ವಲಸೆ ಕಾರ್ಮಿಕರಿಗೆ ಉಚಿತ ಪಡಿತರ

ಜಿಲ್ಲೆಗೆ 2373.98 ಕ್ವಿಂಟಲ್‌ ಅಕ್ಕಿ ಬಿಡುಗಡೆ ; ತಪ್ಪು ಮಾಹಿತಿ ನೀಡಿದರೆ ಕ್ರಮ

Team Udayavani, May 24, 2020, 7:37 AM IST

ವಲಸೆ ಕಾರ್ಮಿಕರಿಗೆ ಉಚಿತ ಪಡಿತರ

ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಕೋವಿಡ್‌-19 ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೈನಂದಿನ ಉಟೋಪಚಾರಕ್ಕಾಗಿ ವಲಸೆ ಕಾರ್ಮಿಕರು ಹಾಗೂ ಕೋವಿಡ್‌ ಪರಿಸ್ಥಿತಿಯಲ್ಲಿರುವ ರಾಜ್ಯದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಆತ್ಮ ನಿರ್ಭರ್‌ ಭಾರತ ಯೋಜನೆ ಅಡಿಯಲ್ಲಿ ಮೇ ಮತ್ತು ಜೂನ್‌ ಮಾಹೆಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ತಿಳಿಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಈ ವಿಶೇಷ ಯೋಜನೆಯ ಅಕ್ಕಿಯನ್ನು ಸಮರ್ಪಕವಾಗಿ ಹಾಗೂ ನಿಗದಿತ ಅವ ಧಿಯೊಳಗಾಗಿ ಬಳಕೆ ಮಾಡುವ ಬಗ್ಗೆ ಜಿಲ್ಲೆಗೆ 2373.98 ಕ್ವಿಂಟಲ್‌ ಅಕ್ಕಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಂಚಿಕೆ ಪಡೆಯುತ್ತಿರಬಾರದು. ಇದನ್ನು ಪರಿಶೀಲಿಸಿ ಖಾತ್ರಿ ಪಡಿಸಲು ಎಲ್ಲ ಫಲಾನುಭವಿಗಳಿಂದಲೂ ಅವರ ಆಧಾರ್‌ ಸಂಖ್ಯೆಯನ್ನು ಪಡೆದು ಆನ್‌ ಲೈನ್‌ ತಂತ್ರಾಂಶದಲ್ಲಿ ಪರಿಶೀಲಿಸಿ ವಿತರಿಸಲಾಗುತ್ತದೆ. ಪ್ರತಿ ಫಲಾನುಭವಿಯ ಆಧಾರ ಸಂಖ್ಯೆ ಪರಿಶೀಲಿಸಿ ಅವರ ಮೊಬೈಲ್‌ಗೆ ಓಟಿಪಿ ಬಂದ ನಂತರ ಅದನ್ನು ದಾಖಲಿಸಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಮೇ 2020ರ ಮಾಹೆಗೆ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯನ್ನು ಮೇ 26ರಿಂದ 31ರವರೆಗೆ ವಿತರಿಸಲಾಗುವುದು.  ಹಾಗೂ ಜೂನ್‌ ಮಾಹೆಯಲ್ಲಿ ಜೂನ್‌ 1ರಿಂದ 10 ರವರೆಗೆ 5 ಕೆಜಿ ಅಕ್ಕಿ ಹಾಗೂ ಕೇಂದ್ರ ಸರ್ಕಾರವು ಹಂಚಿಕೆ ಮಾಡುವ ಕಡಲೆ ಕಾಳನ್ನು ವಿತರಿಸಲಾಗುವುದು. ಮೇ ತಿಂಗಳಲ್ಲಿ ಆಹಾರಧಾನ್ಯವನ್ನು ಪಡೆಯದ ವಲಸೆ ಫಲಾನುಭವಿಗಳು ಜೂನ್‌ ತಿಂಗಳಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕಡಲೆ ಕಾಳನ್ನು ಪಡೆಯಲು ಅರ್ಹರಿರುತ್ತಾರೆ ಎಂದು
ವಿವರಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಲಸಿಗರಿಗೆ ಒದಗಿಸುವ ಸೌಲಭ್ಯಗಳನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್‌
52ರಡಿ ಅಂತಹವರಿಗೆ ದಂಡ ಅಥವಾ ದಂಡದ ಜೊತೆಗೆ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಜಿಲ್ಲೆಯ ಎಲ್ಲ ಪಟ್ಟಣ ಪ್ರದೇಶದ ಆಯ್ದ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವುದು ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕು ಕಚೇರಿಯ ಆಹಾರ ಶಾಖೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಲಸಿಗ ಫಲಾನುಭವಿಗಳು ಯಾವುದೇ ಪಡಿತರ ಚೀಟಿ ಹೊಂದಿರಬಾರದು. ಸ್ವಂತ ಮನೆ ಹೊಂದಿರತಕ್ಕದ್ದಲ್ಲ. ಆದಾಯ ತೆರಿಗೆ ಪಾವತಿಸುತ್ತಿರಬಾರದು. ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಒಂದು ಜಿಲ್ಲೆಯಿಂದ  ಮತ್ತೂಂದು ಜಿಲ್ಲೆಗೆ ಮತ್ತು ಒಂದು ತಾಲೂಕಿನಿಂದ ಮತ್ತೂಂದು ತಾಲೂಕಿಗೆ ಜೀವನ ನಿರ್ವಹಣೆಗೆ ಹೋಗುವವರನ್ನು ವಲಸಿಗರೆಂದು ಪರಿಗಣಿಸಲಾಗುತ್ತದೆ.
ಕ್ಯಾಪ್ಟನ್‌ ಡಾ|ರಾಜೇಂದ್ರ, ಡಿಸಿ

Ad

ಟಾಪ್ ನ್ಯೂಸ್

Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!

Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!

Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು

Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

11-belagavi

Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ

Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು

Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು

ʼManjummel Boysʼ ಹಣಕಾಸು ವಿವಾದ: ಖ್ಯಾತ ನಟ ಸೌಬಿನ್ ಶಾಹಿರ್ ಸೇರಿ ಮೂವರ ಬಂಧನ – ಬಿಡುಗಡೆ

ʼManjummel Boysʼ ಹಣಕಾಸು ವಿವಾದ: ಖ್ಯಾತ ನಟ ಸೌಬಿನ್ ಶಾಹಿರ್ ಸೇರಿ ಮೂವರ ಬಂಧನ – ಬಿಡುಗಡೆ

8-ckm

ವಿದ್ಯಾರ್ಥಿನಿಯರ ಆತ್ಮಹ*ತ್ಯೆ ಪ್ರಕರಣ; ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

4-mudhol

ರಸ್ತೆ ಸಂಚಾರ ತಡೆದು ಪ್ರತಿಭಟನೆ; ಹೆದ್ದಾರಿ ಪಕ್ಕದ ಡಿವೈಡರ್ ತೆರವಿಗೆ ಗ್ರಾಮಸ್ಥರು ಆಕ್ರೋಶ

13

Badami: ಕಟ್ಟಡ ರೆಡಿಯಾದ್ರೂ ಶುರುವಾಗದ ಕ್ಯಾಂಟೀನ್‌

12

Mudhol: ಉತ್ತಿಬಿತ್ತಿ ಬೆಳೆದ ಲಾವಣಿ ಪಡೆದ ರೈತರಿಗಿಲ್ಲ ಪರಿಹಾರ

15

Mudhol: ಅರಣ್ಯದಂಚಿನಲ್ಲಿ ಶಮನವಾಗದ ಸಂಘರ್ಷ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

12-gundlupete

Gundlupete: ಪಾಠ ಕೇಳುತಿದ್ದ ವೇಳೆ ಹೃದಯಾಘಾತವಾಗಿ ವಿದ್ಯಾರ್ಥಿ ಸಾ*ವು

Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!

Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!

Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು

Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

13

Kota: ಟಿಲ್ಲರ್‌ನಿಂದ ಟ್ಯಾಕ್ಟರ್‌ ಕಡೆಗೆ ಮುಖ ಮಾಡಿದ ರೈತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.