ಅಫ್ಘಾನಿಸ್ತಾನದ ಅಪಾಯದ ಕೂಪದಿಂದ ಪಾರಾದ ಮುಧೋಳ ಮೂಲದ ಯೋಧ ಮಂಜುನಾಥ ಮಾಳಿ


Team Udayavani, Aug 21, 2021, 7:15 PM IST

ಅಫ್ಘಾನಿಸ್ತಾನದ ಅಪಾಯದ ಕೂಪದಿಂದ ಪಾರಾದ ಮುಧೋಳ ಮೂಲದ ಯೋಧ ಮಂಜುನಾಥ ಮಾಳಿ

ಮುಧೋಳ: ತಾಲಿಬಾನಿಗಳ ಕ್ರೌರ್ಯಕ್ಕೆ ನಲುಗಿರುವ ಅಫ್ಘಾನಿಸ್ತಾನದಿಂದ ಜಿಲ್ಲೆಯ ಯೋಧರೊಬ್ಬರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆಯಿಂದಾಗಿ ದೇಶದ ವಿದೇಶಾಂಗ ಸಚಿವಾಲಯ ಅಲ್ಲಿ ವಾಸಿಸುತ್ತಿದ್ದ ಭಾರತೀಯರನ್ನು ಮರಳಿ ಕರೆಯಿಸಿಕೊಳ್ಳವಲ್ಲಿ ನಿರತವಾಗಿದೆ. ಭಾರತ ಸರ್ಕಾರದ ಪ್ರಯತ್ನದ ಫಲವಾಗಿ ಕಾಬೂಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಐಟಿಬಿಪಿ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದ ಕಸಬಾ ಜಂಬಗಿ ಗ್ರಾಮದ ಯೋಧ ಮಂಜುನಾಥ ಮಾಳಿ ಸುರಕ್ಷಿತವಾಗಿ ದೇಶಕ್ಕೆ ಆಗಮಿಸಿದ್ದಾರೆ.

ಗುಜರಾತ್ ಮೂಲಕ ದೇಶಕ್ಕೆ ಆಗಮನ : ಅಗಸ್ಟ್ 16 ರಂದು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಗುಜರಾತ್‌ನ ಜಾಮ್‌ನಗರಕ್ಕೆ ಭಾರತೀಯ ವಾಯುಸೇನೆಯ ವಿಮಾನದ ಮೂಲಕ ಆಗಮಿಸಿರುವ ಮಂಜುನಾಥ ಅವರು ಸದ್ಯ ದೆಹಲಿಯಲ್ಲಿ ವೈದ್ಯಕೀಯ ತಪಾಸಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಕುಟುಂಬಸ್ಥರಲ್ಲಿ ಸಂತಸ : ದಿನಬೆಳಗಾದರೆ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ನೋಡಿ ತಳಮಳದಲ್ಲಿದ್ದ ಮಂಜುನಾಥ ಮಾಳಿ ಕುಟುಂಬಸ್ಥರು ಸದಾಕಾಲ ಮಂಜುನಾಥನ ಆರೋಗ್ಯದ ಬಗ್ಗೆಯೇ ಕಾಳಜಿ ಮಾಡುತ್ತಿದ್ದರು. ನಮ್ಮ ಮನೆಯ ಮಗ ಸುರಕ್ಷಿತವಾಗಿ ದೇಶಕ್ಕೆ ಮರಳಿದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. 16 ರಂದು ಗುಜರಾತಿನ ಜಾಮ್‌ನಗರದಲ್ಲಿ ವಾಯುಸೇನೆಯ ವಿಮಾನದ ಮೂಲಕ ದೇಶಕ್ಕೆ ಆಗಮಿಸಿದಾಗ ಮನೆ ಮಂದಿಯ ಸಂತಸ ಎಲ್ಲೆ ಮೀರಿತ್ತು.

15 ದಿನದೊಳಗೆ ಮನೆಗೆ : ಸದ್ಯ ದೆಹಲಿಯಲ್ಲಿ ಸುರಕ್ಷಿತವಾಗಿರುವ ಮಂಜುನಾಥ ಮಾಳಿ. 15  ದಿನದೊಳಗೆ ಗ್ರಾಮಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆಂದು ಅವರೊಂದಿಗೆ ಸಂಪರ್ಕದಲ್ಲಿರುವ ಅವರ ಸಹೋದರ ಚನ್ನಬಸಪ್ಪ ಮಾಳಿ ಅವರು ಉದಯವಾಣಿಗೆ ತಿಳಿಸಿದರು.

೨೦೦೮ರಿಂದ ಐಟಿಬಿಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಅವರು 2019ರಿಂದ ಕಾಬೂಲ್‌ನಲ್ಲಿ ಕಮಾಂಡೋ ಆಗಿ ಕಾರ್ಯನಿರ್ವಹಣೆಗೆ ತೆರಳಿದ್ದರು. ಇನ್ನೆರಡು ತಿಂಗಳಲ್ಲಿ ಅಲ್ಲಿನ ಸೇವೆ ಪೂರ್ಣಗೊಳ್ಳುವುದರೊಳಗೆ ಸದ್ಯದ ಬೆಳವಣಿಗೆಯಿಂದಾಗಿ ತಾಯ್ನಾಡಿಗೆ ಮರಳಿದ್ದಾರೆ.

ಆತಂಕದ ಎರಡು ದಿನ : ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಯಿಂದ ಕಳವಳಗೊಂಡಿದ್ದ ಮಂಜುನಾಥ ಕುಟುಂಬಸ್ಥರು ನಿತ್ಯ ಅವರಿಗೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಆದರೆ ಆಗಸ್ಟ್ 14 ರ ನಂತರ ಮಂಜುನಾಥ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರಲ್ಲಿ ಆತಂಕದ ಕಾರ್ಮೋಡ ಆವರಿಸಿತ್ತು. ನಿರಂತರ ಪ್ರಯತ್ನದ ನಂತರ ಮಂಜುನಾಥ ಅವರು ಭಾರತಕ್ಕೆ ಬಂದ ಅಂದರೆ ಆಗಸ್ಟ್ 16 ರಂದು ಮಂಜುನಾಥಗೆ ಕರೆ ಮಾಡಿದ ಕುಟುಂಬಸ್ಥರು ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಮಂಜುನಾಥನ ಹೆತ್ತವರು, ಮಡದಿ, ಇಬ್ಬರು ಮಕ್ಕಳು ಹಾಗೂ ಸಹೋದರರು ನಿಟ್ಟುಸಿರು ಬಿಟ್ಟಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಕಷ್ಟದಲ್ಲಿರುವ ಭಾರತೀರನ್ನು ಕರೆತರುವಲ್ಲಿ ಭಾರತ ಸರ್ಕಾರ ಕಠಿಬದ್ಧವಾಗಿದೆ. ನನ್ನ ಸಹೋದರ ಮಂಜುನಾಥ ಅವರು ಸೇರಿದಂತೆ ನೂರಾರು ಭಾರತೀರನ್ನು ತಾಯ್ನಾಡಿಗೆ ಮರಳಿ ತರುವಲ್ಲಿ ವಿಶೇಷ ಕಾಳಜಿ ವಹಿಸಿದ ಭಾರತ ಸರ್ಕಾರಕ್ಕೆ ನನ್ನ ಧನ್ಯವಾದಗಳು.ಸಿದ್ದಲಿಂಗು ಮಾಳಿ ( ಮಂಜುನಾಥ ಮಾಳಿ ಸಹೋದರ)

ಟಾಪ್ ನ್ಯೂಸ್

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ; ಆರು ಮಂದಿ ಸಾವು, ಪರಿಸ್ಥಿತಿ ಉದ್ವಿಗ್ನ

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ; ಆರು ಮಂದಿ ಸಾವು, ಪರಿಸ್ಥಿತಿ ಉದ್ವಿಗ್ನ

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

monette dias

ಮದುವೆಯಾಗುವ ಖಯಾಲಿ: 11ನೇ ದಾಂಪತ್ಯ ಮುಗಿಸಿ, 12ನೇ ಮದುವೆಗೆ ಸಿದ್ಧಳಾದ ಮಹಿಳೆ!

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

s-r-patil

ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ನಾಯಕರ ಕಸರತ್ತು!

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಸಿಕ ವೇತನ ನೀಡುವಂತೆ ಗೈಡ್‌ಗಳ ಆಗ್ರಹ

ಮಾಸಿಕ ವೇತನ ನೀಡುವಂತೆ ಗೈಡ್‌ಗಳ ಆಗ್ರಹ

ಅಂಗವಿಕಲ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ

ಅಂಗವಿಕಲ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ

ಹೊಂದಾಣಿಕೆ ರಾಜಕೀಯ; ಹಣದ ಹೊಳೆಗೆ ಮರುಳಾಗಬೇಡಿ

ಹೊಂದಾಣಿಕೆ ರಾಜಕೀಯ; ಹಣದ ಹೊಳೆಗೆ ಮರುಳಾಗಬೇಡಿ

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭಕ್ತರ ಪಾದಯಾತ್ರೆ

ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭಕ್ತರ ಪಾದಯಾತ್ರೆ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ; ಆರು ಮಂದಿ ಸಾವು, ಪರಿಸ್ಥಿತಿ ಉದ್ವಿಗ್ನ

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ; ಆರು ಮಂದಿ ಸಾವು, ಪರಿಸ್ಥಿತಿ ಉದ್ವಿಗ್ನ

5amritha

ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ

crime news

ಪುತ್ರಿ ಪ್ರಿಯಕರನ ಕೊಲೆ ಆರೋಪಿ ಬಂಧನ

4govt-employee

ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಮನವಿ

3party

ಪಕ್ಷ ಸಂಘಟನೆಗೆ ಯುವ ಶಕ್ತಿ ಅವಶ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.