ನಶೆಯಲ್ಲಿದ್ದ ಗೆಳತಿಯರ ಮೇಲೆ ಅತ್ಯಾಚಾರ
Team Udayavani, Feb 8, 2023, 2:59 PM IST
ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತೆ ಯರ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ವಿದ್ಯಾರ್ಥಿಗಳನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಗರಕಿಪತಿ ಅಜಯ್ ವೆಂಕಟ್ ಸಾಯಿ(23) ಹಾಗೂ ಬಿಹಾರ ಜಿಲ್ಲೆಯ ಆದಿತ್ಯ ಅಭಿರಾಜ್ (26) ಬಂಧಿತರು.
ಆರೋಪಿಗಳು ಫೆ.6ರಂದು ನಸುಕಿನ 2 ಗಂಟೆ ಸುಮಾರಿಗೆ ಇಬ್ಬರು ಸ್ನೇಹಿತೆಯ ರನ್ನು ಮನೆಗೆ ಕರೆಸಿಕೊಂಡು ಮದ್ಯ ಸೇವಿಸಿದ್ದಾರೆ. ಬಳಿಕ ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಅಜಯ್ ವೆಂಕಟ್ ಪಂಜಾಬ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಆದಿತ್ಯ ಅಭಿರಾಜ್ ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ಹೀಗಾಗಿ ಅಜಯ್ ವೆಂಕಟ್ ಆಗಾಗ್ಗೆ ಬೆಂಗಳೂರಿನ ಕೋರ ಮಂಗಲದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಆದಿತ್ಯ ಅಭಿರಾಜ್ ಮನೆಗೆ ಬಂದು, ಕೆಲ ದಿನಗಳ ಕಾಲ ಇದ್ದು, ಸ್ನೇಹಿತರಿಗೆ ಪಾರ್ಟಿ ಕೊಡುತ್ತಿದ್ದ. ಇನ್ನು ಸಂತ್ರಸ್ತೆ ಪೈಕಿ ಒಬ್ಬರು ಹಾಗೂ ಆರೋಪಿಗಳಿಬ್ಬರು ಈ ಹಿಂದೆ ಪಂಜಾಬ್‌ನ ಜಲಾಂದರ್‌ನಲ್ಲಿರುವ ಲೌಲಿ ಪ್ರೊಫೆಷನಲ್ ಯುನಿವರ್ಸಿಟಿಯಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರು. ನಾಲ್ಕು ವರ್ಷಗಳಿಂದ ಮೂವರು ಪರಸ್ಪರ ಪರಿಚಯಸ್ಥರಾಗಿದ್ದಾರೆ.
ಸಂತ್ರಸ್ತೆ ಒಂದೆರಡು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಇಲ್ಲಿಯೆ ಕೆಲಸ ಮಾಡಿ ಕೊಂಡಿದ್ದಾರೆ. ಫೆ.4ರಂದು ಬೆಂಗಳೂರಿಗೆ ಬಂದಿದ್ದ ಅಜಯ್ ವೆಂಕಟ್, ಆದಿತ್ಯ ಮನೆಯಲ್ಲಿ ವಾಸವಾಗಿದ್ದ. ಫೆ.5ರಂದು ಸಂಜೆ ಸ್ನೇಹಿತೆಗೆ ಕರೆ ಮಾಡಿದ ಆರೋಪಿ, ಕೋರಮಂಗಲದಲ್ಲಿರುವ ಸ್ನೇಹಿತ ಮನೆಗೆ ಪಾರ್ಟಿ ಮಾಡಲು ಬರುವಂತೆ ಸೂಚಿಸಿದ್ದಾನೆ. ಅದಕ್ಕೆ ಒಪ್ಪಿದ ಆಕೆ, ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹೋಗಿದ್ದಾಳೆ. ತಡರಾತ್ರಿ 11. 45ರಿಂದ ನಸುಕಿನ 1.46ರವರೆಗೆ ನಾಲ್ವರು ಪಾರ್ಟಿ ಮಾಡಿದ್ದಾರೆ. ನಾಲ್ವರು ಕಂಠಪೂರ್ತಿ ಮದ್ಯ ಸೇವಿಸಿದ್ದರು ಎಂದು ಪೊಲೀಸರು ಹೇಳಿದರು.
ಕೃತ್ಯ ಬಳಿಕ ಯುವತಿಯರಿಗೆ ಕ್ಯಾಬ್‌ಬುಕ್: ಮದ್ಯದ ನಶೆಯಲ್ಲಿದ್ದ ಸ್ನೇಹಿತೆಯ ಖಾಸಗಿ ಅಂಗಾಂಗ ಮುಟ್ಟುತ್ತಾ ಆಕೆಯನ್ನು ವಿವಸ್ತ್ರಗೊಳಿಸಿದ ಅಜಯ್ ವೆಂಕಟ್ ಸಾಯಿ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮತ್ತೂಬ್ಬ ಆರೋಪಿ ಆದಿತ್ಯ ಕೂಡ ಇನ್ನೊಬ್ಬ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅನಂತರ ಫೆ.6ರಂದು ಮುಂಜಾನೆ 5 ಗಂಟೆ ಸುಮಾರಿಗೆ ಆರೋಪಿಗಳೇ ಯುವತಿಯರಿಗೆ ಕ್ಯಾಬ್ ಬುಕ್ ಮಾಡಿ ಮನೆಗೆ ಕಳುಹಿಸಿದ್ದರು. ಘಟನೆಯಿಂದ ಬೇಸತ್ತ ಯುವತಿ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಪ್ರಿಲ್ ಮೊದಲ ವಾರ ಬಿಜೆಪಿ ಪಟ್ಟಿ: ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್ ಪಟ್ಟಿ
ಅಂತಿಮವಾಗದ ಸಿದ್ದರಾಮಯ್ಯ ಕ್ಷೇತ್ರ: ಇಂದು ಬಾದಾಮಿಯಲ್ಲಿ 2. ಕಿ. ಮೀ. ರೋಡ್ ಶೋ
ರಾಜಧಾನಿಯಲ್ಲಿ ಇಂದು ಶಾ, ನಾಳೆ ಪ್ರಧಾನಿ ಮೋದಿ
ಪಂಚಮಸಾಲಿಗೆ ಸಿಗುವುದೇ ಮೀಸಲಾತಿ? ಇಂದು ಬೊಮ್ಮಾಯಿ ಸರಕಾರದ ಕೊನೇ ಸಂಪುಟ ಸಭೆ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
MUST WATCH
ಹೊಸ ಸೇರ್ಪಡೆ
ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ
ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ
64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ
ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ