ಮತ್ತೊಂದು ‘ಬಿಟ್’ ಅಕ್ರಮ: ಬಿಟ್‌ಕಾಯಿನ್ ಮೂಲಕ 13 ಲಕ್ಷ ರೂ. ವಂಚನೆ ಪ್ರಕರಣ ಬೆಳಕಿಗೆ
Team Udayavani, Jan 6, 2022, 1:08 PM IST
ಬೆಂಗಳೂರು: ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಬಿಟ್ ಕಾಯಿನ್ ವಂಚನೆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಮತ್ತೂಂದು ಬಿಟ್‌ಕಾಯಿನ್ ಮೂಲಕ 13 ಲಕ್ಷ ರೂ. ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಗೊಟ್ಟಿಗೆರೆ ನಿವಾಸಿ ಈರಪ್ಪ ನಾಯ್ಕ (31) ಹಣ ಕಳೆದುಕೊಂಡವರು. ಈ ಸಂಬಂಧ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತನೊಬ್ಬ ಈರಪ್ಪ ನಾಯ್ಕ ಅವರ ಮೊಬೈಲ್ ನಂಬರ್ ಅನ್ನು ಅ.11 ರಂದು ಬಿಟ್‌ಕಾಯಿನ್‌ಗೆ ಸಂಬಂಧಿಸಿದ “00202ಎನೆಕ್ಸ್ ಬಿಟಿಸಿ ಫರ್‌ಟ್ಯೂನ್019′ ವಾಟ್ಸ್‌ಆ್ಯಪ್ ಗ್ರೂಪ್ ಗೆ ಸೇರಿಸಿದ್ದಾನೆ. ಆ ಗ್ರೂಪ್ ಮೂಲಕ ಅನಲಿಸ್ಟಾ ವೆನೆಸ್ಸಾ ಎಂಬುವರು ಪರಿಚಯವಾಗಿ ಬಿಟ್ ಕಾಯಿನ್ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಪರಿಚಯಿಸಿದ್ದು, ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ನಿರ್ಬಂಧ ಎಲ್ಲರಿಗೂ ಅನ್ವಯ, ಉಲ್ಲಂಘಿಸಿದರೆ ಕಾನೂನು ಕ್ರಮ: ಸಚಿವ ಆರಗ ಜ್ಞಾನೇಂದ್ರ
ಅಲ್ಲದೆ, ವೆನೆಸ್ಸಾ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುತ್ತದೆ ಎಂದು ಹೇಳಿ ನಂಬಿಸಿದ್ದಾರೆ. ಮೊದಲ ಹಂತದಲ್ಲಿ ಈರಪ್ಪನ ನಾಯ್ಕ ಅವರಿಂದ 3,04,263 ರೂ. ಹೂಡಿಕೆ ಮಾಡಿಸಿದ್ದಾರೆ. ನೀವು ಹೂಡಿಕೆ ಮಾಡಿರುವ ಹಣದಿಂದ ನಿಮಗೆ ಅಧಿಕ ಲಾಭ ಬಂದಿದೆ. ಆ ಹಣವನ್ನು ನೀವು ವಾಪಸ್ ಪಡೆಯಲು ಹಲವಾರು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿ ಈರಪ್ಪ ನಾಯ್ಕ ಅವರ ಬ್ಯಾಂಕ್ ಖಾತೆಯಿಂದ ಹಂತ -ಹಂತವಾಗಿ 13,62,817 ರೂ. ವರ್ಗಾವಣೆ ಮಾಡಿಕೊಂಡು ಲಾಭದ ಹಣವನ್ನು ಹಾಗೂ ಅಸಲು ಹಣವನ್ನು ಕೊಡದೆ ವಂಚಿಸಿದ್ದಾರೆ ಎಂದು ಈರಪ್ಪ ನಾಯ್ಕ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಆದರೆ, ತನಿಖೆ ವೇಳೆ ಆ ಅಪರಿಚಿತ ನಂಬರ್ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ತನ್ನ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಖಾದರ್
ಚಿಕ್ಕಮಗಳೂರು : ವೀಲಿಂಗ್ ಶೋಕಿ ಮಾಡಿದವರಿಗೆ ಖಾಕಿಗಳ ಬುಲ್ಡೋಜರ್ ಟ್ರೀಟ್ಮೆಂಟ್
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಹೊಸ ಸೇರ್ಪಡೆ
ಟೆಂಪೋ ಟ್ರಾವೆಲರ್ – ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ
ಗುಜರಾತ್: ವಿದ್ಯಾರ್ಥಿನಿಯರಿಗೆ ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ಕಾಂಗ್ರೆಸ್ ಆಕ್ಷೇಪ
ಜೆಟ್ಏರ್ ವೇಸ್ಗೆ ವಿಮಾನ ಯಾರು ಕೊಡ್ತಾರೆ?
ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ
ಮಹೀಂದ್ರಾ ಸ್ಕಾರ್ಪಿಯೋ-ಎನ್ ಬಿಡುಗಡೆ: ಜು.30ರಿಂದ ಮುಂಗಡ ಬುಕಿಂಗ್ ಆರಂಭ