Udayavni Special

ರನ್ನಬೆಳಗಲಿ ಬಂದಲಕ್ಷ್ಮೀ ಜಾತ್ರೆ ರದ್ದು


Team Udayavani, Mar 21, 2020, 1:58 PM IST

ರನ್ನಬೆಳಗಲಿ ಬಂದಲಕ್ಷ್ಮೀ ಜಾತ್ರೆ ರದ್ದು

ಮಹಾಲಿಂಗಪುರ: ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಮೀಪದ ಐತಿಹಾಸಿಕ ರನ್ನಬೆಳಗಲಿಯ ಬಂದಲಕ್ಷ್ಮೀಯ ಪ್ರಸಕ್ತ ವರ್ಷದ ಜಾತ್ರೆ (ಮಾ.28, 29ರಂದು ನಡೆಯುತ್ತಿದ್ದ) ರದ್ದುಗೊಳಿಸಲಾಗಿದೆ.

ಬಂದಲಕ್ಷ್ಮೀ ದೇವಸ್ಥಾನದಲ್ಲಿ ಮುಧೋಳ ತಹಶೀಲ್ದಾರ್‌ ಎಸ್‌.ಬಿ. ಬಾಡಗಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಪಪಂ ಸದಸ್ಯರು, ಜಾತ್ರಾ ಕಮಿಟಿ ಹಿರಿಯರು, ದಾಸೋಹ ಸಮಿತಿ ಹಿರಿಯರು ಮತ್ತು ಅಧಿ ಕಾರಿಗಳು ಚರ್ಚಿಸಿದ ಬಳಿಕ ರಾಜ್ಯ ಸರಕಾರದ ಆದೇಶದಂತೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪ್ರಸಕ್ತ ಸಾಲಿನ ಜಾತ್ರೆ ರದ್ದುಗೊಳಿಸಲು ತೀರ್ಮಾನಿಸಲಾಯಿತು.

ಮುಧೋಳ ತಾಪಂ ಇಒ ಎನ್‌.ವೈ. ಬಸರಿಗಿಡದ ಮಾತನಾಡಿ, ಕೋವಿಡ್ 19 ವೈರಸ್‌ ಕುರಿತು ನಿರ್ಲಕ್ಷ್ಯ ಮಾಡಿದ್ದಕ್ಕಾಗಿಯೇ ಇಟಲಿ ಮತ್ತು ಚೀನಾ ದೇಶಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅದಕ್ಕಾಗಿ ಮುಂಜಾಗೃತಿ ದೃಷ್ಟಿಯಿಂದ ಜಾತ್ರೆ ರದ್ದುಗೊಳಿಸುವುದು ಉತ್ತಮ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಧೋಳ ತಹಶೀಲ್ದಾರ್‌ ಎಸ್‌.ಬಿ. ಬಾಡಗಿ ಮಾತನಾಡಿ, ನಾವು ಸುರಕ್ಷೀತವಾಗಿ ಇರುವ ಸಲುವಾಗಿ ವಾರದ ಸಂತೆ, ಜಾತ್ರೆ-ಉತ್ಸವ, ಬಾರ್‌ ರೆಸ್ಟೋರೆಂಟ್‌, ದಾಬಾ, ಮನರಂಜನಾ ಕ್ಲಬ್‌ ಸೇರಿದಂತೆ ಎಲ್ಲವನ್ನು ಬಂದ್‌ ಮಾಡಿ. ಸರಕಾರದ ಆದೇಶ ಪಾಲಿಸುವ ಮೂಲಕ ನಮ್ಮ ರಕ್ಷಣೆ ಮತ್ತು ಭವಿಷ್ಯದ ಒಳತಿಗಾಗಿ ಸದ್ಯ ಜಾತ್ರೆಯನ್ನು ರದ್ದುಗೊಳಿಸಿ ಸಹಕರಿಸಿ. ಸಾಧ್ಯವಾದರೆ ಕೋವಿಡ್ 19 ಪ್ರಭಾವ ಕಡಿಮೆಯಾದ ನಂತರ ಅದ್ದೂರಿಯಾಗಿ ಜಾತ್ರೆ ನಡೆಸಿ ಎಂದು ಹಿರಿಯರು ಮತ್ತು ಪಟ್ಟಣದ ಜನರಲ್ಲಿ ವಿನಂತಿಸಿದರು.

ಜಾತ್ರಾ ಕಮೀಟಿ, ದಾಸೋಹ ಕಮೀಟಿ, ಪಪಂ ಸದಸ್ಯರು, ಪಟ್ಟಣದ ಹಿರಿಯರು, ಯುವಕರ ಪರವಾಗಿ ಹಿರಿಯರಾದ ಧರೆಪ್ಪ ಸಾಂಗಲಿಕರ ಮಾತನಾಡಿ, ಕೋವಿಡ್ 19 ವೈರಸ್‌ ಸಾಂಕ್ರಾಮಿಕ ರೋಗವಾಗಿದೆ. ಈ ಹಿನ್ನೆಲೆಯಲ್ಲಿ ದೇಶ ಮತ್ತು ರಾಜ್ಯದಲ್ಲಿನ ಪ್ರಸಿದ್ದ ಜಾತ್ರೆ-ಉತ್ಸವ ಮತ್ತು ದೇವಸ್ಥಾನಗಳನ್ನೇ ಬಂದ್‌ ಮಾಡಲಾಗುತ್ತಿದೆ. ನಾವು ಸಹ, ಸರಕಾರದ ಆದೇಶದಂತೆ ಪ್ರಸಕ್ತ ಸಾಲಿನ ಬಂದಲಕ್ಷ್ಮೀ ಜಾತ್ರೆ ರದ್ದುಗೊಳಿಸುತ್ತೇವೆ. ಶನಿವಾರದಿಂದಲೇ ದೇವಸ್ಥಾನಕ್ಕೆ ಬೀಗಹಾಕಿ ಸಹಕರಿಸುತ್ತೇವೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪಪಂ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಬೆಳಗಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರವೀಣ ಓಣಿಮಠ ಮಾತನಾಡಿದರು. ಸಭೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಕುಂದರಗಿ, ಪೊಲೀಸ್‌ ಇಲಾಖೆಯ ಕೆ.ಬಿ. ಮಾಂಗ, ಹಿರಿಯರಾದ ಮೋಹನರಾವ ಕುಲಕರ್ಣಿ, ಶಿವನಗೌಡ ಪಾಟೀಲ, ಅಶೋಕ ಸಿದ್ದಾಪುರ, ಸಿದ್ದುಗೌಡ ಪಾಟೀಲ, ರಾಮನಗೌಡ ಪಾಟೀಲ, ಲಕ್ಕಪ್ಪ ಹಾರೂಗೇರಿ, ಚಿಕ್ಕಪ್ಪ ನಾಯಕ, ಸಂಗನಗೌಡ ಪಾಟೀಲ, ಪಾಂಡಪ್ಪ ಸಿದ್ದಾಪುರ, ಶಿವನಗೌಡ ಪಾಟೀಲ, ಪಂಡಿತ ಪೂಜೇರಿ, ರಂಗಪ್ಪ ಒಂಟಗೋಡಿ, ಮಲ್ಲಪ್ಪ ಹೊಸಪೇಟಿ, ಈರಪ್ಪ ಕಿತ್ತೂರ, ಲಕ್ಷ್ಮಣ ಕಲ್ಲೋಳೆಪ್ಪಗೋಳ, ಮಹಾದೇವ ಮುರನಾಳ, ಮಹಾಲಿಂಗ ಲಾಗದವರ, ಮಹಾಲಿಂಗ ಪುರಾಣಿಕ, ಕಾಡಯ್ಯ ಗಣಾಚಾರಿ, ಆನಂದ ಪಾಟೀಲ, ಪ್ರವೀಣ ಪಾಟೀಲ ಸೇರಿದಂತೆ ಪಪಂ ಸದಸ್ಯರು, ಜಾತ್ರಾ ಕಮಿಟಿ ಹಿರಿಯರು, ಯುವಕರು ಭಾಗವಹಿಸಿದ್ದರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ!

ಕೋವಿಡ್‌ ವಾರಿಯರ್ಸ್ ಗಳಿಗೆ ಶೌರ್ಯ ಪುರಸ್ಕಾರ, ವಿಶೇಷ ನಗದು ಬಹುಮಾನ ನೀಡಿ: ದೇಶಪಾಂಡೆ.

ಕೋವಿಡ್‌ ವಾರಿಯರ್ಸ್ ಗಳಿಗೆ ಶೌರ್ಯ ಪುರಸ್ಕಾರ, ವಿಶೇಷ ನಗದು ಪುರಸ್ಕಾರ ನೀಡಿ: ದೇಶಪಾಂಡೆ.

ರಾಜ್ಯ ಸರಕಾರ ಪಿಯುಸಿ ಮೌಲ್ಯ ಮಾಪನಕ್ಕೆ ಉಪನ್ಯಾಸಕರ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ

ರಾಜ್ಯ ಸರಕಾರ ಪಿಯುಸಿ ಮೌಲ್ಯ ಮಾಪನಕ್ಕೆ ಉಪನ್ಯಾಸಕರ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ

ಘಟಾನುಘಟಿಗಳಿಗೆ ವಾಯ್ಸ್ ಕೊಡುತ್ತಿದ್ದ “ಆರ್ಮುಗಂ” ಬದುಕಿಗೆ ತಿರುವು ಕೊಟ್ಟಿದ್ದು ತಾಯಿ ಡೈರಿ

ಘಟಾನುಘಟಿಗಳಿಗೆ ವಾಯ್ಸ್ ಕೊಡುತ್ತಿದ್ದ “ಆರ್ಮುಗಂ” ಬದುಕಿಗೆ ತಿರುವು ಕೊಟ್ಟಿದ್ದು ತಾಯಿ ಡೈರಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ಶುದ್ಧ ಕುಡಿಯುವ ನೀರಿಗಾಗಿ ಪರದಾಟ

5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಕೂಡಲಸಂಗಮದಲ್ಲಿ ಭಕ್ತರ ದರ್ಶನಕ್ಕೆ ಸಿದ್ಧತೆ

ಕೂಡಲಸಂಗಮದಲ್ಲಿ ಭಕ್ತರ ದರ್ಶನಕ್ಕೆ ಸಿದ್ಧತೆ

ಫ್ರಂಟ್ ಲೈನ್ ವಾರಿಯರ್ಸ್ ಗೆ 10 ಸಾವಿರ ಪ್ಯಾಕೇಜ್ ಘೋಷಿಸಿ

ಫ್ರಂಟ್ ಲೈನ್ ವಾರಿಯರ್ಸ್ ಗೆ 10 ಸಾವಿರ ಪ್ಯಾಕೇಜ್ ಘೋಷಿಸಿ

ಕೋವಿಡ್ : 619 ಜನರ ವರದಿ ನೆಗೆಟಿವ್‌-1033 ಬಾಕಿ

ಕೋವಿಡ್ : 619 ಜನರ ವರದಿ ನೆಗೆಟಿವ್‌-1033 ಬಾಕಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ಉಳಿದದ್ದು ಆಕಾಶ ; ಹೊಸ ಮಳೆಗಾಲಕ್ಕೆ ಹಳೆ ಬೆನ್ನುಡಿ

ಉಳಿದದ್ದು ಆಕಾಶ ; ಹೊಸ ಮಳೆಗಾಲಕ್ಕೆ ಹಳೆ ಬೆನ್ನುಡಿ

ಚಾ.ನಗರ ಜಿ.ಪಂ.ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಅಶ್ವಿನಿ ಅವಿರೋಧ ಆಯ್ಕೆ

ಚಾ.ನಗರ ಜಿ.ಪಂ.ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಅಶ್ವಿನಿ ಅವಿರೋಧ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.