Udayavni Special

“ಜಲಜೀವನ’ ಸಮರ್ಪಕ ಅನುಷ್ಠಾನ

337 ಗ್ರಾಮಗಳಿಗೆ ಕಾರ್ಯಾತ್ಮಕ ನಲ್ಲಿಯಲ್ಲಿ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿ

Team Udayavani, Jul 18, 2021, 9:52 PM IST

17 bgk-2

ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ನೀಡುವ ಜಲ ಜೀವನ್‌ ಮಿಷನ್‌ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಮುದಾಯ ವಂತಿಗೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಪಂ ಆಡಳಿತಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.

ಜಿಪಂ ಸಿಇಒ ಕಚೇರಿಯಲ್ಲಿಂದು ವಿಡಿಯೋ ಸಂವಾದದ ಮೂಲಕ ಜರುಗಿದ ಜಲಜೀವನ ಮಿಷನ್‌ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲ ಜೀವನ ಮಿಷನ್‌ ಸಂಪೂರ್ಣ ಸಮುದಾಯ ಆಧಾರಿತ ಯೋಜನೆಯಾಗಿದ್ದು, ಸ್ಥಳೀಯ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡು ಸಂಪೂರ್ಣ ಸಹಕಾರ ಪಡೆಯುವ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಮೊದಲನೇ ಹಂತದಲ್ಲಿ 2020-21ನೇ ಸಾಲಿನಲ್ಲಿ ಒಟ್ಟು 337 ಗ್ರಾಮಗಳಿಗೆ ಕಾರ್ಯಾತ್ಮಕ ನಲ್ಲಿ ನೀರನ್ನು ಒದಗಿಸುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅದರಲ್ಲಿ 65 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಇದರಿಂದ ಸುಮಾರು 1.56 ಲಕ್ಷ ಗ್ರಾಮೀಣ ಪ್ರದೇಶದ ಮನೆಗಳಿಗೆ 55 ಲೀಟರ್‌ ಶುದ್ದ ಹಾಗೂ ಸುರಕ್ಷಿತ ನೀರನ್ನು ಒದಗಿಸಲು ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಅದರಂತೆ 2ನೇ ಹಂತದಲ್ಲಿ ಒಟ್ಟು 77 ಗ್ರಾಮಗಳಲ್ಲಿ ಕಾಮಗಾಗಿ ಕೈಗೊಳ್ಳಲಾಗುತ್ತಿದ್ದು, ಅದರಲ್ಲಿ 26 ಸಾವಿರ 2022-23ನೇ ಸಾಲಿನ ಅಂತ್ಯದಲ್ಲಿ ಎಲ್ಲ 414 ಗ್ರಾಮಗಳ ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದ್ದು, ಅನುಷ್ಠಾನಕ್ಕೆ ಕ್ರಮವಹಿಸಬೇಕು ಎಂದು ಹೇಳಿದರು.

ಯೋಜನೆಯ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ವಿನ್‌ ಸೊಸೈಟಿ ಅನುಷ್ಠಾನ ನೆರವು ಸಂಸ್ಥೆಯ ನೇಮಕ ಮಾಡಲಾಗಿದೆ. ಗ್ರಾಮ ಮಟ್ಟದಲ್ಲಿ ಯೋಜನೆಯ ಕುರಿತು ವಿವಿಧ ಆಯ್‌.ಇ.ಸಿ ಹಾಗೂ ಎಚ್‌ಆರ್‌ಡಿ ಚಟುವಟಿಕೆಗಳಾದ ಬೀದಿ ನಾಟಕಗಳು, ಅಧಿಕಾರಿಗಳಿಗೆ ಕಾರ್ಯಾಗಾರ, ಶಾಲೆಗಳಲ್ಲಿ ಕಿರು ಚಿತ್ರಗಳ ಪ್ರದರ್ಶನ, ವಿಶೇಷ ಗ್ರಾಮ ಸಭೆಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಗ್ರಾಮ ಮಟ್ಟದ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರಿಗೆ ತರಬೇತಿ ನೀಡುವುದು, ತಳ ಹಂತದ ಕಾರ್ಮಿಕರಿಗೆ ಹಾಗೂ ಕಾರ್ಯಕರ್ತರಿಗೆ ತರಬೇತಿ ನೀಡಲು ತಿಳಿಸಿದರು.

ತಾಲೂಕುವಾರು ಜಲ ಜೀವನ್‌ ಮಿಷನ್‌ ಯೋಜನೆ ಅನುಷ್ಠಾನದ ಕುರಿತು ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿ ಕಾರಿಗಳಿಂದ ಮಾಹಿತಿ ಪಡೆದು ಅಧಿಕಾರಿಗಳು ಯೋಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ತೆರಳಿ ಕಾಮಗಾರಿ ಪರಿಶೀಲಿಸಬೇಕು. ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಜವಾಬ್ದಾರಿ ವಹಿಸಿ ಕೆಲಸ ಮಾಡುವ ಮೂಲಕ ಪ್ರತಿ ಮನೆಗೂ ನಲ್ಲಿ ಜೋಡನೆಗೆ ಕ್ರಮವಹಿಸಲು ತಿಳಿಸಿದರು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪುರೋಹಿತ, ಜಗಲಿಮಠ, ಮರೋಳ, ಕಿರಣ ಗೋರ್ಪಡೆ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಉಕ್ಕಲಿ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

Untitled-1

ನೋಟು ಮುದ್ರಣ ಇಲ್ಲ 

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

Untitled-1

ಛಲದಂಕಮಲ್ಲ ಬಿಎಸ್‌ವೈಗೆ ಗೌರವಯುತ ನಿರ್ಗಮನ

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

Untitled-1

ಆತ್ಮೀಯತೆಯ ತಾಯಿ ಹೃದಯಿ ಯಡಿಯೂರಪ್ಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dryryry5

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯ

ಹಿಪ್ಪರಗಿ ಜಲಾಶಯಕ್ಕೆ 393000 ಕ್ಯೂಸೆಕ್ ನೀರು

ಹಿಪ್ಪರಗಿ ಜಲಾಶಯಕ್ಕೆ 393000 ಕ್ಯೂಸೆಕ್ ನೀರು

ಹಿಪ್ಪರಗಿ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಮನೆಗಳ ಜಲಾವೃತ

ಹಿಪ್ಪರಗಿ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಮನೆಗಳ ಜಲಾವೃತ

incident held at banahatti

ಮದನಮಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತ

dfgfrrerer

ಆಸರೆ ಮನೆಗಳಿಗೆ ಸ್ಥಳಾಂತರಗೊಳ್ಳಿ : ಉಸ್ತುವಾರಿ ಸಚಿವ ಉಮೇಶ್ ಕತ್ತಿ

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

Untitled-1

ನೋಟು ಮುದ್ರಣ ಇಲ್ಲ 

ಕೊಟ್ಟ ಮಾತಿಗೆ ತಪ್ಪುತ್ತಿರಲಿಲ್ಲ!

ಕೊಟ್ಟ ಮಾತಿಗೆ ತಪ್ಪುತ್ತಿರಲಿಲ್ಲ!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ಟಿ20 ಸರಣಿ ಮೇಲೂ ಭಾರತ ಕಣ್ಣು

ಟಿ20 ಸರಣಿ ಮೇಲೂ ಭಾರತ ಕಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.