ಫುಟ್‌ಪಾತ್‌ಗೆ ಢಿಕ್ಕಿ: ಬೈಕ್‌ ಸವಾರ ಸಾವು

Team Udayavani, Mar 28, 2023, 12:00 PM IST

tdy-9

ಬೆಂಗಳೂರು: ಅತಿವೇಗ ಮತ್ತು ಅಜಾಗರೂಕತೆ ಚಾಲನೆಯಿಂದ ಫ‌ುಟ್‌ ಪಾತ್‌ಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜಾಜಿನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಮನಗರ ನಿವಾಸಿ ಗಗನ್‌(21) ಮೃತ ಸವಾರ. ರಾಮನಗರದಿಂದ ದೊಡ್ಡಬಳ್ಳಾಪುರಕ್ಕೆ ಬೈಕ್‌ನಲ್ಲಿ ತೆರಳುವಾಗ ಭಾನುವಾರ ರಾತ್ರಿ 11.30ರ ಸುಮಾರಿಗೆ ಹೊರವರ್ತುಲ ರಸ್ತೆಯ ಸತ್ಯಸಾಯಿಬಾಬಾ ದೇವಸ್ಥಾನದ ಬಳಿ ಘಟನೆ ನಡೆದಿದೆ.

ದೊಡ್ಡಬಳ್ಳಾಪುರದಲ್ಲಿ ಎಲೆಕ್ಟ್ರಿಷಿಯನ್‌ ಕೆಲಸ ಮಾಡುವ ಗಗನ್‌, ತಿಂಗಳಿಗೆ ಒಮ್ಮೆ ರಾಮನಗರಕ್ಕೆ ಬಂದು ಹೋಗುತ್ತಿದ್ದ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ರಾಮನಗರಕ್ಕೆ ಬಂದಿದ್ದು, ಭಾನುವಾರ ರಾತ್ರಿ ದೊಡ್ಡಬಳ್ಳಾಪುರಕ್ಕೆ ಹೋಗುವಾಗ ಮಾರ್ಗ ಮಧ್ಯೆ ಬೈಕ್‌ ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಫ‌ುಟ್‌ಪಾತ್‌ಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಮೇತ ಗಗನ್‌ ರಸ್ತೆಗೆ  ಬಿದ್ದಿದ್ದಾನೆ. ಹೆಲ್ಮೆಟ್‌ ಧರಿಸದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಸಂಬಂಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Nalin kumar kateel

ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಬೀದಿಗಿಳಿದು ಹೋರಾಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್

2-sddsa

Karnataka-Tamilnadu ನೀರಿಗಾಗಿ ಕಚ್ಚಾಟ ಸಾಕು,ನಾವು ಬ್ರದರ್ಸ್: ಡಿಸಿಎಂ ಡಿಕೆಶಿ

1-sadsad

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

rishi in telugu web series

ವೆಬ್ ಸಿರೀಸ್ ನತ್ತ ರಿಷಿ: ತೆಲುಗಿನ ‘ಶೈತಾನ್’ನಲ್ಲಿ ನಟನೆ

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು!

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು

2-

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೀಸಿ ನೀಡಲು ಲಂಚ ಸ್ವೀಕರಿಸಿದ ಪ್ರಾಂಶುಪಾಲ ಲೋಕಾಯುಕ್ತ ಬಲೆಗ

ಟೀಸಿ ನೀಡಲು ಲಂಚ ಸ್ವೀಕರಿಸಿದ ಪ್ರಾಂಶುಪಾಲ ಲೋಕಾಯುಕ್ತ ಬಲೆಗ

ಫೇಸ್‌ಬುಕ್‌ನಲ್ಲಿ ಪೀಠೊಪಕರಣ ಮಾರಲು ಹೋದ ವ್ಯಕ್ತಿಗೆ 98 ಸಾವಿರ ರೂ. ವಂಚನೆ

ಫೇಸ್‌ಬುಕ್‌ನಲ್ಲಿ ಪೀಠೊಪಕರಣ ಮಾರಲು ಹೋದ ವ್ಯಕ್ತಿಗೆ 98 ಸಾವಿರ ರೂ. ವಂಚನೆ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

tdy-6

ನೆರೆ ತಡೆಗೆ 1,500 ಕಿ.ಮೀ. ಕಾಲುವೆ ಅಗತ್ಯ

ಗ್ಯಾರಂಟಿ ದುಬಾರಿ? ಐದು ಭರವಸೆ ಜಾರಿಯಿಂದಾಗಿ ಬೊಕ್ಕಸಕ್ಕೆ ಹೊರೆ

ಗ್ಯಾರಂಟಿ ದುಬಾರಿ? ಐದು ಭರವಸೆ ಜಾರಿಯಿಂದಾಗಿ ಬೊಕ್ಕಸಕ್ಕೆ ಹೊರೆ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

Nalin kumar kateel

ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಬೀದಿಗಿಳಿದು ಹೋರಾಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್

2-sddsa

Karnataka-Tamilnadu ನೀರಿಗಾಗಿ ಕಚ್ಚಾಟ ಸಾಕು,ನಾವು ಬ್ರದರ್ಸ್: ಡಿಸಿಎಂ ಡಿಕೆಶಿ

tdy-17

ಯಶವಂತಪುರ- ಹಾಸನಕ್ಕೆ ರೈಲು ಸೇವೆ ವಿಸ್ತರಿಸಿ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

1-sadsad

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ