

Team Udayavani, May 26, 2020, 9:26 AM IST
ಬನಹಟ್ಟಿ: ರಬಕವಿ-ಬನಹಟ್ಟಿಯಲ್ಲಿ ಪಿಯು ಸಿಇಟಿ ಪರೀಕ್ಷಾ ಕೇಂದ್ರ ಸ್ಥಾಪಿಸುವುದರಿಂದ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆ ಗಮನ ನೀಡಬೇಕು ಎಂದು ಸ್ಥಳೀಯ ಮುಖಂಡ ಧರೆಪ್ಪ ಉಳ್ಳಾಗಡ್ಡಿ ಆಗ್ರಹಿಸಿದರು.
ಪಿಯು ಸಿಇಟಿ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಕೋವಿಡ್-19 ಈ ಸಂದರ್ಭದಲ್ಲಿ ಈ ಭಾಗದ ವಿದ್ಯಾರ್ಥಿಗಳು ಜಮಖಂಡಿಗೆ ಹೋಗಿ ಪರೀಕ್ಷೆ ಬರೆಯಬೇಕಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ತೊಂದರೆ ಅನುಭವಿಸುತ್ತಾರೆ. ಅವಳಿ ನಗರದಲ್ಲಿ ಸಿಇಟಿ ಕೇಂದ್ರ ಸ್ಥಾಪಿಸಿದರೆ ಸಾಮಾಜಿಕ ಅಂತರ ಮತ್ತು ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಅನುಕೂಲವಾಗುತ್ತದೆ ಎಂದರು.
ಉದ್ದಿಮೆದಾರ ಗೋಪಾಲ ಭಟ್ಟಡ ಮಾತನಾಡಿ, ರಬಕವಿ-ಬನಹಟ್ಟಿಯಲ್ಲಿ ಸಿಇಟಿ ಕೇಂದ್ರ ಸ್ಥಾಪಿಸುವುದರಿಂದ ಮಹಾಲಿಂಗಪುರ ಮತ್ತು ತೇರದಾಳ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇಲ್ಲಿಯೂ ಕೂಡಾ ಸುಸಜ್ಜಿತ ಕಾಲೇಜುಗಳು ಇರುವುದರಿಂದ ಪರೀಕ್ಷೆ ನಡೆಸಲು ತೊಂದರೆಯಾಗುವುದಿಲ್ಲ ಎಂದರು.
ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ಶ್ರೀಶೈಲ ಯಾದವಾಡ, ವಿಶ್ವಜ ಕಾಡದೇವರ, ಕಿರಣ ಆಳಗಿ ಇದ್ದರು.
Ad
Ballari: ವಿಧಾನ ಪರಿಷತ್ ಮಾಜಿ ಸಭಾಪತಿ ಎನ್. ತಿಪ್ಪಣ್ಣ ನಿಧನ
Chikkamagaluru: ದನಗಳ್ಳತನ; ವಾಹನ ಅಡ್ಡಗಟ್ಟಿದ ಪೊಲೀಸರ ಮೇಲೆ ರಾಡ್ ಬೀಸಿದ ಕಳ್ಳರು
Tragedy: ಹೃದಯಾಘಾತದಿಂದ ಹುಲಸೂರ ಸರಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಮೃ*ತ್ಯು
Shivamogga: ಎಣ್ಣೆ ಪಾರ್ಟಿಯಲ್ಲಿ ಕಿರಿಕ್… ಸ್ನೇಹಿತನ ಮನೆಯಲ್ಲೇ ಗೆಳೆಯನ ಬರ್ಬರ ಹ*ತ್ಯೆ
ಎಲ್.ಕೆ.ಆಡ್ವಾಣಿ ಯಾತ್ರೆಗೂ ಮುನ್ನ ಸ್ಫೋಟ ನಡೆಸಿದ್ದ ಉಗ್ರ ವಿಜಯಪುರದಲ್ಲಿ ಸೆರೆ
You seem to have an Ad Blocker on.
To continue reading, please turn it off or whitelist Udayavani.