ಕೋವಿಡ್ 2ನೇ ಅಲೆ ಹರಡಲು ಚುನಾವಣಾ ಆಯೋಗವೇ ಹೊಣೆ: ಮದ್ರಾಸ್ ಹೈಕೋರ್ಟ್
ಚುನಾವಣಾ ಆಯೋಗ ಗುರುತರ ಹೊಣೆಗಾರಿಕೆಯ ಸಂಸ್ಥೆಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
Team Udayavani, Apr 26, 2021, 4:39 PM IST
ಚೆನ್ನೈ:ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವುದರ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಸೋಮವಾರ (ಏಪ್ರಿಲ್ 26) ಆಕ್ರೋಶವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ದೇಶದಲ್ಲಿ ಎರಡನೇ ಕೋವಿಡ್ ಅಲೆ ಹೆಚ್ಚಳವಾಗಲು ಚುನಾವಣಾ ಆಯೋಗ ಹೊಣೆ. ಇದಕ್ಕಾಗಿ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದಾಗಿದೆ ಎಂದು ಚಾಟಿ ಬೀಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಲಾಕ್ ಡೌನ್ : ತವರೂರಿನತ್ತ ಮುಖ ಮಾಡಿದ ವಲಸೆ ಕಾರ್ಮಿಕರು
ದೇಶದಲ್ಲಿ ಕೋವಿಡ್ ಎರಡನೇ ಅಲೆ ಹಬ್ಬುತ್ತಿರುವ ನಡುವೆಯ ರಾಜಕೀಯ ಪಕ್ಷಗಳ ಸಭೆ, ರಾಲಿ ನಡೆಸಲು ಅನುಮತಿ ನೀಡಿದ್ದು, ಇದಕ್ಕಾಗಿ ಚುನಾವಣಾಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದಾಗಿದೆ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ.
ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ಜಸ್ಟೀಸ್ ಸೆಂಥಿಲ್ ಕುಮಾರ್ ರಾಮಮೂರ್ತಿ ನೇತೃತ್ವದ ಪೀಠ, ಚುನಾವಣಾ ಆಯೋಗ ಗುರುತರ ಹೊಣೆಗಾರಿಕೆಯ ಸಂಸ್ಥೆಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಳವಾಗಲು ನಿಮ್ಮ ಆಯೋಗವೇ(ಚುನಾವಣಾ) ಏಕೈಕ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ ಎಂದು ಜಸ್ಟೀಸ್ ಬ್ಯಾನರ್ಜಿ ಚುನಾವಣಾ ಆಯೋಗದ ಪರ ವಕೀಲರಿಗೆ ತಿಳಿಸಿರುವುದಾಗಿ ವರದಿ ಹೇಳಿದೆ.
ಚುನಾವಣಾ ರಾಲಿಗಳು ನಡೆಯುವ ಸಂದರ್ಭದಲ್ಲಿ ನೀವು ಅನ್ಯಗ್ರಹದಲ್ಲಿದ್ದೀರಾ ಎಂದು ಚೀಫ್ ಜಸ್ಟೀಸ್ ಬ್ಯಾನರ್ಜಿ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದಲ್ಲಿ 24 ಗಂಟೆಯಲ್ಲಿ 17,092 ಕೋವಿಡ್ ಪ್ರಕರಣ ದೃಢ, 29 ಮಂದಿ ಸಾವು
ಭಾರತದಲ್ಲಿ 24ಗಂಟೆಯಲ್ಲಿ 17,070 ಕೋವಿಡ್ ಪ್ರಕರಣ ದೃಢ, 23 ಮಂದಿ ಸಾವು
ಕೋವಿಡ್ ಸಂಖ್ಯೆ ಹೆಚ್ಚಳ:24ಗಂಟೆಯಲ್ಲಿ 18,000 ಪ್ರಕರಣ ದೃಢ, ಲಕ್ಷದ ಗಡಿ ದಾಟಿದ ಸಕ್ರಿಯ ಕೇಸ್
ಭಾರತದಲ್ಲಿ 24ಗಂಟೆಯಲ್ಲಿ 14,506 ಕೋವಿಡ್ ಪ್ರಕರಣ ದೃಢ; ಸಕ್ರಿಯ ಪ್ರಕರಣ ಹೆಚ್ಚಳ
ಭಾರತದಲ್ಲಿ 24ಗಂಟೆಯಲ್ಲಿ 11,703 ಕೋವಿಡ್ ಪ್ರಕರಣ ದೃಢ; ಲಕ್ಷದ ಸನಿಹಕ್ಕೆ ಸಕ್ರಿಯ ಪ್ರಕರಣ