ಮತ್ತೊಮ್ಮೆ ಸ್ಪರ್ಧೆ ಮಾಡ್ಬೇಕು: ಸಿದ್ದರಾಮಯ್ಯರಿಗೆ ಬಾದಾಮಿಯಲ್ಲಿ ಅಭಿಮಾನಿಗಳ ಒತ್ತಾಯ

ಒತ್ತಾಯಕ್ಕೆ ಮಣಿದು ''ಇಲ್ಲಿಯೇ ನಿಲ್ಲುತ್ತೆನೆ'' ಎಂದ ಮಾಜಿ ಸಿಎಂ....

Team Udayavani, Jan 6, 2023, 8:17 PM IST

1-sdsdad

ಕುಳಗೇರಿ ಕ್ರಾಸ್:(ಬಾಗಲಕೋಟೆ) ಜನರು ತಾಪಂ-ಜಿಪಂ ಕಚೇರಿಗಳಿಗೆ ಅಲೆಯುವುದನ್ನ ತಪ್ಪಿಸುವ ಸಲುವಾಗಿ ಅಧಿಕಾರ ವಿಕೇಂದ್ರಿಕರಣ ಮಾಡಿ,ಸುಮಾರು ಆರು ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಗಳನ್ನ ನಿರ್ಮಾಣ ಮಾಡಿ ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದು ನಮ್ಮ ಸರ್ಕಾರ ಎಂದು ಬಾದಾಮಿ ಶಾಸಕ,ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಶುಕ್ರವಾರ ಗ್ರಾಮದಲ್ಲಿ ಭಾರತ ನಿರ್ಮಾನ ರಾಜೀವ್ ಗಾಂಧಿ ಸೇವಾ ಕೇದ್ರದಿಂದ 35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಗ್ರಾಪಂ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಪಂ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿರುವ ಅಧ್ಯಕ್ಷ-ಉಪಾಧ್ಯಕ್ಷ-ಸದಸ್ಯರು ಜನರ ಕಷ್ಟ-ಸುಖಗಳಿಗೆ ಸ್ಪಂದಿಸಬೇಕು. ಹಾಗೆ ಅಧಿಕಾರಿಗಳು ಜನರ ಸೇವಕರಾಗಿ ಕೆಲಸ ಮಾಡಬೇಕೆ ಹೊರತು ಅಧಿಕಾರಿಗಳಾಗಿ ಅಲ್ಲ. ಗ್ರಾಪಂ ಅಭಿವೃದ್ಧಿ ಮಾಡಲು ಪಿಡಿಒ ಎಂಬ ಅಧಿಕಾರಿಯನ್ನ ನೆಮಿಸಲಾಗಿದೆ. ಅಭಿವೃದ್ಧಿ ಅಧಿಕಾರಿ ಎಂದು ನೇಮಿಸಿದ್ದೇ ಜನರ ಸೇವೆಗಾಗಿ. ಸದ್ಯ ಕೆಲವು ಪಿಡಿಒ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಸಿದ್ಧರಾಮಯ್ಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ಹೊರ ಹಾಕಿದರು.

ನಮ್ಮ ಕ್ಷೇತ್ರಕ್ಕೆ ಮತ್ತೊಮ್ಮೆ ನೀವೆ ನಿಲ್ಲಿ

ಸಿದ್ಧರಾಮಯ್ಯನವರನ್ನ ಬೆನ್ನುಬಿಡದ ಕಾರ್ಯಕರ್ತರು, ಅಭಿಮಾನಿಗಳು ಹೇಳುತ್ತಿರುವುದು ಒಂದೇ ಮಾತು.  ನೀವು ಮತ್ತೊಮ್ಮೆ ಬಾದಾಮಿಯಿಂದಲೇ ಸ್ಪರ್ಧೆ ಮಾಡ್ಬೇಕು. ನಿಮ್ಮ ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ ಎಂಬ ಕೂಗು ಕೇಳ ತೊಡಗಿತು… ಇನ್ನೊಮ್ಮೆ ನಮ್ಮ ಕ್ಷೇತ್ರಕ್ಕೆ ನೀವು ನಿಲ್ಲಬೇಕ್ರೀ..ಸಾಹೇಬ್ರ.. ಎಂದು ಗ್ರಾಪಂ ಸದಸ್ಯೆಯೊಬ್ಬರು ಅಭಿಮಾನದಿಂದ ಹೇಳಿದ್ದನ್ನ ಬೆಂಬಲಿಸಿದ ಅಭಿಮಾನಿಗಳು ಸಿಳ್ಳೇ..ಕೇಕೇ.. ಚಪ್ಪಾಳೆಯಿಂದ ಅಭಿನಂದಿಸಿದರು. ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡಿ ಸಿಎಂ ಆಗ್ಬೇಕು ಸರ್ ಎಂದು ಒತ್ತಾಯಿಸಿದರು. ನೀವು ನಿಂತು ಆಯ್ಕೆಯಾದರೇ ಮಾತ್ರ ನಮ್ಮ ಕ್ಷೇತ್ರ ಅಭಿವೃದ್ಧಿ ಹೊಂದುವುದು ಎಂದು ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಮುಂದಿಟ್ಟು ಅಂಗಲಾಚಿದರು.

”ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ” ಎಂಬ ತಲೆಬರಹದಲ್ಲಿ ಸಿದ್ದು ಭಾವಚಿತ್ರವುಳ್ಳ ಬೋರ್ಡ್ ನೋಡಿ ಸಿದ್ಧರಾಮಯ್ಯ ಮುಗುಳ್ನಗೆ ಬೀರಿ ಪ್ರತಿಕ್ರಿಯಿಸಿ, ನಿವು ನನ್ನನ್ನು ಒಮ್ಮೆ ಆಯ್ಕೆ ಮಾಡಿ ಕಳಿಸಿದ್ದಿರಿ.ನಿಮ್ಮ ಪ್ರೀತಿ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಪ್ರೀತಿಗೆ ನಾನು ಚಿರಋಣಿ.ನಾನು ಎಲ್ಲಿ ನಿಲ್ಲಬೇಕು ಎನ್ನುವುದನ್ನ ಹೈ ಕಮಾಂಡ್ ತಿರ್ಮಾನಿಸಲಿದೆ ಎಂದು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಇಲ್ಲಿಯೇ ನಿಲ್ಲುತ್ತೆನೆ ಎಂದು ಘೋಷಿಸಿ ಜನರನ್ನ ಸಮಾಧಾನ ಪಡಿಸಿದರು.

ಶಾಸಕನಿರಲಿ, ಮುಖ್ಯಮಂತ್ರಿಯೇ ಇರಲಿ, ಗ್ರಾಪಂ ಅಧ್ಯಕ್ಷ ಇರಲಿ ಯಾರು ಇಲ್ಲಿ ದೇವಲೋಕದಿಂದ ಬಂದವರಲ್ಲ. ಇಲ್ಲಿರುವವರೆಲ್ಲ ಮನುಷ್ಯರೇ.. ನಿಮ್ಮಲ್ಲೇ ನಿಮ್ಮ ಪರವಾಗಿ ನಿಮ್ಮ ಕೆಲಸ ಮಾಡುವ ಪ್ರತಿನಿಧಿ. ನಿಮ್ಮ ವೋಟಿನಿಂದ ಆಯ್ಕೆಯಾಗಿ ಹೋಗಿರುವ ನಾನು ಸೇರಿದಂತೆ ಎಲ್ಲರೂ ಜನಸೇವಕರೇ. ನಿಮ್ಮ ಕೆಲಸ ಮಾಡುವುದೇ ನಮ್ಮ ಕಾಯಕವಾಗಿರಬೇಕಷ್ಟೆ ಎಂದು ಸಿದ್ಧರಾಮಯ್ಯ ಹೇಳಿದರು.

ಸೋಮನಕೊಪ್ಪ ನೀಲಲೋಹಿತ ಸ್ವಾಮಿಜಿ, ಶಾಸಕ ಆನಂದ ನ್ಯಾಮಗೌಡ್ರ, ಮಾಜಿ ಸಚಿವ ಎಚ್ ವೈ ಮೇಟಿ, ಸಣ್ಣಬೀರಪ್ಪ ಪೂಜಾರ, ನಾಗಪ್ಪ ಅಡಪಟ್ಟಿ, ಹೊಳಬಸು ಶೆಟ್ಟರ್, ಭೀಮಸೇನ ಚಿಮ್ಮನಕಟ್ಟಿ, ಬ್ಲಾಕ್ ಅಧ್ಯಕ್ಷ ಎಚ್ ಬಿ ಯಕ್ಕಪ್ಪನವರ, ಬಸವರಾಜ ಕಟ್ಟಿಕಾರ, ಮಹೇಶ ಹೊಸಗೌಡ್ರ, ಶಿವವ್ವ ಕರಲಿಂಗನ್ನವರ, ಬಸವರಾಜ ಬ್ಯಾಹಟ್ಟಿ, ರಾಮಣ್ಣ ಡೊಳ್ಳಿನ, ಹನಮಂತ ನರಗುಂದ, ವೆಂಕಣ್ಣ ಹೊರಕೇರಿ, ಶಿವಾನಂದ ಮಣ್ಣೂರ, ಲಕ್ಷ್ಮಣ್ ದಾದನಟ್ಟಿ, ಸಣ್ಣಬೀರಪ್ಪ ದ್ಯಾವನಗೌಡ್ರ, ಮಾರುತಿ ತಳವಾರ, ರಾಮನಗೌಡ ದ್ಯಾವನಗೌಡ್ರ, ರೇಣುಕಾ ಹಿರಗನ್ನವರ, ಲಲಿತಾ ಹುನಗುಂದ. ಬಸವ್ವ ತುರನೂರ , ಕಮಲವ್ವ ಪಾಟೀಲ, ಲಲಿತಾ ಪೂಜಾರ, ಶೇಖಪ್ಪ ಪವಾಡಿನಾಯ್ಕರ್, ದ್ಯಾವಪ್ಪ ಕರಿಗಾರ, ನೇತ್ರಾವತಿ ಹಡಪದ, ನಾಗವ್ವ ದಂಡಿನ, ಶ್ಯಾಮಲಾ ಮಾದರ ಸೇರಿದಂತೆ ಪಿಡಿಒ ಪರಸನ್ನವರ ಗ್ರಾಮಸ್ಥರು ಸಿಬಂದಿಗಳು ಇದ್ದರು.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.