‘ತೋತಾಪುರಿ’ ಚಿತ್ರ ವಿಮರ್ಶೆ: ಜಾತಿ-ಧರ್ಮದ ಬೇಲಿಯಲ್ಲಿ ತೋತಾಪುರಿ ತೊಟ್ಟು!


Team Udayavani, Oct 1, 2022, 12:11 PM IST

ತೋತಾಪುರಿ

ಸದಾ ಜಾತಿ ತಾರತಮ್ಯ, ಧರ್ಮಗಳ ನಡುವಿನ ಸಂಘರ್ಷದಲ್ಲಿ ಮಾನವೀಯತೆ ದಿನೇ ದಿನೇ ಮೌಲ್ಯ ಕಳೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ಮಾನವೀಯತೆಯಲ್ಲಿ ಮನುಷ್ಯನಿಗೆ ಯಾವುದು ದೊಡ್ಡದು? ಇಂದಿನ ಸಮಾಜಕ್ಕೆ ಬೇಕಾಗಿರುವುದು ಯಾವುದು? ಅಂತಿಮವಾಗಿ ನಮ್ಮೊಳಗೆ ಉಳಿಯುವುದು ಯಾವುದು, ಅಳಿಯುವುದು ಯಾವುದು? ಇಂಥದ್ದೊಂದು ಗಂಭೀರ ಪ್ರಶ್ನೆಯನ್ನು ಜೊತೆಗೆ ಕಾಮಿಡಿ ಕಚಗುಳಿ ಇಡುತ್ತಾ ಪ್ರೇಕ್ಷಕರ ಮುಂದೆ ಬಂದಿರುವ ಸಿನಿಮಾ “ತೋತಾಪುರಿ’.

ಆಗಾಗ್ಗೆ ಗಂಭೀರ ಚರ್ಚೆಯಾಗುವ, ರಾಜಕೀಯ ಬಣ್ಣ ಪಡೆದುಕೊಳ್ಳುವ, ಒಬ್ಬರ ಮೇಲೊಬ್ಬರು ಸವಾರಿ ಮಾಡುವಂಥ ಜಾತಿ, ಧರ್ಮ, ಲಿಂಗ ತಾರತಮ್ಯ ಹೀಗೆ ಪ್ರಸ್ತುತ ಸಮಾಜದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ವಿಷಯಗಳನ್ನು ಹುಡುಕಿ ಅದನ್ನು ತನ್ನದೇ ಧಾಟಿಯಲ್ಲಿ ದೃಶ್ಯರೂಪದಲ್ಲಿ ಕಟ್ಟಿ ಕೊಟ್ಟಿರುವ ನಿರ್ದೇಶಕ ವಿಜಯ ಪ್ರಸಾದ್‌ ಪ್ರಯತ್ನ ಪ್ರಶಂಸನಾರ್ಹ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಮೂರು ಪಾತ್ರಗಳನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಕಥೆಯನ್ನು ಹೇಳಿರುವ ರೀತಿ ಹೊಸದಾಗಿದೆ.

ಇನ್ನು “ತೋತಾಪುರಿ’ ಸಿನಿಮಾದ ಟೀಸರ್‌, ಟ್ರೇಲರ್‌ನಲ್ಲಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಡೈಲಾಗ್ಸ್‌ ನೋಡುಗರಿಗೆ ಕಚಗುಳಿಯಿಡುತ್ತಲೇ ಕೊನೆಯವರೆಗೂ ಕರೆದುಕೊಂಡು ಹೋಗುತ್ತದೆ. ಗಂಭೀರ ವಿಷಯವನ್ನು ಹಾಸ್ಯಮಯ ದೃಶ್ಯಗಳು, ಡೈಲಾಗ್ಸ್‌ ಮತ್ತು ಸಾಂಗ್ಸ್‌ ಮೂಲಕ ಎಂಟರ್‌ಟೈನಿಂಗ್‌ ಆಗಿ ಹೇಳಿರುವುದರಿಂದ, ಥಿಯೇಟರ್‌ನಿಂದ ಹೊರಗೆ ಬರುವಾಗ ಒಂದಷ್ಟು ವಿಷಯಗಳು ಕಾಡುತ್ತಲೇ ಉಳಿದಿರುತ್ತವೆ.

ಸಿನಿಮಾದಲ್ಲಿ ಮಧ್ಯ ವಯಸ್ಸಿನ ಸಾಮಾನ್ಯ ವ್ಯಕ್ತಿಯಾಗಿ ಜಗ್ಗೇಶ್‌, ಮುಸ್ಲಿಂ ಹುಡುಗಿಯಾಗಿ ಅದಿತಿ ಪ್ರಭುದೇವ ಕಾಂಬಿನೇಶನ್‌ ಸ್ಕ್ರೀನ್‌ ಮೇಲೆ ವರ್ಕೌಟ್‌ ಆಗಿದೆ. ವೀಣಾ ಸುಂದರ್‌, ಹೇಮಾದತ್‌ ಪಾತ್ರಗಳು ಅಲ್ಲಲ್ಲಿ ಕಣ್ಣಂಚನ್ನು ಒದ್ದೆ ಮಾಡಿಸಿದರೆ, ಮರುಕ್ಷಣವೇ ಕಚಗುಳಿ ಇಡುವಂತಿದೆ. ಜಗ್ಗೇಶ್‌, ಅದಿತಿ ಪ್ರಭುದೇವ, ವೀಣಾ ಸುಂದರ್‌, ಹೇಮಾದತ್‌ ನಾಲ್ವರು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಗಮನ ಸೆಳೆಯುತ್ತಾರೆ. ಉಳಿದಂತೆ ದತ್ತಣ್ಣ, ಸುಮನ್‌ ರಂಗನಾಥ್‌ ತಮ್ಮ ಪಾತ್ರಗಳಲ್ಲಿ ನೋಡುಗರಿಗೆ ಇಷ್ಟವಾಗುತ್ತಾರೆ.

ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಸಂಕಲನ, ಕಲರಿಂಗ್‌, ಕಲಾ ನಿರ್ದೇಶನ, ಹಿನ್ನೆಲೆ ಸಂಗೀತ ಸಿನಿಮಾವನ್ನು ಪರದೆಯಲ್ಲಿ ಕಲರ್‌ಫ‌ುಲ್‌ ಆಗಿ ಕಾಣುವಂತೆ ಮಾಡುತ್ತದೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯ “ಬಾಗ್ಲು ತೆಗಿ ಮೇರಿ ಜಾನ್‌…’ ಹಾಡು ಥಿಯೇಟರ್‌ನಲ್ಲಿ ಪ್ರೇಕ್ಷಕರನ್ನು ಕೂತಲ್ಲೇ ಹೆಜ್ಜೆ ಹಾಕಿಸುವಂತಿದೆ. ನಗು ನಗುತ್ತಲೇ ಇಡೀ ಸಿನಿಮಾವನ್ನು ಎಂಜಾಯ್‌ ಮಾಡ ಬೇಕೆಂದುಕೊಂಡವರು “ತೋತಾಪುರಿ’ ಸಿನಿಮಾವನ್ನು ಆರಾಮವಾಗಿ ಕಣ್ತುಂಬಿ ಕೊಳ್ಳಬಹುದು

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

8

ಚಿತ್ರದುರ್ಗ: ಬೈಕಿಗೆ ಟ್ಯಾಂಕರ್ ಡಿಕ್ಕಿ; ಮೂವರು ಸ್ಥಳದಲ್ಲೇ ದುರ್ಮರಣ

7

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ: ಒಂದೇ ದಿನದಲ್ಲಿ ಆರೋಪಿ ಪತ್ತೆಗೆ ಎಂ.ಎಲ್.ಸಿ.ಗಳ ಒತ್ತಾಯ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

6

ರಾಜಕೀಯ ದ್ವೇಶ: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು: ಲಕ್ಷಾಂತರ ಮೀನು ಮಾರಣ ಹೋಮ

5

ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ

ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿತ್ರ ವಿಮರ್ಶೆ: ಸದ್ದಿಲ್ಲದೇ ಆವರಿಸಿಕೊಳ್ಳುವ ಪೊಲೀಸ್‌ ವಿಚಾರಣೆ

ಚಿತ್ರ ವಿಮರ್ಶೆ: ಸದ್ದಿಲ್ಲದೇ ಆವರಿಸಿಕೊಳ್ಳುವ ಪೊಲೀಸ್‌ ವಿಚಾರಣೆ

raymo movie review

ಟ್ರೆಂಡಿ ಹುಡ್ಗನ ಪ್ರೀತಿ ಗೀತಿ ಇತ್ಯಾದಿ….: ‘ರೇಮೊ’ ಚಿತ್ರ ವಿಮರ್ಶೆ

triple

‘ತ್ರಿಬಲ್‌ ರೈಡಿಂಗ್‌’ ಚಿತ್ರ ವಿಮರ್ಶೆ: ಫ್ಯಾಮಿಲಿ ಡ್ರಾಮಾದಲ್ಲಿ ಗೋಲ್ಡನ್‌ ರಂಗು

khasagi putagalu

ಚಿತ್ರ ವಿಮರ್ಶೆ: ‘ಖಾಸಗಿ ಪುಟ’ಗಳಲ್ಲಿ ಸೆರೆಯಾದ ಪ್ರೇಮಕಥೆ!

abbara

‘ಅಬ್ಬರ’ ಚಿತ್ರ ವಿಮರ್ಶೆ: ನಾನಾ ಅವತಾರಗಳಲ್ಲಿ ಪ್ರಜ್ವಲ್‌ ಅಬ್ಬರ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

8

ಚಿತ್ರದುರ್ಗ: ಬೈಕಿಗೆ ಟ್ಯಾಂಕರ್ ಡಿಕ್ಕಿ; ಮೂವರು ಸ್ಥಳದಲ್ಲೇ ದುರ್ಮರಣ

7

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ: ಒಂದೇ ದಿನದಲ್ಲಿ ಆರೋಪಿ ಪತ್ತೆಗೆ ಎಂ.ಎಲ್.ಸಿ.ಗಳ ಒತ್ತಾಯ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

6

ರಾಜಕೀಯ ದ್ವೇಶ: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು: ಲಕ್ಷಾಂತರ ಮೀನು ಮಾರಣ ಹೋಮ

5

ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.