
ಗುಳೇದಗುಡ್ಡ: ಲೇಔಟ್‌ಗಳ ಅನುಮೋದನೆಗೆ ಸದಸ್ಯರ ಒತ್ತಾಯ
ಎಲ್‌ಇಡಿ ದೀಪ ಇಲ್ಲದಿರುವ ಬಗ್ಗೆ ಸದಸ್ಯ ಕಾಶಿನಾಥ ಕಲಾಲ ಅವರು ದೂರಿದರು.
Team Udayavani, Mar 30, 2023, 4:16 PM IST

ಗುಳೇದಗುಡ್ಡ: ಈ ಮೊದಲು ಪುರಸಭೆಯಿಂದ ಅನುಮೋದನೆಗೊಳಲ್ಪಟ್ಟ ವಸತಿ ಮತ್ತು ವಾಣಿಜ್ಯ ಉದ್ದೇಶಿತ ವಿನ್ಯಾಸಗಳು ಇಂದಿಗೂ ಅಭಿವೃದ್ಧಿಯಾಗಿಲ್ಲ. ಹಿಂದೆ ವಿನ್ಯಾಸಕ್ಕೊಳಪಟ್ಟ ಲೇಔಟ್‌ಗಳನ್ನು ನೋಡಿ, ನಂತರ ಸದ್ಯ ಬಂದಿರುವ ಲೇಔಟ್‌ಗಳಿಗೆ ಅನುಮೋದನೆ ಮಾಡಿ ಎಂದು ಪಟ್ಟಣದ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷೆ ಯಲ್ಲವ್ವ ಗೌಡರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಮನಿರ್ದೇಶನ ಸದಸ್ಯರು ಆಗ್ರಹಿಸಿದರು.
ಈ ಹಿಂದಿನ ಲೇಔಟ್‌ಗಳಲ್ಲಿ ಮುಳ್ಳುಕಂಠಿ ಬೆಳೆದಿವೆ. ಮಾಲಿಕರು ರಸ್ತೆ ಇನ್ನಿತರ ಸೌಲಭ್ಯಕ್ಕಾಗಿ ಕಳಪೆ ಕಾಮಗಾರಿ ಮಾಡಿದ್ದರಿಂದ ನಿವೇಶನ ಖರೀದಿಸುವವರಿಗೆ ಮೋಸವಾಗುತ್ತಿದೆ. ಹಿಂದೆ ವಿನ್ಯಾಸಕ್ಕೊಳಪಟ್ಟ ಲೇಔಟ್‌ಗಳನ್ನು ನೋಡಿ, ನಂತರ ಇವುಗಳಿಗೆ ಅನುಮೋದನೆ ಮಾಡಿ ಎಂದು ನಾಮನಿರ್ದೇಶನ ಸದಸ್ಯ ಶಿವಾನಂದ ಎಣ್ಣಿ ಸಲಹೆ ನೀಡಿದರು.
ವಸತಿ ಮತ್ತು ವಾಣಿಜ್ಯ ಉದ್ದೇಶದಿಂದ ಸದ್ಯ ವಿನ್ಯಾಸ ನಕ್ಷೆ ಅನುಮೋದನೆಗೆ ಬಂದ ಕಡತಗಳನ್ನು ಕುಲಂಕುಶವಾಗಿ ಪರೀಕ್ಷಿಸೋಣ. ಹಿಂದಿನವುಗಳನ್ನೂ ನೋಡಿ, ಕಳಪೆಯಾದ ಲೇಔಟ್ ಮಾಲೀಕರಿಗೆ ನೋಟಿಸ್ ನೀಡೋಣ ಎಂದು ಅಧ್ಯಕ್ಷರು ಹೇಳಿದ್ದರಿಂದ ಎಲ್ಲ ಸದಸ್ಯರೂ ಒಪ್ಪಿಗೆ ಸೂಚಿಸಿದರು.
ವಿರೋಧ: ಸಭೆಯ ಎಲ್ಲ ವಿಷಯಗಳ ಅನುಮೋದನೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜು ಹೆಬ್ಬಳ್ಳಿ, ಶರೀಫಾ ಮಂಗಳೂರ, ವಿದ್ಯಾ ಮುರಗೋಡ ಹಾಗೂ ರಾಜವ್ವ ಹೆಬ್ಬಳ್ಳಿ ವಿರೋಧಿಸಿ ಬರೆದು ಸಹಿ ಮಾಡಿದ್ದ ಪತ್ರವನ್ನು ಅಧ್ಯಕ್ಷರಿಗೆ ನೀಡಿದರು. ಉಳಿದೆಲ್ಲ ಸದಸ್ಯರೂ ಬಹುಮತದ ಒಪ್ಪಿಗೆ ಸೂಚಿಸಿದ್ದರಿಂದ ಎಲ್ಲ ವಿಷಯಗಳು ಅನುಮೋದನೆಗೆ ಒಳಪಟ್ಟವು.
ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಸದಸ್ಯರ ಕಡೆಗಣನೆ ಮಾಡಿದ್ದಕ್ಕೆ 3 ಜನ ಸದಸ್ಯರಿಂದ ವಿರೋಧ, ಭಾರತ ಮಾರುಕಟ್ಟೆಯಲ್ಲಿ ವರ್ಷದಿಂದ ಎಲ್‌ಇಡಿ ದೀಪ ಇಲ್ಲದಿರುವ ಬಗ್ಗೆ ಸದಸ್ಯ ಕಾಶಿನಾಥ ಕಲಾಲ ಅವರು ದೂರಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ಫಕ್ರುದ್ಧೀನ ಹುಲ್ಲಕೇರಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ಗೌಡರ, ಉಪಾಧ್ಯಕ್ಷೆ ನಾಗರತ್ನಾ ಲಕ್ಕುಂಡಿ, ಸ್ಥಾಯಿ ಸಮಿತಿ ಚೇರ್‌ಮನ್ ವಿನೋಧ ಮದ್ದಾನಿ, ಸದಸ್ಯರಾದ ವಿಠಲ ಕಾವಡೆ, ಪ್ರಶಾಂತ ಜವಳಿ, ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ರಾಜು ಹೆಬ್ಬಳ್ಳಿ, ವಂದನಾ ಭಟ್ಟಡ, ಯಲ್ಲಪ್ಪ ಮನ್ನಿಕಟ್ಟಿ, ಅಮರೇಶ ಕವಡಿಮಟ್ಟಿ, ಹನಮಂತ ಗೌಡ್ರ ಸೇರಿದಂತೆ 19 ಜನ ಸದಸ್ಯರು 3 ಜನ ನಾಮನಿರ್ದೇಶನ ಸದಸ್ಯರು, ವ್ಯವಸ್ಥಾಪಕ ರಮೇಶ ಪದಕಿ, ಕುಮಾರ ತಟ್ಟಿಮಠ ಹಾಜರಿದ್ದರು.
ಅಜೆಂಡಾ..
*ನಗರೋತ್ಥಾನ ಹಂತ 4ರ ಯೋಜನೆಯ ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡುವ ಕುರಿತು ಮತ್ತು 2022-23ನೇ ಸಾಲಿನ ಎಸ್.ಎಫ್.ಸಿ. ಯೋಜನೆ ಫಲಾನುಭವಿಗಳನ್ನು ಸಾಮಾನ್ಯ ಸಭೆ ಮಂಜೂರಾತಿ ಮುನ್ನ ನಿರೀಕ್ಷಿಸಿ ಆಯ್ಕೆ ಮಾಡಿದ್ದನ್ನು ದೃಢೀಕರಿಸುವುದು.
*ಪುರಸಭೆ ವ್ಯಾಪ್ತಿಯ 6 ಜನ ಮಾಲೀಕರ ಭಿನ್‌ಶೇತ್ಕಿ ಆಗಿರುವ ವಸತಿ ಮತ್ತು ವಾಣಿಜ್ಯ
ಉದ್ದೇಶಕ್ಕಾಗಿ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವುದು.
*ಪುರಸಭೆ ಮಾಲ್ಕಿಯ ಭಾರತ ಮಾರುಕಟ್ಟೆ ಮತ್ತು ಹೊಸಪೇಟೆ ಮಾರುಕಟ್ಟೆಯಲ್ಲಿ
ಮೂಲಭೂತ ಸೌಕರ್ಯ ಒದಗಿಸುವುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
