Udayavni Special

ಅಪಾಯಕ್ಕೆ ಆಹ್ವಾನಿಸುವ ರಸ್ತೆ ತಗ್ಗು-ಗುಂಡಿಗಳು


Team Udayavani, Mar 7, 2020, 1:01 PM IST

ಅಪಾಯಕ್ಕೆ ಆಹ್ವಾನಿಸುವ ರಸ್ತೆ ತಗ್ಗು-ಗುಂಡಿಗಳು

ಸಾಂದರ್ಭಿಕ ಚಿತ್ರ

ಮಹಾಲಿಂಗಪುರ: ಮುಧೋಳ-ನಿಪ್ಪಾಣಿ ರಾಜ್ಯಹೆದ್ದಾರಿಯ ಪಟ್ಟಣದ ಅಸ್ಟಗಿ ಟಾಕೀಜಿನಿಂದ ಬಸ್‌ ನಿಲ್ದಾಣದ ಕಡೆಗೆ ಹೋಗುವ ಬಲಗಡೆ ರಸ್ತೆಯಲ್ಲಿ ತಗ್ಗು ಬಿದ್ದು ಗುಂಡಿಯು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಸ್ಥಳೀಯ ರಾಜ್ಯ ಹೆದ್ದಾರಿಯಲ್ಲಿ ನೀರಿನ ಪೈಪ್‌ ಒಡೆದಿದೆ ಎಂದು ಪುರಸಭೆಯವರು ರಸ್ತೆ ಅಗೆದು ಪೈಪ್‌ ಜೋಡಿಸಿ ಸುಮಾರು 6 ತಿಂಗಳು ಕಳೆದರೂ ರಸ್ತೆ ರಿಪೇರಿ ಮಾಡದೇ ಹಾಗೆ ಬಿಟ್ಟಿರುವುದರಿಂದ ಅಲ್ಲಿ ತಗ್ಗು ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪ್ರತಿದಿನ ನಾಲ್ಕೈದು ವಾಹನಗಳು ಸಂಚರಿಸುತ್ತವೆ. ಇಲ್ಲಿ ಸಂಚರಿಸುವ ವಾಹನದಾರರಿಗೆ ಇಲ್ಲಿರುವ ತಗ್ಗಿನಿಂದ ತಮ್ಮ ವಾಹನ ಎಲ್ಲ ಬೀಳುತ್ತದೋ ಎನ್ನುವ ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಗರದ ಪ್ರಮುಖ ರಸ್ತೆ ಮತ್ತು ಜನನಿಬಿಡ ಪ್ರದೇಶವಾದ ಕಾರಣ ನಿತ್ಯ, ಸಾವಿರಾರು ಜನ ಪಾದಚಾರಿಗಳು ಕೂಡ ಸಂಚರಿಸುತ್ತಾರೆ. ಪುರಸಭೆಯವರು ಪೈಪ್‌ಲೈನ್‌ ರಿಪೇರಿಗೆಂದು ಅಗೆದು ಸುಮಾರು 6 ತಿಂಗಳುಗಳೆ ಕಳೆದರೂ ರಿಪೇರಿ ಮಾಡುವ ಮನಸ್ಸು ಮಾತ್ರ ಯಾರಿಗೂ ಇಲ್ಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಾಜ್ಯ ಹೆದ್ದಾರಿ ಇಂಜಿನಿಯರ್‌ಗಳು ಮತ್ತು ಪುರಸಭೆ ಮುಖ್ಯಾ ಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹಾಕಿ ರಸ್ತೆ ದುಸ್ಥಿಯು ವಿಳಂಬವಾಗುತ್ತಿದೆ. ಹೆದ್ದಾರಿ ಇಂಜಿನಿಯರನ್ನು ಕೇಳಿದರೆ ಅವರು ನಾವುಪುರಸಭೆಯವರಿಗೆ ಮೊದಲೇ ಹೇಳಿದ್ದೇವೆ. ಪೈಪ್‌ ಒಡೆದಿರುವುದರಿಂದ ರಸ್ತೆ ಅಗೆದಿದ್ದಾರೆ. ಅದನ್ನು ಪುರಸಭೆಯವರೇ ರಿಪೇರಿ ಮಾಡಿಕೊಳ್ಳಬೇಕು. ಇಲ್ಲವಾದರೆ ಅದರ ದುರಸ್ತಿ ಹಣವನ್ನು ನಮಗೆ ಕೊಟ್ಟರೆ ನಾವೇ ರಿಪೇರಿ ಮಾಡಿಕೊಡುತ್ತೇವೆ ಎನ್ನುತ್ತಾರೆ.

ಆದರೆ ಪುರಸಭೆ ಮುಖ್ಯಾಧಿಕಾರಿಗಳು ಮಾತ್ರ ಅದನ್ನು ತಾವು ರಿಪೇರಿ ಮಾಡಿಸುತ್ತಿಲ್ಲ. ಹೆದ್ದಾರಿಯವರಿಗೆ ರಿಪೇರಿ ಹಣವನ್ನು ಕಟ್ಟದೇ ಮಂದಗತಿಯಲ್ಲಿ ತಮ್ಮ ಕೆಲಸ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಟ್ರ್ಯಾಕ್ಟರ್‌ ಸಂಚಾರ ಹೆಚ್ಚು: ಕಬ್ಬು ತುಂಬಿದ ಟ್ರ್ಯಾಕ್ಟರ್‌ ಗಳ ಸಂಚಾರ ಪಟ್ಟಣದಲ್ಲಿ ಹೆಚ್ಚು ಇದೆ. ಟ್ರ್ಯಾಕ್ಟರ್‌ ಗಳು ರಸ್ತೆ ಸರಿಯಾಗಿ ಇರುವ ಕಡೆಗಳಲ್ಲಿಯೇ ಸರಿಯಾಗಿ ಸಂಚರಿಸುವುದಿಲ್ಲ. ಇನ್ನು ಇಂತಹ ತಗ್ಗು ದಿನ್ನೆಗಳಲ್ಲಿ ಕೇಳುತ್ತಿರಾ. ಆಕಡೆ ಈಕಡೆ ತಿರುಗಾಡುತ್ತ ಹೊರಟರೆ ಸಾಕು ಅಲ್ಲಿರುವ ಸಾರ್ವಜನಿಕರು ಎಲ್ಲಿ ತಮ್ಮ ಮೇಲೆ ಟ್ರ್ಯಾಕ್ಟರ್‌ ಬಿದ್ದೆ ಬಿಡುವುದೇನೊ ಎಂಬ ಭಾಷವಾಗುತ್ತದೆ. ಸಂಜೆಯಾದರೆ ಸಾಕು ಈ ರಸ್ತೆಯಿಂದ ಸ್ವಲ್ಪ ದೂರ ಸಂಚರಿಸಬೇಕಾದರೂ ಜೀವವನ್ನು ಕೈಯಲ್ಲಿಯೇ ಇಟ್ಟುಕೊಂಡು ಸಂಚರಿಸಬೇಕಾಗಿದೆ ಎನ್ನುತಾರೆ ವಾಹನ ಸವಾರರು.

ಇಕ್ಕಟ್ಟಾದ ರಸ್ತೆ : ಸ್ಥಳೀಯ ಗಾಂಧಿ  ವೃತ್ತದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಎರಡು ಬದಿಗಳಲ್ಲಿ ರಾಜ್ಯ ಹೆದ್ದಾರಿ ಇಕ್ಕಟ್ಟಾಗಿದೆ. ಮುಧೋಳ, ಬಾಗಲಕೋಟೆ, ಹುಬ್ಬಳ್ಳಿ, ಜಮಖಂಡಿ, ವಿಜಯಪುರಗಳಿಗೆ ಹೋಗುವ ವಾಹನಗಳು ಇದೆ ರಸ್ತೆಯಲ್ಲಿ ಹಾದು ಸಂಚರಿಸುವುದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ.

ಈ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು ಮೌನಕ್ಕೆ ಶರಣಾಗಿರುವ ಪುರಸಭೆಯ ಮುಖ್ಯಾಧಿಕಾರಿಗಳು, ಸಾರ್ವಜನಿಕರು ರೊಚ್ಚಿಗೆದ್ದು ಉಗ್ರ ಹೋರಾಟ ಮಾಡುವ ಮುನ್ನ ಈ ರಸ್ತೆ ರಿಪೇರಿಗೆ ಮುಂದಾಗಬೇಕು. ಇಲ್ಲದೆ ಹೋದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಯಾರು ಬೆಲೆ ಕಟ್ಟುವವರಾರು ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.

ನಾವು ರಸ್ತೆಯನ್ನು ಅಗೆಯುವ ಮೊದಲೇ ಪುರಸಭೆ ಮುಖ್ಯಾಧಿಕಾರಿಗಳಿಗೆ ಹೇಳಿದ್ದೇವೆ. ರಸ್ತೆ ಅಗೆದು ಕೆಲಸ ಮುಗಿದ ತಕ್ಷಣ ನೀವೆ ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲವಾದಲ್ಲಿ ನಮಗೆ ಅದಕ್ಕೆ ತಗಲುವಷ್ಟು ಹಣ ನೀಡಿದರೆ ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದೇವೆ. ಆದರೆ ಅವರು ಇಲ್ಲಿಯವರೆಗೂ ಯಾವುದನ್ನು ಮಾಡಿಲ್ಲ. ಇದರಲ್ಲಿ ನಮ್ಮದು ಯಾವುದೇ ತಪ್ಪಿಲ್ಲ. -ಎಂ.ಆರ್‌.ಕುಲಕರ್ಣಿ, ರಾಜ್ಯ ಹೆದ್ದಾರಿ ಎ.ಇ.

ತಗ್ಗು ಗುಂಡಿ ಬಿದ್ದ ರಸ್ತೆ ದುರಸ್ತಿಯನ್ನು ನಾವೇ ಮಾಡಬೇಕು. ತಾಂತ್ರೀಕ ಕಾರಣದಿಂದ ವಿಳಂಬವಾಗಿದೆ. ಸದ್ಯ ಪಟ್ಟಣದಲ್ಲಿ ಡಾಂಬರೀಕರಣ ಕಾಮಗಾರಿಗಳು ಪ್ರಾರಂಭವಾಗಿವೆ. ಎರಡು-ಮೂರು ದಿನಗಳಲ್ಲಿ ಹೆದ್ದಾರಿ ಮಧ್ಯೆಯ ಗುಂಡಿಗಳಿಗೆ ಡಾಂಬರೀಕರಣ ಮಾಡುತ್ತೇವೆ. –ಬಿ.ಆರ್‌.ಕಮತಗಿ. ಮುಖ್ಯಾಧಿಕಾರಿಗಳು ಪುರಸಭೆ.

 

-ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

daily-horoscope

ಈ ರಾಶಿಯವರಿಗೆ ಇಂದು ನಿರೀಕ್ಷೆಗೂ ಮೀರಿದ ಧನಾರ್ಜನೆ, ದಂಪತಿಗಳಲ್ಲಿ ಅನುರಾಗ ವೃದ್ಧಿ.

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…

ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…

ರಕ್ಷಣೆಗೆ 7 ಸಂಸ್ಥೆ; 200 ವರ್ಷಗಳ ಹಳೆಯ ಒಎಫ್ ಬಿ ವಿಸರ್ಜನೆ

ರಕ್ಷಣೆಗೆ 7 ಸಂಸ್ಥೆ; 200 ವರ್ಷಗಳ ಹಳೆಯ ಒಎಫ್ ಬಿ ವಿಸರ್ಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bagalakote news

42 ಟನ್‌ ಅಕ್ರಮ ಪಡಿತರ ಅಕ್ಕಿ ವಶ

Channamma VV

ಚನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರಕಗ್ಕೆ ಭೂಮಿ ಕೊಡಿ

dvSVD

ತಂದೆ-ತಾಯಿ ಸುಸಂಸ್ಕೃತ ಸಮಾಜದ ನಿರ್ಮಾಪಕರು

fghfdghdtyh

ಐಪಿಎಲ್ ಬೆಟ್ಟಿಂಗ್‌ಗೆ ಸಾಲ : ಹಣ್ಣಿನ ವ್ಯಾಪಾರಿ ಆತ್ಮಹತ್ಯೆ

xfgdtre

ಖಾಸಗೀಕರಣದಿಂದ ಉದ್ಯೋಗ ಹಾನಿ: ಜಬ್ಟಾರ್‌

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

daily-horoscope

ಈ ರಾಶಿಯವರಿಗೆ ಇಂದು ನಿರೀಕ್ಷೆಗೂ ಮೀರಿದ ಧನಾರ್ಜನೆ, ದಂಪತಿಗಳಲ್ಲಿ ಅನುರಾಗ ವೃದ್ಧಿ.

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.