Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Team Udayavani, Sep 19, 2024, 1:34 PM IST
ಚೆನ್ನೈ: ಕಾಲಿವುಡ್ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ (Lokesh Kanagaraj ಅವರ ʼಕೂಲಿʼ (Coolie) ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಸೇರಿದಂತೆ ಸಿನಿಮಾದಲ್ಲಿ ಮಲ್ಟಿಸ್ಟಾರ್ಸ್ ಗಳಿರುವ ಕಾರಣದಿಂದ ʼಕೂಲಿʼ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಸಿನಿಮಾ ಅನೌನ್ಸ್ ಆದ ದಿನದಿಂದ ಇದುವರೆಗೆ ಸಿನಿಮಾದಲ್ಲಿನ ಪಾತ್ರದ ಪರಿಚಯವನ್ನು ಮಾಡುತ್ತಾ ʼಕೂಲಿʼ ಮೇಲಿನ ಕುತೂಹಲವನ್ನು ಚಿತ್ರತಂಡ ಹೆಚ್ಚಾಗಿಸಿದೆ. ಇತ್ತೀಚಗೆ ನಟ ಉಪೇಂದ್ರ (Upendra), ಮಾಲಿವುಡ್ ನಟ ಸೌಬಿನ್ ಶಾಹಿರ್ (Soubin Shahir), ಟಾಲಿವುಡ್ ʼಕಿಂಗ್ʼ ನಾಗಾರ್ಜುನ್ (Akkineni Nagarjuna) ಅವರ ಪಾತ್ರದ ಲುಕ್ ರಿವೀಲ್ ಆಗಿತ್ತು.
ಯಾವುದೇ ಒಂದು ದೊಡ್ಡ ಪ್ರಾಜೆಕ್ಟ್ ಶೂಟಿಂಗ್ ಹಂತದಲ್ಲಿದ್ದಾಗ, ಆ ಸೆಟ್‌ನಿಂದ ಒಂದಷ್ಟು ಫೋಟೋ ಹಾಗೂ ವಿಡಿಯೋಗಳು ಕೆಲವೊಮ್ಮೆ ಲೀಕ್ ಆಗುತ್ತವೆ. ಇದರಿಂದ ಆ ಚಿತ್ರದ ನಿರ್ದೇಶಕನಿಗೆ ಬೇಸರವಾಗುವುದು ಸಹಜ. ಇದೇ ರೀತಿಯ ಬೇಸರ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಆಗಿದ್ದು, ಈ ಕುರಿತು ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನ
Two months of hard work by many people have gone in vain because of one recording.
I humbly request everyone not to engage in such practices, as they spoil the overall experience. Thank you.
— Lokesh Kanagaraj (@Dir_Lokesh) September 18, 2024
ಕಾಲಿನ ಮೇಲೆ ಕಾಲು ಹಾಕಿಕೊಂಡು ಗೋಲ್ಡ್ ಕಲರ್ ವಾಚ್ ಧರಿಸಿರುವ ಕ್ಲಾಸ್ ಲುಕ್ ನಲ್ಲಿ ನಾಗಾರ್ಜುನ್ ಕಾಣಿಸಿಕೊಂಡಿರುವ ʼಸೈಮನ್ʼ ಲುಕ್ ಇತ್ತೀಚೆಗೆ ರಿವೀಲ್ ಆಗಿತ್ತು. ಈ ಪಾತ್ರದ ಮಾಸ್ ಸೀನ್ ವೊಂದು ಶೂಟ್ ಆಗುತ್ತಿದ್ದ ವೇಳೆ ಯಾರೋ ಒಬ್ಬರು ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಇಂಟರ್ ನೆಟ್ ನಲ್ಲಿ ಹರಿದು ಬಿಟ್ಟಿದ್ದಾರೆ.
ನಾಗಾರ್ಜುನ್ ಅವರ ಸುತ್ತಿಗೆಯಿಂದ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ದೃಶ್ಯದ ಶೂಟ್ ಆಗುತ್ತಿತ್ತು. ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ. ಇದು ನಿರ್ದೇಶಕ ಲೋಕೇಶ್ ಅವರ ಗಮನಕ್ಕೆ ಬಂದಿದ್ದು, ಅವರು ಅಸಮಾಧಾನವನ್ನು ಹೊರ ಹಾಕಿದ್ದಾರೆ.
“ಒಂದು ರೆಕಾರ್ಡಿಂಗ್‌ನಿಂದಾಗಿ ಅನೇಕ ಜನರ ಎರಡು ತಿಂಗಳ ಶ್ರಮ ವ್ಯರ್ಥವಾಯಿತು. ಈ ರೀತಿ ಶ್ರಮವನ್ನು ಹಾಳು ಮಾಡುವ ಅಭ್ಯಾಸವನ್ನು ಯಾರು ಇಟ್ಟುಕೊಳ್ಳಬೇಡಿ ಎಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ ಎಂದು” ಲೋಕೇಶ್ ʼಎಕ್ಸ್ʼನಲ್ಲಿ ಬರೆದುಕೊಂಡಿದ್ದಾರೆ.
ಬಹು ನಿರೀಕ್ಷಿತ ʼಕೂಲಿʼಯಲ್ಲಿ ರಜಿನಿಕಾಂತ್, ನಾಗಾರ್ಜುನ್, ಸೌಬಿನ್, ಉಪೇಂದ್ರ ಜತೆ ಸತ್ಯರಾಜ್ (Satyaraj) ಮತ್ತು ಶ್ರುತಿ ಹಾಸನ್ (Shruti Haasan) ಕೂಡಾ ಸಿನಿಮಾದ ಭಾಗವಾಗಲಿದ್ದಾರೆ. ಇದರೊಂದಿಗೆ ಕನ್ನಡದ ರಚಿತಾ ರಾಮ್ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಇದು ಇನ್ನಷ್ಟೇ ಅಧಿಕೃತವಾಗಬೇಕಿದೆ.
ಸದ್ಯ ರಜಿನಿಕಾಂತ್ ಅವರ ʼವೆಟ್ಟೈಯನ್ ʼ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಬಳಿಕ ಅವರು ʼಕೂಲಿʼಯಲ್ಲಿ ತೊಡಗಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ
Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್ ವಿಧಿವಶ; ಗಣ್ಯರ ಸಂತಾಪ
Vettaiyan: ರಿಲೀಸ್‌ಗೂ ಮುನ್ನ ʼಗೋಟ್ʼ ದಾಖಲೆ ಮೀರಿಸಿದ ರಜಿನಿಕಾಂತ್ ʼವೆಟ್ಟೈಯನ್ʼ
Bigg Boss Tamil 8: ಬಿಗ್ ಬಾಸ್ ಮನೆಗೆ ಬಂದು 24 ಗಂಟೆಯೊಳಗೆ ಎಲಿಮಿನೇಟ್ ಆದ ನಟಿ
Jani Master: ಲೈಂಗಿಕ ಕಿರುಕುಳ ಕೇಸು; ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಪ್ರಶಸ್ತಿ ರದ್ದು!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.