ಸಂಕಷ್ಟದಲ್ಲಿ ಸ್ಪಂದಿಸಿದ ಕಾಮಧೇನು ಗೆಳೆಯರು!

Team Udayavani, May 7, 2021, 10:25 PM IST

7-11

ಬಾಗಲಕೋಟೆ: ಕೊರೊನಾ 2ನೇ ಅಲೆ ದಿನೇ ದಿನೇ ಹೆಚ್ಚುತ್ತಿದ್ದು, ಹಲವರಿಗೆ ಹಲವು ರೀತಿಯ ಸಮಸ್ಯೆ ತಂದೊಡ್ಡುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಗರದ ಸಮಾನ ಮನಸ್ಕರ ಗೆಳೆಯರು ಕೂಡಿಕೊಂಡು, ಕಾಮಧೇನು ಸಂಸ್ಥೆಯ ಮೂಲಕ ಸಂಕಷ್ಟದಲ್ಲಿರುವ ಜನರ ಬಳಿಗೆ ಹೋಗಿ ಊಟದ ಪೊಟ್ಟಣ ನೀಡುವ ಸೇವಾ ಕಾರ್ಯ ಮಾಡುತ್ತಿದ್ದಾರೆ.

ಹೌದು, ನಗರದಲ್ಲಿ ಕೊರೊನಾ 2ನೇ ಅಲೆಯಿಂದ ಬಡವರು, ಶ್ರೀಮಂತರು, ನಿರ್ಗತಿಕರು ಎನ್ನದೇ ಪ್ರತಿಯೊಬ್ಬರೂ ಒಂದೊಂದು ರೀತಿ ಸಂಕಷ್ಟ ಎದುರಿಸುತ್ತಿದ್ದಾರೆ. ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಅವರೊಂದಿಗೆ ಬಂದಿರುವ ಸಂಬಂಧಿಕರು, ಮಿತ್ರರು, ಆಸ್ಪತ್ರೆಯ ಹೊರಗೆ ಊಟ, ನೀರು ಸಿಗದೇ ಪರದಾಡುವಂತಹ ಪರಿಸ್ಥಿತಿ ಇದೆ. ಅಂತಹ ಸಂಕಷ್ಟದಲ್ಲಿ ಇರುವ ಜನರಿಗೆ ಊಟ, ನೀರು ಒದಗಿಸುವ ನಿಟ್ಟಿನಲ್ಲಿ ಬಾಗಲಕೋಟೆ ನಗರದ ಗೆಳೆಯರ ತಂಡ, ಗುರುವಾರದಿಂದ ಅನ್ನ-ಆಹಾರ ನೀಡುವ ಔದಾರ್ಯದ ಕಾರ್ಯ ನಡೆಸಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೊದಲ ದಿನವೇ 260 ಜನರಿಗೆ ನೆರವು: ನಗರ, ನವನಗರ, ವಿದ್ಯಾಗಿರಿ ಮುಂತಾದೆಡೆ ರಸ್ತೆ ಬದಿಯಲ್ಲಿರುವ ನಿರ್ಗತಿಕರು, ಜಿಲ್ಲಾ ಕೋವಿಡ್‌ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಎದುರು ಇರುವ ಸೋಂಕಿತರ ಸಂಬಂಧಿಕರು, ಬಸ್‌ ನಿಲ್ದಾಣ ಮುಂತಾದೆಡೆ ನೀರು, ಅನ್ನಕ್ಕಾಗಿ ಪರದಾಡುವಂತಹ ಜನರನ್ನು ಹುಡುಕಿ, ಅವರಿದ್ದಲ್ಲಿಗೆ ಹೋಗಿ ಊಟದ ಪೊಟ್ಟಣ, ನೀರು ಪೂರೈಕೆ ಕಾರ್ಯ ಗುರುವಾರದಿಂದ ಆರಂಭಗೊಂಡಿದೆ. ಕಾಮಧೇನು ಸಂಸ್ಥೆಯ ಮೂಲಕ ಈ ಕಾರ್ಯ ನಡೆದಿದ್ದು, ಕೊರೊನಾ ಕರ್ಫ್ಯೂ ವೇಳೆ ಸಂಕಷ್ಟದಲ್ಲಿರುವ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಈ ಸೇವಾ ಕಾರ್ಯ ಆರಂಭವಾದ ಮೊದಲ ದಿನವೇ 260ಕ್ಕೂ ಹೆಚ್ಚು ಜನರಿಗೆ ಊಟ, ನೀರು ತಲುಪಿಸಿದ್ದು, ಸೇವಾ ಕಾರ್ಯದಲ್ಲಿ ತೊಡಗಿರುವವರಿಗೂ ಒಂದು ರೀತಿಯ ಸೇವೆಯ ನೆಮ್ಮದಿ. ಗುರುವಾರ ಬೆಳಗ್ಗೆ ಈ ಸೇವಾ ಕಾರ್ಯಕ್ಕೆ ಗ್ರೇಡ್‌ -2 ತಹಶೀಲ್ದಾರ್‌ ಭಜಂತ್ರಿ ಚಾಲನೆ ನೀಡುವ ಜತೆಗೆ ಸಮಾನ ಮನಸ್ಕರ ಗೆಳೆಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಕಷ್ಟದಲ್ಲಿದ್ದರೆ ಸಂಪರ್ಕಿಸಿ: ಮನೆಯಲ್ಲಿ ಐಸೋಲೇಶನ್‌ ಆಗಿರುವವರು, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ಹೊರಗೆ ಊಟ, ನೀರು ಸಿಗದೇ ಕಷ್ಟ ಎದುರಿಸುತ್ತಿರುವವರು ಸೇರಿದಂತೆ ಊಟ, ನೀರು ಸಿಗದೇ ಸಂಕಷ್ಟದಲ್ಲಿದ್ದರೆ, ಅಂತಹ ಜನರು ನಮ್ಮನ್ನು ಸಂಪರ್ಕಿಸಿ, ನೀವಿದ್ದಲ್ಲಿಗೆ ಆಹಾರ, ನೀರು ತಲುಪಿಸುವ ಕಾರ್ಯ ಮಾಡುತ್ತೇವೆ ಎಂಬುದು ಕಾಮಧೇನು ಸಂಸ್ಥೆಯ ಗೆಳೆಯರ ಆತ್ಮವಿಶ್ವಾಸದ ಮಾತು. ನಗರದ ಸಮಾನ ಮನಸ್ಕರರಾದ ವಿಜಯ ಸುಲಾಖೆ- 9972372344, ಅಶೋಕ ಮುತ್ತಿನಮಠ- 9880663690, ರವಿ ಕುಮಟಗಿ- 9845705979, ಶಿವು ಮೆಲಾ°ಡ- 9448021734, ಸಂತೋಷ ಹೊಕ್ರಾಣಿ- 7338234113, ಬಸವರಾಜ ಕಟಗೇರಿ- 9902852217 ಅವರನ್ನು ಸಂಪರ್ಕಿಸಲು ಕಾಮಧೇನು ಸಂಸ್ಥೆಯ ಗೆಳೆಯರು ಕೋರಿದ್ದಾರೆ.

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.