

Team Udayavani, Jun 22, 2024, 3:16 PM IST
ಮುಂಬಯಿ: ಹಿಂದಿ ಬಿಗ್ ಬಾಸ್ ಓಟಿಟಿಯ ಮೂರನೇ ಸೀಸನ್ ಆರಂಭವಾಗಿದೆ. ವಿವಿಧ ಕ್ಷೇತ್ರದಿಂದ ಬಂದಿರುವ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.
ಹೈದರಾಬಾದ್ ಮೂಲದ ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ತನ್ನ ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಿದ್ದಾರೆ. ಇಬ್ಬರು ಪತ್ನಿಯರನ್ನು ಹೊಂದಿರುವ ಅರ್ಮಾನ್ ಮಲಿಕ್ ಯಾರು ಅವರ ಹಿನ್ನೆಲೆ ಏನು? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..
ಅರ್ಮಾನ್ ಮಲಿಕ್ ಒಬ್ಬ ಯೂಟ್ಯೂಬರ್ ಅವರು, ಫ್ಯಾಮಿಲಿ ಫಿಟ್ನೆಸ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಲಕ್ಷಂತಾರ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದಿದ್ದಾರೆ. ಇಬ್ಬರೊಂದಿಗೂ ಅನೋನ್ಯವಾಗಿಯೇ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ.
2022ರ ಡಿಸೆಂಬರ್‌ನಲ್ಲಿ ತನ್ನ ಇಬ್ಬರು ಪತ್ನಿಯರು ಗರ್ಭಿಣಿ ಆಗಿದ್ದಾರೆ ಎನ್ನುವ ಪೋಸ್ಟ್ ಹಂಚಿಕೊಂಡ ಬಳಿಕ ಅರ್ಮಾನ್ ಟ್ರೋಲ್ ಆಗಿದ್ದರು. ಅನೇಕರು ಅವರ ಸಂಬಂಧದ ಬಗ್ಗೆ ಕೀಳಾಗಿ ಮಾತನಾಡಿದ್ದರು. ಆದರೆ ಅದ್ಯಾವುದಕ್ಕೂ ಅರ್ಮಾನ್ ತೆಲೆಕೆಡಿಸಿಕೊಂಡಿರಲಿಲ್ಲ.
ಇದನ್ನೂ ಓದಿ: Bigg Boss OTT: ಓಟಿಟಿಯಲ್ಲಿ ಶುರುವಾಯಿತು ಮಿನಿ ಬಿಗ್ ಬಾಸ್; ಇಲ್ಲಿದೆ ಸ್ಪರ್ಧಿಗಳ ವಿವರ
2011ರಲ್ಲಿ ಖಾಸಗಿ ಬ್ಯಾಂಕ್ ವೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಅರ್ಮಾನ್, ಅದೇ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್ ಅವರೊಂದಿಗೆ ಪರಿಚಯವಾಗಿ ಪ್ರೀತಿಸಲು ಶುರು ಮಾಡುತ್ತಾರೆ. ಕೆಲ ಸಮಯದ ಬಳಿಕ ಕೋರ್ಟಿನಲ್ಲಿ ಅರ್ಮಾನ್ – ಪಾಯಲ್ ಮದುವೆ ಆಗುತ್ತಾರೆ. ಈ ದಂಪತಿಗೆ ಚಿರಾಯ್ ಎಂಬ ಮಗ ಹುಟ್ಟುತ್ತಾನೆ.
2018 ರಲ್ಲಿ ಅರ್ಮಾನ್ ಗೆ ಪಾಯಲ್ ಅವರ ಸ್ನೇಹಿತೆಯಾಗಿದ್ದ ಕೃತಿಕಾ ಎನ್ನುವಾಕೆಯ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗುತ್ತದೆ. ಈ ವಿಚಾರವನ್ನು ಅರ್ಮಾನ್ ಪಾಯಲ್ ಗೆ ಹೇಳುತ್ತಾರೆ. ಮೊದಲ ಪತ್ನಿಯ ಸಮ್ಮುಖದಲ್ಲೇ ಅರ್ಮಾನ್ ಖುಷಿಯಿಂದಲೇ ಕೃತಿಕಾ ಅವರನ್ನು ವಿವಾಹವಾಗುತ್ತಾರೆ. ಆದರೆ ಪಾಯಲ್ ಅವರನ್ನು ಆಕೆಯ ಕುಟುಂಬ ಅರ್ಮಾನ್ ಅವರಿಂದ ಬಲವಂತವಾಗಿ ದೂರ ಮಾಡುತ್ತಾರೆ.
ಇದಾದ ಕೆಲ ಸಮಯದಲ್ಲಿ ಅರ್ಮಾನ್ ಖಿನ್ನತೆಗೆ ಜಾರುತ್ತಾರೆ. ಅತ್ತ ಪಾಯಲ್‌ಗೆ ಆಕೆಯ ಮನೆಯವರು ಸಣ್ಣ ಕೋಣೆಯಲ್ಲಿ ಕೂಡಿಟ್ಟು ಹಿಂಸೆ ನೀಡಲು ಶುರು ಮಾಡುತ್ತಾರೆ. ಬೇರೆ ಮದುವೆ ಆಗುವಂತೆ ಬಲವಂತ ಮಾಡುತ್ತಾರೆ. ಆದರೆ ಪಾಯಲ್ ಅರ್ಮಾನ್ ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟು ಜಾಸ್ತಿ ಸಮಯ ಇರಲು ಸಾಧ್ಯವಾಗುವುದಿಲ್ಲ. ಪಾಯಲ್ ತನ್ನ ಮನೆಯವರನ್ನು ಬಿಟ್ಟು ಅರ್ಮಾನ್ ಜೊತೆ ಬರುತ್ತಾಳೆ. ಅರ್ಮಾನ್ ಪಾಯಲ್, ಕೃತಿಕಾ ಅವರೊಂದಿಗೆ ಖುಷಿಯಲ್ಲೇ ಜೀವನ ನಡೆಸುತ್ತಾರೆ.
ಅರ್ಮಾನ್ ತನ್ನ ಪತ್ನಿಯರಾದ ಪಾಯಲ್ ಹಾಗೂ ಕೃತಿಕಾ ಇಬ್ಬರು ತಾಯಿಯಾಗುತ್ತಿದ್ದಾರೆ ಎನ್ನುವ ಫೋಟೋವನ್ನು ಹಂಚಿಕೊಂಡು ʼಮೈ ಫ್ಯಾಮಿಲಿʼ ಎಂದು ಬರೆದುಕೊಂಡು ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದರು. ಆ ಫೋಟೋ ವೈರಲ್ ಆಗುವುದರ ಜೊತೆ ಅರ್ಮಾನ್ ಲವ್ ಸ್ಟೋರಿ ಕೂಡ ಹೊರ ಜಗತ್ತಿಗೆ ತಿಳಿಯುತ್ತದೆ.
ಯೂಟ್ಯೂಬರ್ ಹಾಗೂ ವ್ಲಾಗರ್ ಆಗಿರುವ ಅರ್ಮಾನ್ 14 ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬರ್ಸ್‌ನ್ನು ಹೊಂದಿದ್ದಾರೆ. ಯೂಟ್ಯೂಬ್ ನಿಂದಲೇ ಇವರು ಕೋಟಿಗಟ್ಟಲೆ ಆದಾಯವನ್ನು ಗಳಿಸುತ್ತಿದ್ದಾರೆ.
Ad
ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಟಿವಿಗಿಂತ ಒಟಿಟಿಯಲ್ಲಿ ಮೊದಲು ಪ್ರಸಾರ ಕಾಣಲಿದೆ ʼBigg Bossʼ: ಈ ಬಾರಿ ಮೂವರು ನಿರೂಪಕರು?
Smriti Irani: ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ʼತುಳಸಿʼ ಪಾತ್ರದ ಫಸ್ಟ್ ಲುಕ್ ಔಟ್
Bigg Boss: ಸಾಮಾನ್ಯರಿಗೆ ಬಿಗ್ ಬಾಸ್ ಮನೆಗೆ ಅವಕಾಶ: ಲಕ್ಷಕ್ಕೂ ಅಧಿಕ ಮಂದಿಯಿಂದ ಅರ್ಜಿ
Zee Kannada: ‘ವಿಧಿ’ಯಾಟದ ವಿರುದ್ಧ ‘ಪ್ರೀತಿ’ಯ ಹೋರಾಟ; ಬರ್ತಿದೆ ಹೊಸ ಧಾರಾವಾಹಿ ‘ಕರ್ಣ
You seem to have an Ad Blocker on.
To continue reading, please turn it off or whitelist Udayavani.