ಕಾನೂನು ನೆರವಿನ ಸದುಪಯೋಗಕ್ಕೆ ಸಲಹೆ

Team Udayavani, May 9, 2019, 12:06 PM IST

bag-3

ಹುನಗುಂದ: ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಮತ್ತು ಉಚಿತ ಕಾನೂನು ನೆರವು ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಂಡು ತಮ್ಮ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಪ್ರಧಾನ ದಿವಾಣಿ ನ್ಯಾಯಾಧೀಶ ಬಿ.ಮೋಹನಬಾಬು ಹೇಳಿದರು.

ಪಟ್ಟಣದ ನಾಗಲಿಂಗ ನಗರದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿ, ಹುನಗುಂದ ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ಹಾಗೂ ಬರ್ಡ್ಸ್‌ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವದಲ್ಲಿ ಮಾನವಕುಲವು ಸುಖದಿಂದ ಜೀವನ ಸಾಗಿಸಲು ಕಾರ್ಮಿಕರ ಶ್ರಮ ಶ್ಲಾಘನೀಯ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ವಲಯವು ಯಾವುದೇ ಫಲಾಪೇಕ್ಷವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಅಂಥ ವರ್ಗವನ್ನು ಸಮಾಜದಲ್ಲಿ ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಕಾರ್ಮಿರ ಮೇಲೆ ಹಲ್ಲೆ, ಅನ್ಯಾಯವಾದಾಗ ತಾಲೂಕು ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ನೆರವು ಪಡೆದುಕೊಳ್ಳಬೇಕು. ಬಾಲ್ಯ ವಿವಾಹ ಮತ್ತು ಬಾಲ್ಯ ಕಾರ್ಮಿಕ ಪದ್ಧತಿಯನ್ನು ನಿಷೇಧಿಸಿದ್ದು ಅದನ್ನು ಆಚರಿಸುವುದು ಕಾನೂನು ವಿರೋಧಿ ಚಟುವಟಿಕೆಯಾಗುತ್ತದೆ. ಅಸಂಘಟಿತ ಕಾರ್ಮಿಕರಿಗೆ ವಿಶೇಷವಾಗಿ ಜೀವ ವಿಮೆ ಮತ್ತು ಆನ್‌ಲೈನ್‌ ಮೂಲಕ ಕಾರ್ಮಿಕರು ನೋಂದಣಿ ಮಾಡಿದರೆ 60 ವರ್ಷದ ನಂತರ ಸರ್ಕಾರದ ಪಿಂಚಣಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಬರ್ಡ್ಸ್‌ ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಮಾತನಾಡಿ, ಕಾರ್ಮಿಕರನ್ನು ಹೀನಾಯವಾಗಿ ದುಡಿಸಿಕೊಳ್ಳುವರ ವಿರುದ್ಧ ಸಂಘಟಿತ ಹೋರಾಟ ಮಾಡಿದ್ದರ ಫಲವಾಗಿ ಇಂದು ಕಾರ್ಮಿಕರ ಅನಿಯಮಿತ ಕೆಲಸದ ಅವಧಿ ಕೇವಲ 8 ಗಂಟೆಗೆ ಸೀಮಿತವಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಪದ್ಧತಿ ಜಾರಿಯಾಗಿದ್ದು ಉಚಿತ ಆರೋಗ್ಯ ಸೇವೆ, ರಜೆ, ಕಾರ್ಮಿರ ಕಲ್ಯಾಣ ನಿಧಿಯಿಂದ ಹಣಕಾಸಿನ ನೆರವು, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಲ ಸೌಲಭ್ಯ, ಹೆರಿಗೆ ಭತ್ಯೆ, ಪಿಂಚಣಿ ಸೌಲಭ್ಯ ಮತ್ತು ಆಕಸ್ಮಿಕವಾಗಿ ಕಾರ್ಮಿಕರು ನಿಧನ ಹೊಂದಿದಾಗ ಅವರ ಅವಲಂಬಿತ ಕುಟುಂಬಕ್ಕೆ 5 ಲಕ್ಷದವರೆಗೆ ಸಹಾಯ ಧನವನ್ನು ನೀಡುತ್ತಿದ್ದು ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ಕಾರ್ಮಿಕರ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕಾರ್ಮಿಕರ ನಿರಂತರ ಸೇವೆ ಪರಿಗಣಿಸಿ ಇನಾಂ ಕಡಿವಾಲ ಗ್ರಾಮದ ನಾಗಪ್ಪ ಮಲ್ಲಡದ, ಅಮರವಾಡಗಿಯ ಬಸಮ್ಮ ಮಾದರ, ಹುನಗುಂದದ ಸಂಗಪ್ಪ ವಿ.ಉಪ್ಪಿನ ಮತ್ತು ಬೀಬಿಜಾನ ನದಾಫ್‌ ಅವರನ್ನು ಬರ್ಡ್ಸ್‌ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಟಾಪ್ ನ್ಯೂಸ್

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.