್ನು ಲವ್ ಮಾಡುವ ನೆಪದಲ್ಲಿ ಹೇಗೆಲ್ಲ ಇಕ್ಕಟ್ಟಿಗೆ ಸಿಲುಕಿಸಿ ತಮಾಷೆ ನೋಡುತ್ತಾರೆ ಅನ್ನೋದು ಸಿನಿಮಾದ ಕಥೆಯ ಒಂದು ಎಳೆ.
ಹುಡುಗಿಯರ ಆಟ, ಹುಡುಗನ ಸಂಕಟ ಹೇಗಿರುತ್ತದೆ ಎಂಬುದನ್ನು ಕಣ್ತುಂಬಿ ಕೊಳ್ಳುವ ಕುತೂಹಲವಿದ್ದರೆ, ಖಂಡಿತವಾಗಿಯೂ ಒಮ್ಮೆ ಥಿಯೇಟರ್‌ನಲ್ಲಿ “ತ್ರಿಬಲ್ ರೈಡಿಂಗ್’ ನೋಡಿಬರಬಹುದು.
ಮೂವರು ಹುಡುಗಿಯ ಫೇವರೆಟ್ ಹುಡುಗನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಗಣೇಶ್ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಹುಡುಕಾಟ, ಸಂಕಟ, ಕಾಮಿಡಿ, ಆ್ಯಕ್ಷನ್, ಡ್ಯಾನ್ಸ್ ಎಲ್ಲದರಲ್ಲೂ ಗಣಿ ಅಭಿನಯ ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.
ಇದನ್ನೂ ಓದಿ:ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ₹175 ಕೋಟಿ ತೆರಿಗೆ ವಿನಾಯಿತಿ; ಕಾರಣ ಇಲ್ಲಿದೆ
ಇನ್ನು ನಾಯಕಿಯರಾಗಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ಮೂವರಿಗೂ ನಿರ್ದೇಶಕರು ತೆರೆಮೇಲೆ ಸಮಾನ ಸ್ಕ್ರೀನ್ ಸ್ಪೇಸ್ ನೀಡಿದ್ದು, ಮೂವರು ಕೂಡ ತಮ್ಮ ಅಂದ ಮತ್ತು ಪಾತ್ರ ಪೋಷಣೆಯಲ್ಲಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ.
ಉಳಿದಂತೆ ಸಾಧುಕೋಕಿಲ, ಕುರಿ ಪ್ರತಾಪ್, ರವಿಶಂಕರ್ ಗೌಡ ಕಾಮಿಡಿ ಕಮಾಲ್ ಪ್ರೇಕ್ಷಕರಿಗೆ ನಗು ತರಿಸುತ್ತದೆ. ಇನ್ನು ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಶೋಭರಾಜ್, ಶರತ್ ಲೋಹಿತಾಶ್ವ, ಚಿತ್ಕಲಾ ಬಿರಾದಾರ್ ಹೀಗೆ ಜನಪ್ರಿಯ ಕಲಾವಿದರ ದಂಡೇ ಇಡೀ ಸಿನಿಮಾದಲ್ಲಿ ಕಾಣ ಸಿಗುತ್ತದೆ.
ತಾಂತ್ರಿಕವಾಗಿ ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನದ ಮೂರು ಹಾಡುಗಳು ಥಿಯೇಟರ್ ಹೊರಗೂ ಗುನುಗುವಂತಿದೆ. ಹಿನ್ನೆಲೆ ಸಂಗೀತ, ಸಂಕಲನ ಮತ್ತು ಜೈ ಗಣೇಶ್ ಛಾಯಾಗ್ರಹಣ ತಾಂತ್ರಿಕವಾಗಿ ಸಿನಿಮಾದಲ್ಲಿ ಗಮನ ಸೆಳೆಯುತ್ತದೆ.
ಗಣೇಶ್ ಅವರಿಗೆ ಪಕ್ಕಾ ಹೊಂದುವಂತ ಕಥೆಯೊಂದನ್ನು ಇಟ್ಟುಕೊಂಡು, “ತ್ರಿಬಲ್ ರೈಡಿಂಗ್’ ಅನ್ನು ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾವಾಗಿ ತೆರೆಮೇಲೆ ತರಲು ಚಿತ್ರತಂಡ ಯಶಸ್ವಿಯಾಗಿದೆ.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟಪುರ ವಿರಾಗಿ ಚಿತ್ರ ವಿಮರ್ಶೆ: ವಿರಾಗಿಯ ಬದುಕಿನ ಮೇಲೊಂದು ಬೆಳಕು

‘ಥಗ್ಸ್ ಆಫ್ ರಾಮಘಡ’ ಚಿತ್ರ ವಿಮರ್ಶೆ: ರಾಮಘಡದಲ್ಲಿ ಕರ್ಮಫಲ ಪ್ರಾಪ್ತಿ!

‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರ ವಿಮರ್ಶೆ: ಫ್ರೇಮ್ನೊಳಗೆ ಸೆರೆಯಾದ ಪುಟ್ಟ ಬದುಕು

ಚಿತ್ರ ವಿಮರ್ಶೆ: ‘ಕಾಕ್ಟೆಲ್’ ಎಂಬ ಸಮ್ಮಿಶ್ರಣಗಳ ಚಿತ್ರಣ

‘ಸ್ಫೂಕಿ ಕಾಲೇಜ್’ ಚಿತ್ರ ವಿಮರ್ಶೆ: ಪ್ರೀತಿಯ ನೋಟದಲ್ಲಿ ದೆವ್ವದ ಆಟ!
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
