
ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ
Team Udayavani, Jun 28, 2022, 11:19 PM IST

ಬಾಗಲಕೋಟೆ: ಕ್ಷೇತ್ರವೇ ಇಲ್ಲದೇ ಬೀದಿಗೆ ಬಿದ್ದಿದ್ದ ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕರೆ ತಂದಿದ್ದು ನಾನು. ಎಸ್.ಆರ್. ಪಾಟೀಲ್, ಆರ್.ಬಿ.ತಿಮ್ಮಾಪುರ ಹಾಗೂ ಬಾದಾಮಿಯ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಒಪ್ಪಿಸಿ, ಜಿಲ್ಲೆಗೆ ಕರೆ ತಂದಿದ್ದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಂದರೆ ಕನಿಷ್ಠ ಈ ಭಾಗದಲ್ಲಿ 20 ಶಾಸಕರು ಹೆಚ್ಚಿಗೆ ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, 20 ಜನ ಅಭ್ಯರ್ಥಿಗಳು ಸೋತರು. ಸಿದ್ದರಾಮಯ್ಯ ಜತೆಗೆ ಸದ್ಯ ಯಾರೂ ಇಲ್ಲ. ನಾನೊಬ್ಬನೆ ಮಾತನಾಡುತ್ತೇನೆ. ನನ್ನ ಪರ ಯಾರೂ ಮಾತನಾಡಲ್ಲ ಎಂದು ಸ್ವತಃ ಸಿದ್ದರಾಮಯ್ಯ ಹೇಳಿದ್ದರು ಎಂದರು.
ಚುನಾವಣೆ ವೇಳೆ “ಸಿಡಿ ಸ್ಫೋಟ’!
ನಮ್ಮ ವಿರುದ್ಧ ಪ್ರಸಾರ ಮಾಡದಂತೆ ರಾಜ್ಯದ ಸುಮಾರು 12 ಜನ ಸಚಿವರು, ಕೆಲ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಸಿಡಿಯಲ್ಲಿ ಏನಿದೆ ಎಂದು ನೋಡಿ ಎಂದು ಸಭಾಪತಿಗಳಿಗೆ ಹೇಳಿದ್ದೆ.
ವಿಧಾನಸೌಧದಲ್ಲಿ ಬಹಳ ಗೌರವಾನ್ವಿತರಂತೆ ಮಾತನಾಡುತ್ತಾರೆ. ಆದರೆ, ಅವರ ಹುಳುಕೆಲ್ಲ ಸಿಡಿಯಲ್ಲಿದೆ. ಆ ಸಿಡಿಗಳು ಚುನಾವಣೆ ವೇಳೆ ಹೊರ ಬರುತ್ತವೆ. ಸುಮಾರು 17ರಿಂದ 18 ಸಿಡಿ ಇವೆ. ಅದರಲ್ಲಿ ಒಬ್ಬ ಗೋಪಾಲ ನಾನು ತಡೆಯಾಜ್ಞೆ ತೆಗೆದುಕೊಂಡಿಲ್ಲ ಎಂದಿದ್ದಾರೆ. ಆದರೆ, ಅವರ ಹೈಟ್, ವೇಟ್‌ಗೆ ಏನೂ ಮಾಡಲು ಆಗಲ್ಲ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New Krishna Bhavan:ಗುಡ್ ಬೈ ಹೇಳಿದೆ.. ಮಲ್ಲೇಶ್ವರಂನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್

Muddebihala: 3-4 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

Feticide:ಭ್ರೂಣ ಹತ್ಯೆ ಪ್ರಕರಣ-ಸ್ಕ್ಯಾನಿಂಗ್ ಕೇಂದ್ರ,ತಪಾಸಣೆ ಬಿಗಿ: ದಿನೇಶ್ ಗುಂಡೂರಾವ್

Politics: ಸಚಿವರ ಪಿಎಗಳಿಂದಲೂ ವಸೂಲಿ ದಂಧೆ- ಅಶೋಕ್

Caste: ನಾವ್ಯಾರೂ ಜಾತಿ-ಧರ್ಮಕ್ಕೆ ಅರ್ಜಿ ಹಾಕಿ ಹುಟ್ಟಿಲ್ಲ: ಸಿಎಂ
MUST WATCH
ಹೊಸ ಸೇರ್ಪಡೆ

Vijayapura; ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ.ಪಾಟೀಲ

State government: ಮೊಟ್ಟೆಗೆ ಸರ್ಕಾರ ನೀಡುವ ಹಣ ಸಾಲುತ್ತಿಲ್ಲ

Surat: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ 7 ಕಾರ್ಮಿಕರ ಶವ ಪತ್ತೆ

Raichuru; ಕೋಮು ಸಂಘರ್ಷಕ್ಕೆ ಎಡೆ ಮಾಡಿದ ಮಸೀದಿ ಕಮಾನು

ಡಿಕೆಶಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಕುಮಾರಸ್ವಾಮಿ