
ಡಿಸಿಎಂ ರಾಜೀನಾಮೆಗೆ ಕರವೇ ಆಗ್ರಹ
Team Udayavani, Feb 20, 2021, 1:57 PM IST

ಹುನಗುಂದ: ಅಭಿವೃದ್ಧಿ ಕುರಿತು ಕೇಳಿದರೆ ಕರವೇ ಕಾರ್ಯಕರ್ತ ರೊಂದಿಗೆ ಅನುಚಿತವಾಗಿ ವರ್ತಿಸಿದ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ತಾಲೂಕು ಕರವೇ ಘಟಕದಿಂದ ಪ್ರತಿಭಟನೆ ನಡೆಸಿತಹಶೀಲ್ದಾರ್ ಜಿ.ಎಂ. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕರವೇ ಕಾನೂನು ಘಟಕದ ಜಿಲ್ಲಾಧ್ಯಕ್ಷ ರಮಜಾನ್ ನದಾಫ್‌ಮಾತನಾಡಿ, ಫೆ.16ರಂದು ಸರ್ಕಾರಿಕಾರ್ಯಕ್ರಮ ನಿಮಿತ್ತ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆಆಗಮಿಸಿದ್ದ ವೇಳೆಯಲ್ಲಿ ಡಿಸಿಎಂಕಾರಜೋಳ 2013-14ರಲ್ಲಿ ಜಿಲ್ಲೆಘೋಷಣೆಯಾದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಬರುವ ಬಜೆಟ್‌ನಲ್ಲಿ ಅನುದಾನಮೀಸಲಿಡುವಂತೆ ಸರ್ಕಾರದಮೇಲೆ ಒತ್ತಡ ತರುವುದು ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ ಭೂಮಿ ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕಸಂಘ ಅತಿಕ್ರಮಿಸಿಕೊಂಡಿದ್ದನ್ನುತೆರುವುಗೊಳಿಸುವುದು ಸೇರಿದಂತೆಅನೇಕ ಬೇಡಿಕೆ ಈಡೇರಿಸುವಂತೆಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದ್ದರು.
ಅಲ್ಲದೇ ಈ ಕುರಿತು ಸುದ್ದಿಗೋಷ್ಠಿ ಮಾಡಿ ಒತ್ತಾಯಿಸಿದರೂ ಕ್ರಮತೆಗೆದುಕೊಂಡಿಲವೆಂದು ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಕೇಳಿದಾಗ ಡಿಸಿಎಂ ಉಡಾಫೆ ಉತ್ತರ ನೀಡಿ ಅನುಚಿತವಾಗಿ ವರ್ತಿಸಿದ್ದಾರೆ. ತಕ್ಷಣಅವರು ತಮ್ಮ ಸ್ಥಾನಕ್ಕೆ ರಾಜೀನಾಮೆನೀಡುವಂತೆ ಒತ್ತಾಯಿಸಿದರು. ಕರವೇ ತಾಲೂಕಾಧ್ಯಕ್ಷ ಈರಣ್ಣಬಡಿಗೇರ ಮಾತನಾಡಿದರು.ಈ ವೇಳೆ ನಗರ ಘಟಕದ ಅಧ್ಯಕ್ಷ ಶರಣು ಗಾಣಿಗೇರ, ಜಗದೀಶಬಸರಿಗಿಡದ, ಶರಣು ಕುರಿ, ಹಸೇನಸಾಬ ಸಂದಿಮನಿ, ಮೌಲಪ್ಪ ಮಾದರ, ಸಾಗರ ದಿಡ್ಡಿಮನಿ, ಲಕ್ಷ್ಮಣ ತಳವಾರ ಇತರರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋಗೆ’ ಚಾಲನೆ

Health: ಸೋಶಿಯಲ್ ಆ್ಯಂಕ್ಸೈಟಿ ಡಿಸಾರ್ಡರ್

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು