ಬಾಗಲಕೋಟ-ಕುಡಚಿ ರೈಲುಮಾರ್ಗ ನಿರ್ಮಾಣಕ್ಕೆ ಡಿ.15ರ ಗಡುವು

ರೈಲುಮಾರ್ಗ ನಿರ್ಮಾಣ ಕಾಮಗಾರಿಗೆ ಒತ್ತಾಯಿಸಿ ಡಿ.17 ರಿಂದ ಉಗ್ರ ಹೋರಾಟ

Team Udayavani, Nov 27, 2022, 10:27 PM IST

1-aSsSs

ರಬಕವಿ-ಬನಹಟ್ಟಿ : ರೂ.726 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಬಾಗಲಕೋಟೆ -ಕುಡಚಿ ರೈಲು ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಷ್ಕ್ರಿಯತೆ ಮತ್ತು ಜನಪ್ರತಿನಿದಿಗಳ ಬೇಜವಾಬ್ದಾರಿಯಿಂದಾಗಿ ಇಂದು ರು.೩೦೦೦ಕೋಟಿ ವೆಚ್ಚಕ್ಕೇರಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಡಿ.15ರೊಳಗೆ ರಾಜ್ಯ ಸರ್ಕಾರ ವಶಪಡಿಸಿಕೊಂಡಿರುವ ಭೂಮಿಯಲ್ಲಿ ರೈಲು ಹಳಿಗಳ ನಿರ್ಮಾಣ ಕಾರ್ಯ ಜರುಗದಿದ್ದರೆ ಡಿ.17 ರಿಂದ ಉಗ್ರವಾದ ಹೋರಾಟವನ್ನು ಕೈಗೊಳ್ಳುವುದಾಗಿ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಕಾಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಭಾನುವಾರದಂದು ರಬಕವಿಯ ಶ್ರೀಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 2016 ರಲ್ಲಿ ಖಜ್ಜಿಡೋಣಿವರೆಗೆ ನಿರ್ಮಾಣಗೊಂಡ ಯೋಜನೆಯಿಂದಾಗಿ ಬಾಗಲಕೋಟದಿಂದ ಖಜ್ಜಿಡೋಣಿವರೆಗೆ ಮಾತ್ರ ರೈಲು ಸಂಚಾರ ಆರಂಭಗೊಂಡಿದೆ. ಇದೂವರೆಗೆ ಮುಂದಿನ ಮಾರ್ಗ ರಚನೆಗೆ ಬೇಕಾದ ಕಾಮಗಾರಿ ನಿರ್ವಹಿಸದ ಕಾರಣ ಬೀಳಗಿ, ಮುಧೋಳ, ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳ ಜನತೆ ರೈಲು ಸಂಚಾರದಿಂದ ವಂಚಿತರಾಗಲು ಇಲ್ಲಿನ ಜನಪ್ರತಿನಿಧಿಗಳ ಅಸಡ್ಡೆ ಮತ್ತು ಬೇಜವಾಬ್ದಾರಿತನವೇ ಮುಖ್ಯ ಕಾರಣವಾಗಿದೆಯೆಂದು ಆರೋಪಿಸಿದರು.

ಭೂಮಿ ನೀಡಿದ ರೈತರಿಗೆ ಯೋಗ್ಯ ಬೆಲೆ ಮತ್ತು ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡಬೇಕು. ನಮ್ಮ ಪ್ರದೇಶದ ಮೂವರು ಸಚಿವರು ಕಳೆದ ಮೂರು ವರ್ಷದಿಂದ ಬರೀ ಭರವಸೆ ನೀಡುತ್ತಾ ಬಂದಿದ್ದಾರೆ. ಬಾಗಲಕೋಟ ಮತ್ತು ಜಮಖಂಡಿ ಎಸಿಗಳು ಭೂಸ್ವಾದೀನ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಯೋಜನೆಯಿಂದ ವಾರ್ಷಿಕ ಶೇ.30 ರಷ್ಟು ಆದಾಯ ಕೈಸೇರಲಿದೆ.

ಭಾರತದಲ್ಲೇ ಅತ್ಯಧಿಕ ಲಾಭದ ರೈಲು ಮಾರ್ಗ ಇದಾಗಿದೆಯಾದರೂ ಕೇಂದ್ರ ಸರ್ಕಾರ ಈ ಯೋಜನೆಗೆ ತ್ವರಿತ ಕ್ರಮ ಕೈಗೊಳ್ಳದೇ ನಮ್ಮ ಭಾಗದ ಜನತೆಗೆ ಅನ್ಯಾಯವೆಸಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿ.15ರ ವರೆಗೆ ರೇಲ್ವೆ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿ ಚಾಲನೆಗೆ ಗಡುವು ನೀಡಿದ ಬಳಿಕ ಆಗದಿದ್ದಲ್ಲಿ ಡಿ.17 ರಂದು ಬಾಗಲಕೋಟ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಬಳಿಕ ಡಿ.18 ರಂದು ಖಜ್ಜಿಡೋಣಿಯಲ್ಲಿ ಸದ್ಯ ಚಾಲ್ತಿ ಇರುವ ವಾಣಿಜ್ಯ ರೈಲು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವ ಮತ್ತು ಡಿ.19 ರಂದು ಲೋಕಾಪುರದಲ್ಲಿ ಬೆಳಗಾವಿ ಅದಿವೇಶನಕ್ಕೆ ತೆರಳುವ ಎಲ್ಲಾ ಜನಪ್ರತಿನಿದಿಗಳನ್ನು ತಡೆದು ಪ್ರತಿಭಟಿಸುವುದಾಗಿ ಖಾಜಿ ಪ್ರಕಟಿಸಿದರು.

ಡಿ.20 ರಂದು ಮುಧೋಳ, ಡಿ.21ರಂದು ಜಮಖಂಡಿ, ಡಿ.22 ರಂದು ರಬಕವಿ-ಬನಹಟ್ಟಿ, ಡಿ.23 ರಂದು ತೇರದಾಳ ಮತ್ತು ಡಿ.24 ರಂದು ಕುಡಚಿ ರೈಲು ನಿಲ್ದಾಣದಲ್ಲಿ ರೈಲುಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರವಾಗಿದ್ದು, ಈ ಪ್ರದೇಶದ ಸಮಸ್ತ ನಾಗರಿಕರು ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.

ಪತ್ರಕರ್ತ ಗುರುರಾಜ ಪೋತ್ನೀಸ್ ಮಾತನಾಡಿ ಜನಾಗ್ರಹಭರಿತ ಪ್ರತಿಭಟನೆಗಳ ಜೊತೆಗೆ ಕಾನೂನು ವ್ಯಾಪ್ತಿಯಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಹೋರಾಟಕ್ಕೆ ಬಲ ನೀಡಲು ಸಲಹೆ ನೀಡಿದರು. ಕಾನೂನು ಪಂಡಿತರೊಡನೆ ಸಮಾಲೋಚಿಸಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಲು ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನತೆಯ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಇದಕ್ಕೆ ಉಗ್ರ ಹೋರಾಟವೇ ತಕ್ಕ ಮಾರ್ಗವಾಗಿದೆಯೆಂದು ಗುಲಾಬಸಾಬ ಅತ್ತಾರ, ದಯಾನಂದ ಬಿಜ್ಜರಗಿ, ಡಾ.ರವಿ ಜಮಖಂಡಿ, ಹಿರಿಯ ಪತ್ರಕರ್ತ ನೀಲಕಂಠ ದಾತಾರ ಮಾತನಾಡಿದರು.

ವೇದಿಕೆಯಲ್ಲಿ ಜಯಶ್ರೀ ಗುಲಬಾಳ, ಮಂಜುಳಾ ಭುಸರಿ ಉಪಸ್ಥಿತರಿದ್ದರು. ಸಂವಾದದಲ್ಲಿ ಸಂಜಯ ತೇಲಿ, ರವಿ ಗಿರಸಾಗರ, ರಾಮಣ್ಣಾ ಹುಲಕುಂದ, ಪ್ರಕಾಶ ಸುಡಾಳ, ಶಿವಾನಂದ ಬಾಗಲಕೋಟಮಠ, ಪ್ರೊ.ಎಂ.ಎಸ್.ಬದಾಮಿ, ಸವಿತಾ ಹೊಸೂರ, ಆನಂದ ಜುಗಳಿ, ರವಿ ಹೇರಲಗಿ ಮುಂತಾದವರಿದ್ದರು.

ಟಾಪ್ ನ್ಯೂಸ್

naval

ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಆಗಿ ಅತುಲ್ ಆನಂದ ಅಧಿಕಾರ ಸ್ವೀಕಾರ

mattimood

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರ ಬಸ್: 2 ಮೃತ್ಯು, ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

1-sadsdsad

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಶರಣರ ಬದುಕು ಸ್ಫೂರ್ತಿದಾಯಕ: ಸಹಜಾನಂದ ಸ್ವಾಮೀಜಿ

ಶರಣರ ಬದುಕು ಸ್ಫೂರ್ತಿದಾಯಕ: ಸಹಜಾನಂದ ಸ್ವಾಮೀಜಿ

ಮುಧೋಳ: ಅಂಗನವಾಡಿ ಮಕ್ಕಳಿಗೆ ಪಂಚಾಯಿತಿಯಲ್ಲಿ ಪಾಠ!

ಮುಧೋಳ: ಅಂಗನವಾಡಿ ಮಕ್ಕಳಿಗೆ ಪಂಚಾಯಿತಿಯಲ್ಲಿ ಪಾಠ!

ಗುಳೇದಗುಡ್ಡ: ಲೇಔಟ್‌ಗಳ ಅನುಮೋದನೆಗೆ ಸದಸ್ಯರ ಒತ್ತಾಯ

ಗುಳೇದಗುಡ್ಡ: ಲೇಔಟ್‌ಗಳ ಅನುಮೋದನೆಗೆ ಸದಸ್ಯರ ಒತ್ತಾಯ

ಹೇಮರಡ್ಡಿ ಮಲ್ಲಮ್ಮ ತತ್ವಾದರ್ಶ ಪಾಲಿಸಿ; ಆರ್‌.ಎಸ್‌.ತಳೇವಾಡ

ಹೇಮರಡ್ಡಿ ಮಲ್ಲಮ್ಮ ತತ್ವಾದರ್ಶ ಪಾಲಿಸಿ; ಆರ್‌.ಎಸ್‌.ತಳೇವಾಡ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

naval

ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಆಗಿ ಅತುಲ್ ಆನಂದ ಅಧಿಕಾರ ಸ್ವೀಕಾರ

mattimood

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ