
Rabkavi Banhatti ಹಿಪ್ಪರಗಿ ಜಲಾಶಯ ಖಾಲಿ; ಆತಂಕದಲ್ಲಿ ಜನತೆ
ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಒಡಲು ಖಾಲಿ
Team Udayavani, Jun 10, 2023, 9:00 PM IST

ರಬಕವಿ-ಬನಹಟ್ಟಿ: ಮಳೆ ಬಾರದಿರುವುದು ಹಾಗೂ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಉತ್ತರ ಕರ್ನಾಟಕದ ಜೀವ ಜಲವಾಗಿದ್ದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದು, ಹಿಪ್ಪರಗಿ ಜಲಾಶಯ ಪೂರ್ತಿಯಾಗಿ ಖಾಲಿಯಾಗಿದೆ. ಈ ಭಾಗದ ಜಮಖಂಡಿ ರಬಕವಿ, ಬನಹಟ್ಟಿ, ತೇರದಾಳ, ಹಾರುಗೇರಿ ಅಥಣಿ ಹಾಗೂ ಬೆಳಗಾವಿ ಬಾಗಲಕೋಟ ಜಿಲ್ಲೆಯ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.
6 ಟಿಎಂಸಿ ಸಾಮರ್ಥ್ಯವುಳ್ಳ ಹಿಪ್ಪರಗಿ ಜಲಾಶಯದ ಹಿಂಬಾಗದಲ್ಲಿ ಓಯಸಿಸ್‌ನಂತೆ ಸ್ವಲ್ಪವೇ ನೀರು ಉಳಿದಿದ್ದು, ಮುಂಭಾಗ ಮಾತ್ರ ಪೂರ್ಣವಾಗಿ ಖಾಲಿಯಾಗಿದ್ದು ಈ ಭಾಗದ ಜನರು ಮತ್ತು ರೈತರಿಗೆ ಚಿಂತೆಯನ್ನುಂಟು ಮಾಡಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಇನ್ನೂ ಮಳೆ ಪ್ರಾರಂಭವಾಗಿಲ್ಲವಾದ್ದರಿಂದ ಮಹಾರಾಷ್ಟ್ರದ ಕೋಯ್ನಾ ಮತ್ತು ರಾಜಾಪುರ ಡ್ಯಾಂಗಳಿಂದ ಈ ವರ್ಷ ನೀರು ಇನ್ನೂ ಬಿಟ್ಟಿಲ್ಲ, ಹೀಗಾಗಿ ಕೃಷ್ಣಾ ನದಿ ಬತ್ತಿ ನಿಂತಿದೆ. ಕೃಷ್ಣಾ ನದಿ ತೀರದ ಜನತೆ ಆತಂಕದಲ್ಲಿದ್ದಾರೆ.
ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬೀಡಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ವ್ಯವಹಾರಗಳು ನಡೆದಿದ್ದು, ಆದಷ್ಟು ಬೇಗನೆ ನೀರು ಬರುತ್ತದೆ ಎಂಬ ನಂಬಿಕೆ ಜನರದಾಗಿದ್ದು, ಇದಕ್ಕೆ ಮಳೆರಾಯ ಜೊತೆ ನೀಡಬೇಕಷ್ಟೇ.
ಟಾಪ್ ನ್ಯೂಸ್
