ಕೋವಿಡ್‍ಗಿಂತ ಜೀವನ ನಿರ್ವಹಣೆಯದ್ದೇ ಚಿಂತೆ!

ಮಾರುಕಟ್ಟೆಗೆ ಓಡೋಡಿ ಬಂದ್ರು ಜನ | ಕೋವಿಡ್ ಸೋಂಕು ಲೆಕ್ಕಿಸದೇ ಸಿಗುತ್ತೋ ಇಲ್ವೋ ಎಂಬಂತೆ ಖರೀದಿ ಮಾಡಿದ್ರು

Team Udayavani, Apr 27, 2021, 5:57 PM IST

hytyt

ಬಾಗಲಕೋಟೆ: ಕೋವಿಡ್ 2ನೇ ಅಲೆಯ ಭೀತಿಗಿಂತ ಜನರು ಜೀವನ ಸಾಗಿಸುವ ಕುರಿತೇ ಹೆಚ್ಚು ಚಿಂತೆಯಲ್ಲಿದ್ದಂತಿದೆ. ಎರಡು ದಿನಗಳ ವಾರಾಂತ್ಯ ಕರ್ಫ್ಯೂ ಮುಗಿದ ಬಳಿಕ ಸೋಮವಾರ ಬೆಳಗ್ಗೆ ಮಾರುಕಟ್ಟೆಗೆ ಧಾವಿಸಿದ ಜನರು ಸೋಂಕನ್ನು ಲೆಕ್ಕಿಸದೇ ವಸ್ತುಗಳ ಖರೀದಿಗೆ ಮುಗಿ ಬಿದ್ದರು.

ಹೌದು. ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿತ್ಯವೂ ಹೆಚ್ಚುತ್ತಿದೆ. ಜನರು ದಿನಬಳಕೆಯ ವಸ್ತುಗಳ ಖರೀದಿಯೊಂದಿಗೆ ಮನೆಯಲ್ಲಿದ್ದು ಸೋಂಕು ನಿಯಂತ್ರಣಕ್ಕೆ ಕೈಜೋಡಿಸಬೇಕಿದೆ. ಆದರೆ, ಬಹುತೇಕರು, ಅಗತ್ಯಕ್ಕಿಂತ ಅನಗತ್ಯ ವಸ್ತುಗಳ ಹುಡುಕಾಟ, ಖರೀದಿಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಸೋಮವಾರ ಕಂಡು ಬಂತು. ಮದ್ಯದ ಅಂಗಡಿ ಎದುರು ಸಾಲು: ಮತ್ತೆ 14 ದಿನಗಳ ಕಾಲ ಲಾಕ್‌ಡೌನ್‌ ಆಗುತ್ತದೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಹಲವರು ಮದ್ಯದಂಗಡಿಗಳ ಎದುರು ಸಾಲು ನಿಂತರೆ, ಇನ್ನೂ ಹಲವರು ಕಿರಾಣಿ ಅಂಗಡಿ, ತರಕಾರಿ ಖರೀದಿಗೆ ಮುಂದಾಗಿದ್ದರು. ಅದರಲ್ಲೂ ಬಾಗಲಕೋಟೆ ನಗರ, ವಿದ್ಯಾಗಿರಿ ಹಾಗೂ ನವನಗರದಲ್ಲಿರುವ ಎಂಎಸ್‌ಐಎಲ್‌ ಮದ್ಯದ ಅಂಗಡಿಗಳ ಎದುರು ಕಾರು, ಬೈಕ್‌ ಸಮೇತ ಬಂದಿದ್ದ ಜನರು, ಬಾಕ್ಸ್‌ಗಟ್ಟಲೇ ಮದ್ಯದ ಬಾಟಲ್‌ ಖರೀದಿಗೆ ಮುಗಿ ಬಿದ್ದರು. ಅಂಗಡಿಕಾರರು, ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಹಾಕಿಕೊಂಡು ಒಳ ಬಂದವರಿಗೆ ಮಾತ್ರ ಮದ್ಯ ಪೂರೈಸುತ್ತೇವೆ ಎಂಬ ಫಲಕ ಹಾಕಿದ್ದರಾದರೂ ಅದು ಅನುಷ್ಠಾನಕ್ಕೆ ಬರಲಿಲ್ಲ ಎನ್ನಲಾಗಿದೆ.

ತರಕಾರಿ ಮಾರುಕಟ್ಟೆ ಫುಲ್‌ ರಶ್‌: ನಗರದ ಹಳೆಯ ಅಂಚೆ ಕಚೇರಿ ಹತ್ತಿರದ ತರಕಾರಿ ಮಾರುಕಟ್ಟೆ, ಕಿರಾಣಿ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಜನಜಂಗುಳಿ ಏರ್ಪಟ್ಟಿತ್ತು. ಒಂದು ಮನೆಯ ಖರೀದಿಗೆ ಒಬ್ಬ ವ್ಯಕ್ತಿಗಳು ಮಾರುಕಟ್ಟೆಗೆ ಬರುವ ಬದಲು, ಕುಟುಂಬದ ಇಬ್ಬರು-ಮೂವರು ಜನರು ಆಗಮಿಸಿದ್ದರು. ಹೀಗಾಗಿ ಜನಜಂಗುಳಿ ಏರ್ಪಟ್ಟಿತ್ತು. ಎಚ್ಚರಿಕೆ ವಹಿಸಿ: ಜಿಲ್ಲೆಯಲ್ಲಿ 2ನೇ ಅಲೆ ಹೆಚ್ಚುತ್ತಿದೆ. ಜನರು ಅಗತ್ಯವಿಲ್ಲದೇ ಹೊರಗಡೆ ಬರಬಾರದು. ಬಂದರೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಹಾಕಿರಬೇಕು. ಹೊರಗಡೆ ಬಂದವರು ಪುನಃ ಮನೆಗೆ ಹೋದ ಬಳಿಕ ಬಿಸಿ ನೀರಿನಿಂದ ಕೈ-ಕಾಲು ಸ್ವತ್ಛವಾಗಿ ತೊಳೆದುಕೊಳ್ಳಬೇಕು. ಬಳಿಕವೇ ಮನೆಯಲ್ಲಿರುವ ಮಕ್ಕಳು, ಹಿರಿಯರೊಂದಿಗೆ ಬೆರೆಯಬೇಕು. ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಸೋಂಕಿನ ಯಾವುದೇ ಲಕ್ಷಣ ಕಂಡು ಬಂದಲ್ಲಿ ಕೂಡಲೇ ತಪಾಸಣೆಗೊಳಗಾಗಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಟಾಪ್ ನ್ಯೂಸ್

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ

ಹರಿಪ್ರಸಾದ್‌ ಪರಿಷತ್‌ ವಿಪಕ್ಷ ನಾಯಕ; ಪ್ರಕಾಶ್‌ ರಾಥೋಡ್‌ ಸಚೇತಕ, ಗೋವಿಂದರಾಜು ಉಪನಾಯಕ

ಹರಿಪ್ರಸಾದ್‌ ಪರಿಷತ್‌ ವಿಪಕ್ಷ ನಾಯಕ; ಪ್ರಕಾಶ್‌ ರಾಥೋಡ್‌ ಸಚೇತಕ, ಗೋವಿಂದರಾಜು ಉಪನಾಯಕ

ವಲಸೆ ಮೂರರಲ್ಲೂ ಸಮಸ್ಯೆ

ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ವಲಸೆ ಮಾತಿನ ಸಮರ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

4covid

ಸರ್ಕಾರದ ನಿರ್ದೇಶನ ಪಾಲಿಸಿ, ಕೋವಿಡ್‌ ನಿಯಂತ್ರಿಸಿ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

3distric

ಒಂದೇ ಯೋಜನೆಗೆ ಸರ್ಕಾರದಿಂದ ಮೂರು ಜಿಲ್ಲೆ ಪ್ರಸ್ತಾವ ಏಕೆ?: ಉದ್ಯಮಿಗಳ ಅಸಮಾಧಾನ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

2abulence

ಉಚಿತ ಆಂಬ್ಯುಲೆನ್ಸ್‌ ಸೇವೆಗೆ ಸಚಿವ ನಿರಾಣಿ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.