‘ವಿಜಯಾನಂದ’ ಚಿತ್ರ ವಿಮರ್ಶೆ: ಸಾಧನೆಯ ಹಿಂದಿನ ಪರಿಶ್ರಮದ ಕಥನ


Team Udayavani, Dec 10, 2022, 1:02 PM IST

vijayanand movie review

ಪ್ರಖ್ಯಾತ ಸಾರಿಗೆ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಗಾಥೆಯನ್ನು ಆಧರಿಸಿದ “ವಿಜಯಾನಂದ’ ಸಿನಿಮಾ ಈ ವಾರ ತೆರೆಗೆ ಬಂದಿದೆ. ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡಿರುವಂತೆ, “ವಿಜಯಾನಂದ’ ಕನ್ನಡದ ಮೊದಲ ಅಧಿಕೃತ ಬಯೋಪಿಕ್‌ ಸಿನಿಮಾ.

1970ರ ದಶಕದಲ್ಲಿ ಒಂದು ಟ್ರಕ್‌ ಮೂಲಕ ಸಾರಿಗೆ ಉದ್ಯಮ ಆರಂಭಿಸಿ, ಇಡೀ ಸಾರಿಗೆ ಉದ್ಯಮವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ವಿಜಯ ಸಂಕೇಶ್ವರ ಅವರ ಜೀವನ ಏಳು-ಬೀಳುಗಳು, ಸಾಧನೆಯ ಚಿತ್ರಣವನ್ನು “ವಿಜಯಾನಂದ’ ಸಿನಿಮಾದಲ್ಲಿ ತೆರೆಮೇಲೆ ತರಲಾಗಿದೆ. ಮುಖ್ಯವಾಗಿ ಯುವಕನಾಗಿ, ಮಧ್ಯಮ ವಯಸ್ಕನಾಗಿ ಮತ್ತು ಸಾಧಕನಾಗಿ ಸಂಕೇಶ್ವರ ಅವರ ಜೀವನದ ಮೂರು ಕಾಲಘಟ್ಟದ ಅನಾವರಣ ಸಿನಿಮಾದಲ್ಲಾಗಿದೆ.

“ವಿಜಯಾನಂದ’ ಒಂದು ಬಯೋಪಿಕ್‌ ಆದರೂ ಅಲ್ಲಲ್ಲಿ ಮೆಲೋಡಿ ಹಾಡುಗಳು, ಆ್ಯಕ್ಷನ್‌, ಕಾಮಿಡಿ, ಎಮೋಶನ್ಸ್‌ ಹೀಗೆ ಒಂದು ಕಮರ್ಷಿಯಲ್‌ ಸಿನಿಮಾದಲ್ಲಿ ಇರಬಹುದಾದ ಎಲ್ಲ ಮನರಂಜನೆಯ ಅಂಶಗಳನ್ನೂ ಸಿನಿಮಾದಲ್ಲಿ ಕಾಣಬಹುದು. ನಮ್ಮ ನಡುವಿನ ಸಾಧನಕನ ಕಥೆಯನ್ನು ಎಲ್ಲೂ ಬೋರ್‌ ಆಗದಂತೆ ವರ್ಣರಂಜಿತವಾಗಿ ತೆರೆಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಸಿನಿಮಾದ ಮೊದಲರ್ಧ ಚಿತ್ರಕಥೆಗೆ ವೇಗ ಸಿಕ್ಕಿದ್ದರೆ, “ವಿಜಯಾನಂದ’ದ ವೇಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದವು.

ಇನ್ನು ಕಲಾವಿದರ ಬಗ್ಗೆ ಹೇಳುವುದಾದರೆ, ನಟ ನಿಹಾಲ್‌ ಸಿನಿಮಾದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವಕನಾಗಿ, ಮಧ್ಯಮ ವಯಸ್ಕನಾಗಿ ಮತ್ತು ಸಾಧಕನಾಗಿ ಮೂರು ವಿಭಿನ್ನ ಗೆಟಪ್‌ನಲ್ಲಿ ಸಂಕೇಶ್ವರ ಪಾತ್ರದಲ್ಲಿ ನಿಹಾಲ್‌ ಅವರದ್ದು ಗಮನ ಸೆಳೆಯುವ ಅಭಿನಯ.

ಉಳಿದಂತೆ ಅನಂತನಾಗ್‌, ಸಿರಿ ಪ್ರಹ್ಲಾದ್‌ ತಮ್ಮ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ಪ್ರತಿ ಪಾತ್ರಗಳಲ್ಲೂ ಪರಿಚಿತ ಕಲಾವಿದರೇ ಕಾಣಿಸಿಕೊಂಡಿದ್ದು, ಬಹುತೇಕರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಗುಣಮಟ್ಟದಲ್ಲಿ ಗಮನ ಸೆಳೆಯುತ್ತದೆ. ಒಂದೆರಡು ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಕಲನ ಕಾರ್ಯ, ಕಲರಿಂಗ್‌, ಬೃಹತ್‌ ಸೆಟ್‌ಗಳು, ಕಾಸ್ಟೂಮ್ಸ್‌ “ವಿಜಯಾನಂದ’ ಸಿನಿಮಾವನ್ನು ತೆರೆಮೇಲೆ ಕಲರ್‌ಫ‌ುಲ್‌ ಆಗಿ ಕಾಣುವಂತೆ ಮಾಡಿವೆ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

STREET DG

ಬೀದಿ ನಾಯಿಗಳಿಗೆ “ಡಂಪಿಂಗ್‌ ಯಾರ್ಡ್‌ʼ ಆಶ್ರಯತಾಣ !

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

helipad

ಮೊಟೆತ್ತಡ್ಕದ ಎನ್‌ಆರ್‌ಸಿಸಿ ಮುಂಭಾಗ ಶಾಶ್ವತ ಹೆಲಿಪ್ಯಾಡ್‌ ನಿರ್ಮಾಣ

Mallikarjun Kharge wears Louis Vuitton Scarf Worth Rs 56,332

56,332 ರೂ ಬೆಲೆಯ ಶಾಲು ಧರಿಸಿದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಟೀಕೆ

add-thumb-2

ಕಲಿಕೆಯ “ಜಂಬೋ” ಅವಕಾಶ: ಪೋದಾರ್‌ ಲರ್ನ್ ಸ್ಕೂಲ್‌

ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ

ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ: ಟೀಂ ಇಂಡಿಯಾಗೆ ಇಬ್ಬರು ಪದಾರ್ಪಣೆ

add-thumb-1

ಕಲಘಟಗಿ ಪೊಲೀಸ್‌ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿತ್ರ ವಿಮರ್ಶೆ: ‘ನಟ’ನ ಜೊತೆ ದೆವ್ವದ ‘ಭಯಂಕರ’ ಆಟ

ಚಿತ್ರ ವಿಮರ್ಶೆ: ‘ನಟ’ನ ಜೊತೆ ದೆವ್ವದ ‘ಭಯಂಕರ’ ಆಟ

Tanuja

ಅಡೆತಡೆಗಳ ದಾಟಿ ಗೆದ್ದ ‘ತನುಜಾ’

viragi

ವಿರಾಟಪುರ ವಿರಾಗಿ ಚಿತ್ರ ವಿಮರ್ಶೆ: ವಿರಾಗಿಯ ಬದುಕಿನ ಮೇಲೊಂದು ಬೆಳಕು

Kannada movie thugs of ramaghada review

‘ಥಗ್ಸ್ ಆಫ್ ರಾಮಘಡ’ ಚಿತ್ರ ವಿಮರ್ಶೆ: ರಾಮಘಡದಲ್ಲಿ ಕರ್ಮಫ‌ಲ ಪ್ರಾಪ್ತಿ!

balaji photo studio kannada movie

‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರ ವಿಮರ್ಶೆ: ಫ್ರೇಮ್‌ನೊಳಗೆ ಸೆರೆಯಾದ ಪುಟ್ಟ ಬದುಕು

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

STREET DG

ಬೀದಿ ನಾಯಿಗಳಿಗೆ “ಡಂಪಿಂಗ್‌ ಯಾರ್ಡ್‌ʼ ಆಶ್ರಯತಾಣ !

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

helipad

ಮೊಟೆತ್ತಡ್ಕದ ಎನ್‌ಆರ್‌ಸಿಸಿ ಮುಂಭಾಗ ಶಾಶ್ವತ ಹೆಲಿಪ್ಯಾಡ್‌ ನಿರ್ಮಾಣ

Mallikarjun Kharge wears Louis Vuitton Scarf Worth Rs 56,332

56,332 ರೂ ಬೆಲೆಯ ಶಾಲು ಧರಿಸಿದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಟೀಕೆ

add-thumb-2

ಕಲಿಕೆಯ “ಜಂಬೋ” ಅವಕಾಶ: ಪೋದಾರ್‌ ಲರ್ನ್ ಸ್ಕೂಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.