ವಿದ್ಯುತ್‌ ಶುಲ್ಕ ಪಾವತಿ ಹೊಣೆ ಪಂಚಾಯಿತಿಗಳದ್ದು

ಉದಯವಾಣಿ ಸರಣಿ ವರದಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ;ಸರ್ಕಾರಿ ವ್ಯವಸ್ಥೆಯಲ್ಲೇ ವಿದ್ಯುತ್‌ ಬಾಕಿ ಸರಿಯಲ್ಲ

Team Udayavani, Nov 14, 2022, 3:13 PM IST

13

ಬಾಗಲಕೋಟೆ: ಹೆಸ್ಕಾಂಗೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್‌ ಶುಲ್ಕ ಪಾವತಿಯ ಹೊಣೆ ಆಯಾ ಗ್ರಾಪಂಗಳಿಗೆ ಸಂಬಂಧಿಸಿದ್ದು. ಅದು ಗ್ರಾಪಂ ಆಡಳಿತ ಮಂಡಳಿ ಜವಾಬ್ದಾರಿ ಕೂಡ. ಈ ನಿಟ್ಟಿನಲ್ಲಿ ಬಾಕಿ ಉಳಿಸಿರುವ ವಿದ್ಯುತ್‌ ಶುಲ್ಕ ಬಾಕಿ ಪಾವತಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಪಂ ಸಿಇಒ ಟಿ. ಭೂಬಾಲನ್‌ ತಿಳಿಸಿದರು.

ಉದಯವಾಣಿಯಲ್ಲಿ ಕಳೆದ 8 ದಿನಗಳಿಂದ ಹೆಸ್ಕಾಂಗೇ ವಿದ್ಯುತ್‌ ಶಾಕ್‌! ಎಂಬ ಸರಣಿ ವರದಿಗೆ ಸ್ಪಂದಿಸಿ ಮಾತನಾಡಿದ ಅವರು, ಪಂಚಾಯಿತಿ ವ್ಯವಸ್ಥೆಯಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆ ಇದೆ. ಗ್ರಾಪಂ ವ್ಯಾಪ್ತಿಯ ವಿದ್ಯುತ್‌ ಬೀದಿದೀಪ, ಕುಡಿಯುವ ನೀರು ಪೂರೈಕೆಗೆ ಸಂಪರ್ಕ ಕಲ್ಪಿಸಿದ ವಿದ್ಯುತ್‌ ಬಾಕಿ ಪಾವತಿಸಲು ಪ್ರತಿಯೊಂದು ಗ್ರಾಪಂಗಳಿಗೂ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯ 195 ಗ್ರಾಪಂಗಳಲ್ಲಿ ತಲಾ 10ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳ ವಿದ್ಯುತ್‌ ಸಂಪರ್ಕ ಕಡಿತ ಮಾಡುವ ಕುರಿತು ನಿಖರ ಮಾಹಿತಿ ಇಲ್ಲ. ಆದರೆ ಬಾಕಿ ಪಾವತಿ ಮಾಡಬೇಕಿರುವುದು ಗ್ರಾಪಂಗಳ ಹೊಣೆ. ಜಿಲ್ಲೆಯ ಕೆಲವು ಗ್ರಾಪಂಗಳು ಪ್ರತಿ ತಿಂಗಳು ನಿರಂತರವಾಗಿ ವಿದ್ಯುತ್‌ ಶುಲ್ಕ ಬಾಕಿ ಪಾವತಿ ಮಾಡುತ್ತಿವೆ. ಆದರೆ ಕೆಲವು ಪಂಚಾಯಿತಿಗಳು ಹೆಚ್ಚಿನ ಬಾಕಿ ಉಳಿಸಿಕೊಂಡಿವೆ. ಈ ವಿಷಯದಲ್ಲಿ ಗ್ರಾಪಂ ಪಿಡಿಒಗಳೇ ಪೂರ್ಣ ಪ್ರಮಾಣದ ಹೊಣೆಗಾರರಲ್ಲ. ಆಯಾ ಗ್ರಾಪಂಗಳ ಆಡಳಿತ ಮಂಡಳಿ ಸಂಪೂರ್ಣ ಹೊಣೆಗಾರಿಕೆಯಾಗುತ್ತದೆ ಎಂದರು.

ನ.16ರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳ್ಳಲಿರುವ ಗ್ರಾಪಂಗಳು, ಕೂಡಲೇ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ 15ನೇ ಹಣಕಾಸು ಯೋಜನೆಯಡಿ ಪಾವತಿಸಬಹುದು. ಇದು ಬರೀ ಪಿಡಿಒಗಳು ಮಾತ್ರ ಕ್ರಮ ಕೈಗೊಳ್ಳಲು ಆಗಲ್ಲ. ಗ್ರಾಪಂ ಆಡಳಿತ ಮಂಡಳಿಗಳು, ಕೂಡಲೇ ಸಭೆ ನಡೆಸಿ ವಿದ್ಯುತ್‌ ಶುಲ್ಕ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡ ಗ್ರಾಪಂಗಳು ಬಾಕಿ ಪಾವತಿಸಬೇಕು. ಗೃಹ ಬಳಕೆ ಅಥವಾ ಇನ್ಯಾವುದೇ ವ್ಯವಸ್ಥೆಯಲ್ಲಿ ವಿದ್ಯುತ್‌ ಬಾಕಿ ಉಳಿಸಿಕೊಂಡರೆ ತಕ್ಷಣ ಕೈಗೊಂಡು, ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಗ್ರಾಪಂಗಳೇ ಕೋಟಿ ಕೋಟಿ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ.   –ಬಸವರಾಜ ಧರ್ಮಂತಿ, ಕರವೇ ಜಿಲ್ಲಾ ಅಧ್ಯಕ್ಷ.

ಟಾಪ್ ನ್ಯೂಸ್

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್

Police detained Revanna’s son suraj revanna

Hassan; ಅನೈಸರ್ಗಿಕ ಲೈಂಗಿಕ ಕ್ರಿಯೆ: ರೇವಣ್ಣ ಪುತ್ರ ಸೂರಜ್‌ ಪೊಲೀಸ್‌ ಬಲೆಗೆ

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

ಕರಾವಳಿಯಲ್ಲಿ ಸುರಿದೇ ಇಲ್ಲ ಜಿಟಿ ಜಿಟಿ ಮಳೆ

ಕರಾವಳಿಯಲ್ಲಿ ಸುರಿದೇ ಇಲ್ಲ ಜಿಟಿ ಜಿಟಿ ಮಳೆ

Renukaswamy ಹಂತಕರಿಂದ ಡೇಟಾ ನಾಶ! ವೆಬ್‌ ಆ್ಯಪ್‌ ಬಳಸಿ ಡೇಟಾ ನಿಷ್ಕ್ರಿಯ

Renukaswamy ಹಂತಕರಿಂದ ಡೇಟಾ ನಾಶ! ವೆಬ್‌ ಆ್ಯಪ್‌ ಬಳಸಿ ಡೇಟಾ ನಿಷ್ಕ್ರಿಯ

1-24-sunday

Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಏಳು ದಿನಗಳಿಂದ “ಸರ್ವರ್‌ ಸಮಸ್ಯೆ’ ಸಂಕಟ

ಬಾಗಲಕೋಟೆ: ಏಳು ದಿನಗಳಿಂದ “ಸರ್ವರ್‌ ಸಮಸ್ಯೆ’ ಸಂಕಟ

14-

ಕಾರ ಹುಣ್ಣಿಮೆ; ಮಣ್ಣಿನ ಎತ್ತುಗಳ ಪೂಜೆಯ ಸಂಭ್ರಮ; ಕನ್ನಡದ ಮೊದಲ ಮಣ್ಣಿನ ಹಬ್ಬ ಕಾರಹುಣ್ಣಿಮೆ

Muddebihal ಕ್ರೂಸರ್‌ ಪಲ್ಟಿ: 15 ಮಂದಿಗೆ ಗಾಯ: ಮೂವರು ಗಂಭೀರ

Muddebihal ಕ್ರೂಸರ್‌ ಪಲ್ಟಿ: 15 ಮಂದಿಗೆ ಗಾಯ: ಮೂವರು ಗಂಭೀರ

ವಿಜಯಪುರ: ಕಡಿಮೆ ವೆಚ್ಚದಲ್ಲಿ ಐವಿಎಫ್ ಚಿಕಿತ್ಸೆ: ಡಾ|ವರ್ಷಾ

ವಿಜಯಪುರ: ಕಡಿಮೆ ವೆಚ್ಚದಲ್ಲಿ ಐವಿಎಫ್ ಚಿಕಿತ್ಸೆ: ಡಾ|ವರ್ಷಾ

Rabkavi Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

Kalaburagi; ನೇಣಿಗೆ ಶರಣಾದ ಪೊಲೀಸ್ ಕಾನ್ಸಟೇಬಲ್

Kalaburagi; ನೇಣಿಗೆ ಶರಣಾದ ಪೊಲೀಸ್ ಕಾನ್ಸಟೇಬಲ್

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್

Police detained Revanna’s son suraj revanna

Hassan; ಅನೈಸರ್ಗಿಕ ಲೈಂಗಿಕ ಕ್ರಿಯೆ: ರೇವಣ್ಣ ಪುತ್ರ ಸೂರಜ್‌ ಪೊಲೀಸ್‌ ಬಲೆಗೆ

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.