

Team Udayavani, Dec 31, 2019, 1:27 PM IST
ತೇರದಾಳ: ಪಟ್ಟಣದಿಂದ ಉಡುಪಿಗೆ ಪ್ರತಿದಿನ ಬಸ್ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಪಟ್ಟಣ ಸೇರಿದಂತೆ ಹನಗಂಡಿ, ರಬಕವಿ-ಬನಹಟ್ಟಿ, ಸಸಾಲಟ್ಟಿ, ತಮದಡ್ಡಿ-ಹಳಿಂಗಳಿ, ಗೋಲಭಾವಿ- ಕಾಲತಿಪ್ಪಿ, ಜಮಖಂಡಿ ಅಲ್ಲದೆ ಬೆಳಗಾವಿ ಜಿಲ್ಲೆಯ ಶೇಗುಣಸಿ, ಹಾರೂಗೇರಿ, ಮುಗಳಖೋಡದ ಜನರ ಬಹುದಿನಗಳ ಬೇಡಿಕೆಯಂತೆ ಉಡುಪಿಗೆ ನೇರ ಬಸ್ ಸೇವೆ ಪ್ರಾರಂಭವಾಗಿದೆ.
ಸಾರಿಗೆ ನಿಯಂತ್ರಣಾ ಧಿಕಾರಿ ಎಸ್.ವಿ. ಭಜಂತ್ರಿ ಮಾತನಾಡಿ, ಪ್ರತಿದಿನ ತೇರದಾಳದಿಂದ ಸಂಜೆ 5.30ಕ್ಕೆ ಸಂಚರಿಸಲಿರುವ ಬಸ್ ಜಮಖಂಡಿ, ಮುಧೋಳ, ಲೋಕಾಪುರ, ರಾಮದುರ್ಗ, ಸೌದತ್ತಿ, ಧಾರವಾಡ-ಹುಬ್ಬಳ್ಳಿ, ಶಿರಸಿ, ಕುಮಟಾ, ಹೊನ್ನಾವರ, ಭಟ್ಕಳ, ಕುಂದಾಪುರ ಮಾರ್ಗವಾಗಿ ಓಡುತ್ತದೆ. ಮರುದಿನ ಬೆಳಗ್ಗೆ 7.30ಕ್ಕೆ ಉಡುಪಿ ತಲುಪಲಿದೆ. ಉಡುಪಿಯಿಂದ ಮಧ್ಯಾಹ್ನ 1.30ಕ್ಕೆ ಹೊರಟು ಅದೇ ಮಾರ್ಗವಾಗಿ ತೇರದಾಳಕ್ಕೆ ಮರುದಿನ ಬೆಳಗಿನ ಜಾವ 4ಗಂಟೆಗೆ ಆಗಮಿಸಲಿದೆ ಎಂದರು.
ಉಡುಪಿ ಘಟಕದ ಬಸ್ ನಿರ್ವಾಹಕ ಎಚ್.ಸೋಮಪ್ಪ ಮಾತನಾಡಿ, ಇಲ್ಲಿಂದ ಉಡುಪಿಗೆ ಕೇವಲ 513ರೂ. ಹಾಗೂ ಹುಬ್ಬಳ್ಳಿಗೆ 206 ರೂ.ಗಳ ಟಿಕೆಟ್ ದರ ಇದ್ದು, ಪ್ರಯಾಣಿಕರಿಗೆ ಅನುಕೂಲವಿದೆ ಎಂದರು.
ಸಂಜು ಶೆಟ್ಟಿ, ಲಕ್ಷ್ಮಣ ಉಡುಪಿ, ಬಸ್‌ಗೆ ಪೂಜೆ ಸಲ್ಲಿಸಿದರು. ಚಾಲಕರಾದ ಮಲ್ಲಿಕಾರ್ಜುನ ನಾರಗುನ್ನವರ, ವಿರೂಪಾಕ್ಷ ಅವರಾದಿ, ಬಸವರಾಜ ಹಡಪದ, ಯಾಶೀನ ಸಾತಬಚ್ಚೆ, ನಿಯಾಜ ತಾಂಬೋಳಿ, ಚಂದ್ರು ಪೂಜಾರಿ, ಮಂಜು ನಾಡಶೆಟ್ಟಿ, ಪ್ರಭುರಾಜ ಶೆಟ್ಟಿ, ಸಂಜು ಉಡುಪಿ, ವಿಠಲ ಬಡಿಗೇರ, ಲಕ್ಕಪ್ಪ ದಾನಿಗೊಂಡ, ಪರಪ್ಪ, ಸಂಜು ಭಜಂತ್ರಿ, ತಾಲೂಕು ಹೋರಾಟ ಸಮಿತಿಯವರು ಸೇರಿದಂತೆ ಅನೇಕರು ಇದ್ದರು.
Ad
You seem to have an Ad Blocker on.
To continue reading, please turn it off or whitelist Udayavani.