ಮಹಾಲಿಂಗಪುರ: ಕೋಣನಿಗೂ ಬಂತು ಬರ್ತ್ ಡೇ ಭಾಗ್ಯ : ಊಟ,ಕೇಕ್‌,ಫೋಟೋ ಶೂಟ್.. ಸಂಭ್ರಮ ಬಲು ಜೋರು

Team Udayavani, Aug 3, 2022, 2:11 PM IST

tdy-7

ಮಹಾಲಿಂಗಪುರ: ಪಟ್ಟಣದ ಹೊರವಲಯದಲ್ಲಿ ರನ್ನಬೆಳಗಲಿ ಸರಹದ್ದಿನಲ್ಲಿರುವ ರೈತ ಸಿದ್ದು ಮಹಾದೇವ ಧರಿಗೌಡರ ಅವರು ಸಾಕಿದ ಕೋಣಕ್ಕೆ ಒಂದು ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮನೆಯ ಎಮ್ಮೆ ಹಾಕಿದ ಗಂಡು ಕರುವನ್ನು ಪ್ರೀತಿಯಿಂದ ಮನೆಯ ಸದಸ್ಯನಂತೆ  ಸಾಕಿದ್ದಾರೆ. ಅದಕ್ಕೆ ಬುಜ್ಜಿ ಮತ್ತು ಭೀಮ ಎಂದು ಹೆಸರಿಟ್ಟಿದ್ದಾರೆ.  ಒಂದು ವರ್ಷ ತುಂಬಿದ ಬುಜ್ಜಿ ಗೆ ಸಂಭ್ರಮದಿಂದ ಬರ್ತಡೇ ಮಾಡಿದರು.

ಆ ದಿನ ಅದರ ಮೈ ತೊಳೆದು, ಬಣ್ಣದ ಹಗ್ಗ ಮತ್ತು ಹೂಮಾಲೆಯೊಂದಿಗೆ ಅಲಂಕರಿಸಿ ಕೋಣದ ಭಾವಚಿತ್ರವಿರುವ ಬ್ಯಾನರ್ ತಯಾರಿಸಿ, ಪೆಂಡಾಲ್ ಹಾಕಿಸಿ, ಕೇಕ್ ಕತ್ತರಿ ನೂರಾರು ಬಂಧುಗಳನ್ನು ಆಹ್ವಾನಿಸಿ ಊಟ ಮಾಡಿಸುವ ಮೂಲಕ ಬುಜ್ಜಿ ಬರ್ತಡೇ ಮಾಡಿ ಗಮನ ಸೆಳೆದರು. ಫೋಟೋ ಗ್ರಾಫರ್‌ನ ಕರೆಸಿ ಎಲ್ಲ ಗೆಳೆಯರು ಮತ್ತು ಕುಟುಂಬದ ಸದಸ್ಯರನ್ನು ಕರೆದುಕೊಂಡು ಬುಜ್ಜಿ ಜೊತೆ ಫೋಟೋ ತೆಗೆಸಿಕೊಂಡರು.

ಆನೆಯಲ್ಲ, ಆಜಾನುಬಾಹು ಕೋಣ:

ಕರುವಿಗೆ ಮೇವಿನೊಂದಿಗೆ 4 ಕೆಜಿ ಮುಸುರೆ( ಪಶು ಆಹಾರ) ತಿನ್ನಿಸಿದ್ದಾರೆ. ನಿತ್ಯ 5 ಲೀ ಹಾಲು ಖರೀದಿಸಿ ಉಣಿಸಿದ್ದು ವಿಶೇಷ. ಯಾವುದಕ್ಕೂ ಕಡಿಮೆ ಮಾಡದೇ ಕಾಳಜಿಯಿಂದ ಮೇಯಿಸಿದ ಪರಿಣಾಮ ಕರು ದಷ್ಟಪುಷ್ಟವಾಗಿ ಚಿಕ್ಕ ಆನೆಯಂತೆ ಕಾಣುತ್ತಿದೆ. ಸಾಮಾನ್ಯ ಕರು 3 ವರ್ಷದ ನಂತರ ಯಾವ ಗಾತ್ರ ಬೆಳೆಯುತ್ತದೆಯೋ ಆ ಗಾತ್ರದಷ್ಟು ಒಂದೇ ವರ್ಷದ ಕರು ಬೆಳೆದಿರುವುದು ವಿಶೇಷ. ಇದರ ಗಾತ್ರ, ಅಂದ ಚೆಂದ ನೋಡಿದವರು ಸೆಲಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. ಕೆಲವರು ಈಗಾಗಲೇ 1.50 ಲಕ್ಷ ರೂ. ಬೆಲೆ ಕಟ್ಟಿ ಖರೀದಿಸಲು ಕೇಳಿದ್ದಾರೆ. ಆದರೂ ಸಿದ್ದು ಇದನ್ನು ಮಾರಿಲ್ಲ.

ಕೋಣ ಎಂಬುದು ದಡ್ಡನಿಗೆ ಬಳಸುವ ಬೈಗುಳ ಮತ್ತು ಯಮನ ವಾಹನ ಎಂಬ ನಕಾರಾತ್ಮಕ ಸಂಬೋಧನೆ ಎಂಬ ಅಭಿಪ್ರಾಯವಿದೆ. ಎಮ್ಮೆ ಸಾಕಿದರೆ ಹೈನು, ಕೋಣ ಸಾಕಿದರೆ ಏನು? ಎಂಬ ತಾತ್ಸಾರವೂ ಜನರಲ್ಲಿದೆ. ಎಮ್ಮೆ ಗಂಡು ಕರುವಿಗೆ ಜನ್ಮವಿತ್ತರೆ ಅಯ್ಯೋ ಕೋಣ ಹುಟ್ಟಿತು ಎಂದು ಮೂಗು ಮುರಿಯುವವರೂ ಇದ್ದಾರೆ. ಈ ಎಲ್ಲ ಉದ್ಗಾರಗಳ ಮಧ್ಯೆ ಕೋಣವನ್ನು ಪ್ರೀತಿಯಿಂದ ಸಾಕಿ, ಮಮತೆಯಿಂದ ಮೇಯಿಸಿ ಕುಟುಂಬ ಸದಸ್ಯರಂತೆ ಆರೈಕೆ ಮಾಡುತ್ತಿರುವ ರೈತನ ಕಾರ್ಯ ಇತರರಿಗೆ ಮಾದರಿಯಾಗಿದೆ.ಶಿವಲಿಂಗ ಸಿದ್ನಾಳ, ಉಪನ್ಯಾಸಕ ಮಹಾಲಿಂಗಪುರ

ಮೊದಲಿನಿಂದಲೂ ಜಾನುವಾರುಗಳೆಂದರೆ ಹೆಚ್ಚು ಪ್ರೀತಿ, ನಾವು ಅವುಗಳನ್ನು ಸಾಕುತ್ತೇವೆ ಎನ್ನುವುದಕ್ಕಿಂತ ಅವುಗಳೇ ನಮಗೆ ಲಾಭದಾಯಕ ಜೀವಿಗಳು. ಆದ್ದರಿಂದ ಈ ಕರುವಿಗೆ ಸಾತ್ವಿಕ ಆಹಾರ ತಿನ್ನಿಸಿ ಆಜಾನುಬಾಹುವಾಗಿ ಬೆಳೆಸಿದ್ದೇನೆ. ನೋಡಲು ದೊಡ್ಡ ಗಾತ್ರವಿದ್ದರೂ ಯಾರನ್ನೂ ಹಾಯಿವುದಿಲ್ಲ, ಮಕ್ಕಳಾದಿಯಾಗಿ ಎಲ್ಲರೊಂದಿಗೆ ಆಪ್ತವಾಗಿ ಸ್ಪಂದಿಸುತ್ತದೆ. ಅದರ ಮಾನವೀಯ ಗುಣ ನೋಡಿ ನಮಗೂ ಪ್ರೀತಿ ಹೆಚ್ಚಾಗಿ ನಮ್ಮಂತೆ ಅದಕ್ಕೂ ಬರ್ತಡೇ ಮಾಡಿ ಕೇಕ್ ತಿನ್ನಿಸಿದೆವು. ಸಿದ್ದು ಮಹಾದೇವ ಧರಿಗೌಡರ ಕೋಣದ ಮಾಲೀಕ, ರನ್ನಬೆಳಗಲಿ-ಮಹಾಲಿಂಗಪುರ

– ಚಂದ್ರಶೇಖರ ಮೋರೆ      

ಟಾಪ್ ನ್ಯೂಸ್

rawat ss

ಗಡಿ ವಿವಾದ ; ದೆಹಲಿಯ ಬೆಂಬಲವಿಲ್ಲದೆ ಅಹಿತಕರ ಘಟನೆಗಳು ನಡೆಯಲ್ಲ: ರಾವತ್

cm-bommai

ಬಿಜೆಪಿ ರಾಷ್ಟ್ರೀಯ ಪಕ್ಷ,ಚುನಾವಣಾ ಟಿಕೆಟ್‌ಗಾಗಿ ಪೈಪೋಟಿ ಸಹಜ: ಸಿಎಂ ಬೊಮ್ಮಾಯಿ

ಗಡಿ ವಿವಾದ: ಅಮಿತ್‌ ಶಾ ಮಧ್ಯಸ್ಥಿಕೆ ವಹಿಸಬೇಕು: ಸಂಸದೆ ಸುಪ್ರಿಯಾ ಸುಳೆ

ಗಡಿ ವಿವಾದ: ಅಮಿತ್‌ ಶಾ ಮಧ್ಯಸ್ಥಿಕೆ ವಹಿಸಬೇಕು: ಸಂಸದೆ ಸುಪ್ರಿಯಾ ಸುಳೆ

ಬೆಳ್ತಂಗಡಿ: ಬಂಗಾರ ಬಳಿಗೆ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಸಾವು

ಬೆಳ್ತಂಗಡಿ: ಬಂಗಾರ ಬಳಿಗೆ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಸಾವು

1-adsadsad

ವಿಶ್ವದ ಅತಿದೊಡ್ಡ, ಅತ್ಯಂತ ನಕಾರಾತ್ಮಕ ಪಕ್ಷವನ್ನು ಸೋಲಿಸಲಾಗಿದೆ ಎಂದ ಆಪ್

ಪನ್ನಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆ

ಕುತ್ತಿಗೆಗೆ ಉರುಳು ಬಿಗಿದ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆ: ಅಧಿಕಾರಿಗಳಿಂದ ಶೋಧ ಕಾರ್ಯ

1-adasdsad

ಭಾರತದೆದುರು 7 ನೇ ಕ್ರಮಾಂಕದಲ್ಲಿ ಬಂದು ಭರ್ಜರಿ ಶತಕ ಸಿಡಿಸಿದ ಮೆಹಿದಿ ಹಸನ್ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cm-bommai

ಬಿಜೆಪಿ ರಾಷ್ಟ್ರೀಯ ಪಕ್ಷ,ಚುನಾವಣಾ ಟಿಕೆಟ್‌ಗಾಗಿ ಪೈಪೋಟಿ ಸಹಜ: ಸಿಎಂ ಬೊಮ್ಮಾಯಿ

ಕೆಜಿಎಫ್‌ ಖ್ಯಾತಿಯ ʼತಾತʼ, ನಟ ಕೃಷ್ಣಾಜಿ ರಾವ್‌ ವಿಧಿವಶ

ಕೆಜಿಎಫ್‌ ಖ್ಯಾತಿಯ ʼತಾತʼ, ನಟ ಕೃಷ್ಣಾಜಿ ರಾವ್‌ ವಿಧಿವಶ

SHriramulu 2

ಜನಾರ್ದನ ರೆಡ್ಡಿ ರೆಬೆಲ್: ಸ್ನೇಹಕ್ಕೆ ಜೀವ ಕೊಡಲು ತಯಾರು ಎಂದ ಶ್ರೀರಾಮುಲು

tdy-20

ಅಪೌಷ್ಟಿಕತೆ ಹಾಗೂ ಅನೀಮಿಯಾ ನಿವಾರಣೆಗಾಗಿ ಮಕ್ಕಳ ತಪಾಸಣೆ: ಡಾ.ಕೆ.ಸುಧಾಕರ್‌

ದಲಿತ ಸಿಎಂ ವಿಚಾರವನ್ನು ಪಕ್ಷ ನಿರ್ಧರಿಸುತ್ತದೆ : ಡಾ.ಜಿ.ಪರಮೇಶ್ವರ್

ದಲಿತ ಸಿಎಂ ವಿಚಾರವನ್ನು ಪಕ್ಷ ನಿರ್ಧರಿಸುತ್ತದೆ: ಡಾ.ಜಿ.ಪರಮೇಶ್ವರ್

MUST WATCH

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

ಹೊಸ ಸೇರ್ಪಡೆ

rawat ss

ಗಡಿ ವಿವಾದ ; ದೆಹಲಿಯ ಬೆಂಬಲವಿಲ್ಲದೆ ಅಹಿತಕರ ಘಟನೆಗಳು ನಡೆಯಲ್ಲ: ರಾವತ್

cm-bommai

ಬಿಜೆಪಿ ರಾಷ್ಟ್ರೀಯ ಪಕ್ಷ,ಚುನಾವಣಾ ಟಿಕೆಟ್‌ಗಾಗಿ ಪೈಪೋಟಿ ಸಹಜ: ಸಿಎಂ ಬೊಮ್ಮಾಯಿ

ಗಡಿ ವಿವಾದ: ಅಮಿತ್‌ ಶಾ ಮಧ್ಯಸ್ಥಿಕೆ ವಹಿಸಬೇಕು: ಸಂಸದೆ ಸುಪ್ರಿಯಾ ಸುಳೆ

ಗಡಿ ವಿವಾದ: ಅಮಿತ್‌ ಶಾ ಮಧ್ಯಸ್ಥಿಕೆ ವಹಿಸಬೇಕು: ಸಂಸದೆ ಸುಪ್ರಿಯಾ ಸುಳೆ

ಬೆಳ್ತಂಗಡಿ: ಬಂಗಾರ ಬಳಿಗೆ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಸಾವು

ಬೆಳ್ತಂಗಡಿ: ಬಂಗಾರ ಬಳಿಗೆ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಸಾವು

1-adsadsad

ವಿಶ್ವದ ಅತಿದೊಡ್ಡ, ಅತ್ಯಂತ ನಕಾರಾತ್ಮಕ ಪಕ್ಷವನ್ನು ಸೋಲಿಸಲಾಗಿದೆ ಎಂದ ಆಪ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.