ಅಂಗವಿಕಲ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ

ಶಿಕ್ಷಕರು ಕಾಳಜಿ ತೋರುವ ಮೂಲಕ ಎಲ್ಲ ಮಕ್ಕಳಿಗೂ ಸಮಾನ ಅವಕಾಶ ತಲುಪಿಸಲಾಗುತ್ತಿದೆ

Team Udayavani, Dec 4, 2021, 1:23 PM IST

ಅಂಗವಿಕಲ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ

ಬಾದಾಮಿ: ಅಂಗವಿಕಲ ಮಕ್ಕಳೂ ಸಹಿತ ಇತರ ಮಕ್ಕಳಂತೆ ಸಮಾನರು. ಇವರಿಗೆ ಸೌಲಭ್ಯಗಳನ್ನು ಕೊಡುವುದರ ಜತೆಗೆ ಆತ್ಮಸ್ಥೈರ್ಯ ತುಂಬಬೇಕಿದೆ ಎಂದು ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾ ಧಿಕಾರಿ ಎಸ್‌.ಕೆ.ಕಲ್ಲೂರ ಹೇಳಿದರು.

ಕಬ್ಬಲಗೇರಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ತಾಲೂಕು ಯೋಜನಾ ಸಮನ್ವಯಾ ಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರ ಅಂಗವಿಕಲರಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಶಿಕ್ಷಣ ಇಲಾಖೆಯೂ ಸೇರಿದಂತೆ ಇತರ ಇಲಾಖೆಯ ಯೋಜನೆ ತಲುಪಿಸುವುದರ ಜತೆಗೆ ಶಿಕ್ಷಕರು ಆತ್ಮಸ್ಥೈರ್ಯ ತುಂಬಬೇಕಿದೆ ಎಂದು ಹೇಳಿದರು.

ಕ್ಷೇತ್ರ ಸಮನ್ವಯಾ ಧಿಕಾರಿ ಎಸ್‌.ವೈ. ಮಡಿವಾಳರ ಮಾತನಾಡಿ, ಸಮಗ್ರ ಶಿಕ್ಷಣ ಯೋಜನೆಯಡಿ ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ಶಿಬಿರ, ಸಾಧನ ಸಲಕರಣೆ ವಿತರಣೆ, ಶಿಕ್ಷಕರಿಗೆ ತರಬೇತಿ, ಪಿಜಿಯೋಥೆರಪಿ ಸೇರಿದಂತೆ ಅನೇಕ ಯೋಜನೆಗಳಿಗೆ ಅವುಗಳನ್ನು ಮಕ್ಕಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಕರು ಕಾಳಜಿ ತೋರುವ ಮೂಲಕ ಎಲ್ಲ ಮಕ್ಕಳಿಗೂ ಸಮಾನ ಅವಕಾಶ ತಲುಪಿಸಲಾಗುತ್ತಿದೆ ಎಂದು ಹೇಳಿದರು.

ಪ್ರೌಢಶಾಲಾ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಿ.ಬಿ.ಹಡಗಲಿ ಮಾತನಾಡಿದರು. ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ವೈ.ಎಫ್‌.ಶರೀಫ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರವಿ ಕಂಗಳ, ಬಿ.ಎಫ್‌. ಕುಂಬಾರ, ಹಲಕುರ್ಕಿ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ ಕೋಟನಕರ, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಎನ್‌.ಡಿ.ಬೀಳಗಿ, ಎಚ್‌.ಆರ್‌.ಕಡಿವಾಲ, ಎಸ್‌ಡಿಎಂಸಿ ಸದಸ್ಯ ಭೀಮಪ್ಪ ತಳವಾರ ಹಾಜರಿದ್ದರು.

ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿ ಎಸ್‌.ಕೆ. ಕಲ್ಲೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ವೈ. ಮಡಿವಾಳರ ಮತ್ತು ಸ್ಥಳೀಯ ಶಾಲೆ ವಿಕಲಚೇತನ ಶಿಕ್ಷಕ ಎಸ್‌.ಎಸ್‌. ಕಂಬಾಳಿಮಠ, ಅಂತಾ‌ರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಸಿದ್ದಾರೂಢ ಕೊಪ್ಪದ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಾಲ್ಕು ಜನ ವಿಕಲಚೇತನ ವಿದ್ಯಾರ್ಥಿಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಎಸ್‌.ಎಸ್‌. ಚೌಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕರಾದ ಈರಣ್ಣ ಹಲಗಲಿ ಸ್ವಾಗತಿಸಿದರು. ಶಿವಯೋಗಿ ಕುಂಬಾರ ನಿರೂಪಿಸಿದರು. ಕೆ.ಎಸ್‌. ಮಸಬಿನಾಳ ವಂದಿಸಿದರು. ಶಾಲಾ ಮಕ್ಕಳು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಜರಿದ್ದರು.

ಟಾಪ್ ನ್ಯೂಸ್

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ಪಣಜಿ: ಜೂನ್ 1ರಿಂದ ಮೀನುಗಾರಿಕೆಗೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

ಪಣಜಿ: ಜೂನ್ 1ರಿಂದ ಮೀನುಗಾರಿಕೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

police crime

UP ಇಬ್ಬರು ಸ್ಮಗ್ಲರ್ ಗಳ ಬಂಧನ; 2.5 ಕೋಟಿ ರೂ. ಡ್ರಗ್ಸ್ ವಶ

IPL 2023 Final: Dhoni won the toss against GT

GTvsCSK ಮೀಸಲು ದಿನದ ಐಪಿಎಲ್ ಫೈನಲ್: ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ

arrest-25

Kerala ಜೈಲಿನಲ್ಲಿ ಮಟನ್ ಕರಿಗಾಗಿ ಅಪರಾಧಿಯಿಂದ ಜೈಲರ್‌ಗಳಿಗೆ ಥಳಿತ!

ಅಳಿವಿನಂಚಿನಲ್ಲಿರುವ ಗೀಜಗನ ಹಕ್ಕಿ ಗೂಡುಗಳು… 

ಅಳಿವಿನಂಚಿನಲ್ಲಿರುವ ಗೀಜಗದ ಹಕ್ಕಿ ಗೂಡುಗಳು… ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ

ganja

ಆಂಧ್ರದಿಂದ ಮಂಗಳೂರಿಗೆ 23 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಳಿವಿನಂಚಿನಲ್ಲಿರುವ ಗೀಜಗನ ಹಕ್ಕಿ ಗೂಡುಗಳು… 

ಅಳಿವಿನಂಚಿನಲ್ಲಿರುವ ಗೀಜಗದ ಹಕ್ಕಿ ಗೂಡುಗಳು… ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ

ಬಾದಾಮಿ: ಮಲ್ಲಮ್ಮ ಆದರ್ಶ ಎಲ್ಲರಿಗೂ ದಾರಿದೀಪ

ಬಾದಾಮಿ: ಮಲ್ಲಮ್ಮ ಆದರ್ಶ ಎಲ್ಲರಿಗೂ ದಾರಿದೀಪ

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

durgamma

ಅತಂತ್ರವಾಗಿರುವ ದುರ್ಗಮುರ್ಗವ್ವ ಅಲೆಮಾರಿಗರ ಬದುಕು…

ರನ್ನನ ನಾಡಿಗೆ ಮತ್ತೆ ಒಲಿದ ಸಚಿವ ಸ್ಥಾನ: ಸಿದ್ದು ಕ್ಯಾಬಿನೆಟ್ ಗೆ ಆರ್.ಬಿ. ತಿಮ್ಮಾಪುರ

ರನ್ನನ ನಾಡಿಗೆ ಮತ್ತೆ ಒಲಿದ ಸಚಿವ ಸ್ಥಾನ: ಸಿದ್ದು ಕ್ಯಾಬಿನೆಟ್ ಗೆ ಆರ್.ಬಿ. ತಿಮ್ಮಾಪುರ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

Minchu

Shivamogga: ಸಿಡಿಲು ಬಡಿದು ಮಹಿಳೆ ಮೃತ್ಯು

1-sadsd

Koratagere ಟೋಲ್ ತೆರವಿಗೆ ಗಡುವು ನೀಡಿದ ಸಚಿವ ಕೆ.ಎನ್.ರಾಜಣ್ಣ

ಪಣಜಿ: ಜೂನ್ 1ರಿಂದ ಮೀನುಗಾರಿಕೆಗೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

ಪಣಜಿ: ಜೂನ್ 1ರಿಂದ ಮೀನುಗಾರಿಕೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

police crime

UP ಇಬ್ಬರು ಸ್ಮಗ್ಲರ್ ಗಳ ಬಂಧನ; 2.5 ಕೋಟಿ ರೂ. ಡ್ರಗ್ಸ್ ವಶ