
ಸಿದ್ದು ಕೋಲಾರದಲ್ಲೂ ಸ್ಪರ್ಧಿಸಲ್ಲ: ಸಚಿವ ಶ್ರೀರಾಮುಲು
Team Udayavani, Nov 15, 2022, 10:15 PM IST

ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲೂ ಗೆಲ್ಲಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ನ.20ರಂದು ಬಳ್ಳಾರಿಯಲ್ಲಿ ನಡೆಯಲಿರುವ ಬಿಜೆಪಿ ಎಸ್‌ಟಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಚಾಮುಂಡೇಶ್ವರಿಯಲ್ಲಿ ನೀನು ಸರಿಯಿಲ್ಲ ಎಂದು ಚಾಮುಂಡೇಶ್ವರಿ ಕೈಬಿಟ್ಟಳು. ಆದರೆ, ಬಾದಾಮಿಯಲ್ಲಿ ಇರಲಿ ಎಂದು ಬನಶಂಕರಿ ಕೈ ಹಿಡಿದಿದ್ದಳು. ಆದರೆ, ರಾಜಕೀಯ ಪುನರ್‌ಜನ್ಮ ನೀಡಿದ ಜನರನ್ನೇ ಸಿದ್ದರಾಮಯ್ಯ ಕೈಬಿಟ್ಟರು ಎಂದರು.
ಬಾದಾಮಿಯಲ್ಲಿ ಶ್ರಮಪಟ್ಟು ಗೆಲ್ಲಿಸಿದ ಪಕ್ಷದ ಪ್ರಮುಖರು, ಮತದಾರರ ಕೈಬಿಟ್ಟಿದ್ದಾರೆ. ಇಲ್ಲಿಗೆ ಬಂದು ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಎಸ್.ಆರ್. ಪಾಟೀಲ ಅವರ ರಾಜಕೀಯವನ್ನೇ ಮುಗಿಸಿದರು. ಈ ಸಲ ಕೋಲಾರಕ್ಕೆ ಹೋಗುತ್ತಿದ್ದಾರೆ. ಕೋಲಾರದಲ್ಲೂ ಅವರು ಸ್ಪರ್ಧೆ ಮಾಡುವುದಿಲ್ಲ. ಕೊನೆಗೆ ವರುಣಾಕ್ಕೆ ಓಡಿ ಹೋಗುತ್ತಾರೆ. ಅಲ್ಲಿ ದೊಡ್ಡ ಅಭ್ಯರ್ಥಿಯನ್ನೇ ರೆಡಿ ಮಾಡಿದ್ದೇವೆ. ಅದನ್ನು ನಮ್ಮ ಪಕ್ಷದ ರಾಜಾಹುಲಿ ಯಡಿಯೂರಪ್ಪ ನಿರ್ಧಾರ ಮಾಡುತ್ತಾರೆ ಎಂದರು.
ನಾನೆಂದೂ ಉಂಡ ಮನೆಯ ಜಂತಿ ಎಣಿಸುವ ಕೆಲಸ ಮಾಡಿಲ್ಲ. ದ್ರೋಹವೂ ಮಾಡಲ್ಲ. ಸಿದ್ದರಾಮಯ್ಯ ಜೆಡಿಎಸ್‌ನಿಂದ ಬಂದು ಮೂಲ ಕಾಂಗ್ರೆಸ್ಸಿಗರಿಗೆ ದ್ರೋಹ ಮಾಡಿದರು. ಎಲ್ಲೇ ಹೋದರೂ ದ್ರೋಹ ಮಾಡುವುದೇ ಅವರ ಕೆಲಸ. ರಾಜಕೀಯ ನಂಬಿಕಸ್ಥ ನಾಯಕರಲ್ಲ. ಪಾಪ, ದೊಡ್ಡ ಮನುಷ್ಯ ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದು, ಅವರ ಬೆನ್ನಿಗೆ ಚೂರಿ ಹಾಕಿದರು. ಕಾಂಗ್ರೆಸ್‌ನಲ್ಲಿ ಪರಮೇಶ್ವರ, ಖರ್ಗೆ ಸೇರಿದಂತೆ ಎಲ್ಲರನ್ನೂ ಮುಗಿಸುತ್ತಲೇ ಬಂದರು. ಅವರಿಂದ ದ್ರೋಹ ಹೋದವರ ಪಟ್ಟಿ ಮಾಡುತ್ತ ಹೋದರೆ ಬೆಳೆಯುತ್ತಲೇ ಹೋಗುತ್ತದೆ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

ಐಸಿಸಿ ಏಕದಿನ ರ‍್ಯಾಂಕಿಂಗ್ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು