
ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ
Team Udayavani, Jun 1, 2023, 8:41 PM IST

ಮಹಾಲಿಂಗಪುರ: ಗುರುವಾರ ಸಂಜೆ 7 ರಿಂದ 8 ರವರೆಗೆ ಪಟ್ಟಣದಲ್ಲಿ ಭಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.
ಈ ಮೂಲಕ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆ ನಿಟ್ಟುಸಿರು ಬೀಡುವಂತಾಗಿದೆ.
ಬಿರುಗಾಳಿ : ಮಳೆಯ ಜೊತೆಗೆ ಬೀಸಿದ ಬಿರುಗಾಳಿಯಿಂದಾಗಿ ಪಟ್ಟಣದ ಬಸವನಗರ, ಬುದ್ನಿಪಿಡಿ, ಕೆಂಗೇರಿಮಡ್ಡಿ ಸೇರಿದಂತೆ ಹಲವು ಭಾಗಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು.
ವಿಪರೀತ ಗಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ತೋಟಗಳಲ್ಲಿನ ತಗಡು ಶೀಟುಗಳು ಹಾರಿ ಹೋಗಿದ್ದು ರೈತರು ಪರದಾಡುವಂತಾಯಿತು.
ಮರ ಬಿದ್ದು ಟ್ರಾಫಿಕ್ ಜಾಮ್: ವಿಪರೀತ ಗಾಳಿಗೆ ರಬಕವಿ ರಸ್ತೆಯ ಗಿರಿಮಲ್ಲೆಶ್ವರ ಆಶ್ರಮ ಹತ್ತಿರ ಮತ್ತು ಪೊಲೀಸ್ ಠಾಣೆಯ ಬಳಿ ಬೃಹತ್ ಮರಗಳು ಬಿದ್ದ ಪರಿಣಾಮ ಕೆಲವು ಗಂಟೆಗಳವರೆಗೆ ಟ್ರಾಫಿಕ್ ಜಾಮ್ ಆಗಿ, ವಾಹನ ಸವಾರರು ಪರದಾಡುವಂತಾಗಿದೆ.
ಟಾಪ್ ನ್ಯೂಸ್
