ಬನಹಟ್ಟಿ: ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ
Team Udayavani, Dec 9, 2022, 9:26 PM IST
ರಬಕವಿ-ಬನಹಟ್ಟಿ: ಶುಕ್ರವಾರ ಬನಹಟ್ಟಿಯ ವೀರಭದ್ರೇಶ್ವರರ ಕಾರ್ತಿಕೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.
ಕಾರ್ತಿಕೋತ್ಸವದ ನಿಮಿತ್ತವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಬಿಲ್ವ ಪತ್ರಿ ಅರ್ಚನೆ ನಡೆಯಿತು. ನಂತರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಬೆಳ್ಳಿ ಪೂಜೆ ಭಕ್ತರ ಗಮನ ಸೆಳೆಯಿತು. ನಂತರ ಅಗ್ನಿಕುಂಡ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ನಡೆಯಿತು.
ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಪುರುವಂತರು ವೀರಗಾಸೆ ಪ್ರದರ್ಶನವನ್ನು ಮಾಡಿದರು. ನಂದಿಕೋಲ ಹೊತ್ತವರು, ಪಲ್ಲಕ್ಕಿ ಹೊತ್ತುಕೊಂಡ ಬಂದ ಭಕ್ತರು, ಪುರುವಂತರು ಪಲ್ಲಕ್ಕಿ ಸಮೇತವಾಗಿ ಅಗ್ನಿಕುಂಡ ಪ್ರವೇಶದ ನಂತರ ನೂರಾರು ಜನ ಭಕ್ತರು ಅಗ್ನಿಕುಂಡ ಹಾಯ್ದು ತಮ್ಮ ಹರಕೆಯನ್ನು ಪೂರೈಸಿದರು.
ಈ ಸಂದರ್ಭದಲ್ಲಿ ರೇವಣಪ್ಪ ಶಿವಸಿಂಪಿ, ರಾಜಶೇಖರ ಗಂಜ್ಯಾಳ, ಶಂಕರ ಜುಂಜಪ್ಪನವರ, ಬಸವರಾಜ ಪಟ್ಟಣ, ಮಲ್ಲಪ್ಪ ಬಡಿಗೇರ, ಈರಪ್ಪ ಶ್ರೀಶೈಲಿ, ಆನಂದ ಶೀಲವಂತ, ಮಲ್ಲು ಉದಗಟ್ಟಿ, ಸದಾಶಿವ ಗಜ್ಯಾಳ, ಬಸವರಾಜ ಗಂಜ್ಯಾಳ ಸೇರಿದಂತೆ ಅನೇಕರು ಇದ್ದರು.