ಕೋವಿಡ್ ನಿಗ್ರಹಿಸಲಿದೆಯೇ ಆ್ಯಂಟಿ-ಹೈಪರ್ಟೆನ್ಸಿವ್ ಔಷಧ
ರೋಗಿಗಳು ಕೋವಿಡ್ ಸೋಂಕಿನಿಂದ ತೀವ್ರ ಅಪಾಯವನ್ನು ಹೊಂದಿರುತ್ತಾರೆ ಎಂದು ತಿಳಿದಿದ್ದೆವು.
Team Udayavani, Aug 26, 2020, 9:57 AM IST
ಬ್ರಿಟನ್: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ನೀಡುವ ಔಷಧವು ಕೋವಿಡ್ ಸೋಂಕಿನಿಂದ ಬಳಲುತ್ತಿರುವವರನ್ನು ಗುಣಮುಖಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದು, ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಲಂಡನ್‌ನ ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಳಸುವ ಆ್ಯಂಟಿ-ಹೈಪರ್ಟೆನ್ಸಿವ್ ಔಷಧ ತೆಗೆದುಕೊಳ್ಳುವ ಸುಮಾರು 28 ಸಾವಿರ ಸೋಂಕಿತರ ಮೇಲೆ ಅಧ್ಯಯನ ನಡೆಸಿದ್ದು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧ ತೆಗೆದುಕೊಳ್ಳುವ ಸೋಂಕಿತರಲ್ಲಿ ಆರೋಗ್ಯ ಹದಗೆಡುವ ಮತ್ತು ಸಾವಿನ ಪ್ರಮಾಣವು ಕಡಿಮೆಯಾಗಿರುತ್ತದೆ ಎಂದು ತಿಳಿದು ಬಂದಿದೆ.
ಅದರಲ್ಲೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ಸೋಂಕನ್ನು ನಿಯಂತ್ರಿಸಲು ಈ ಔಷಧಗಳು ಪರಿಣಾಮಕಾರಿಯಾಗಿದ್ದು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್ ಸೋಂಕಿನಿಂದ ತೀವ್ರ ಅಪಾಯವನ್ನು ಹೊಂದಿರುತ್ತಾರೆ ಎಂದು ತಿಳಿದಿದ್ದೆವು. ಸೋಂಕಿನ ಆರಂಭದ ದಿನಗಳಲ್ಲಿ, ಅಧಿಕ ರಕ್ತದೊತ್ತಡದ ರೋಗಿಗಳಿಗೆ ನೀಡುವ ನಿರ್ದಿಷ್ಟವಾದ ಔಷಧವು ಕೆಟ್ಟ ಪರಿಣಾಮ ಬೀರಬಹುದೆಂಬ ಆತಂಕವಿತ್ತು ಎಂದು ಯುಇಎನ ನಾರ್ವಿಚ್ ವೈದ್ಯಕೀಯ ಶಾಲೆಯ ಸಂಶೋಧಕ ವಾಸಿಲಿಯೊಸ್ ವಾಸ್ಸಿಲಿಯೌ ಹೇಳಿದ್ದಾರೆ.
ಮೂರನೇ ಒಂದು ಭಾಗದಷ್ಟು ಕೋವಿಡ್ ಸೋಂಕಿತರು ಆ್ಯಂಟಿ-ಹೈಪರ್ಟೆನ್ಸಿವ್ ಔಷಧವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಕಂಡುಕೊಂಡಿದ್ದೇವು. ಹೃದಯ ಸಂಬಂಧಿ, ಮಧುಮೇಹ ಸಮಸ್ಯೆಯಿಂದ ಬಳಲು ತ್ತಿರುವವರಲ್ಲಿ ಸೋಂಕಿನ ಅಪಾಯ ಹೆಚ್ಚ ಬಹುದೆಂದು ತಿಳಿದಿದ್ದೇವು. ಆದರೆ, ತುಂಬಾ ಮುಖ್ಯವಾದ ಸಂಗತಿ ಎಂದರೆ ಕೋವಿಡ್-19 ಸೋಂಕಿತರ ಮೇಲೆ ಈ ಔಷಧವು ದುಷ್ಪ ರಿಣಾಮ ಉಂಟುಮಾಡಿದೆ ಅಥವಾ ಸಾವಿಗೆ ಕಾರಣವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದು’ ಎಂದವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದಲ್ಲಿ 24ಗಂಟೆಯಲ್ಲಿ 2,628 ಕೋವಿಡ್ ಪ್ರಕರಣ ದೃಢ, 18 ಮಂದಿ ಸಾವು
ಭಾರತದಲ್ಲಿ 24ಗಂಟೆಯಲ್ಲಿ 1,675 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಅಲ್ಪ ಏರಿಕೆ
ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು
ಭಾರತದಲ್ಲಿ 24ಗಂಟೆಯಲ್ಲಿ 2,323 ಕೋವಿಡ್ 19 ಸೋಂಕು ಪ್ರಕರಣ ದೃಢ, 25 ಮಂದಿ ಸಾವು
ಭಾರತದಲ್ಲಿ 24 ಗಂಟೆಯಲ್ಲಿ 2,259 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ 15,044ಕ್ಕೆ ಇಳಿಕೆ