ವೇತನ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣಾದ ನೌಕರನ ಅಂತ್ಯಕ್ರಿಯೆ ಕಾರ್ಯ ಗೌಪ್ಯ!
Team Udayavani, Feb 8, 2023, 3:01 PM IST
ಬೆಂಗಳೂರು: ಮಾಸಿಕ ವೇತನ ನೀಡ ದಕ್ಕೆ ಬೇಸರಗೊಂಡಿದ್ದ ಗುಜರಿ ಕೆಲಸ ಗಾರ ಎಂ.ಡಿ. ರೂಹುಲ್ ಹೌಲಾ ದಾರ್(30) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರವನ್ನು ಸಂಬಂಧಿಕರಿಗೂ ತಿಳಿಸದೆ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆತನ ಅಂತ್ಯಕ್ರಿಯೆ ನೆರವೇರಿಸಿದ ಗುಜರಿ ವ್ಯಾಪಾರಿ ಮೊಹಮ್ಮದ್ ರಂಜಾನ್ (40) ಹಾಗೂ ಕೆಲಸಗಾರ ರಸಲ್ (24) ಎಂಬುವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಎಂ.ಡಿ. ರುಹುಲ್, 4 ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು ಸಿಗೇ ಹಳ್ಳಿಯಲ್ಲಿ ವಾಸವಿದ್ದರು. ಆರೋಪಿ ಮೊಹಮ್ಮದ್ ರಂಜಾನ್ ಗುಜರಿ ಮಳಿಗೆಯಲ್ಲಿ ಸೈಕಲ್‌ನಲ್ಲಿ ಸುತ್ತಾಡಿ ಪ್ಲಾಸ್ಟಿಕ್ ಸಂಗ್ರಹಿಸಿ ತರುತ್ತಿದ್ದ. ಎರಡು ತಿಂಗಳಿನಿಂದ ಎಂ.ಡಿ. ರುಹೂಲ್‌ಗೆ ಸಂಬಳ ನೀಡಿರಲಿಲ್ಲ. ಜ.14ರಂದು ಮೊಹಮ್ಮದ್ ರಂಜಾನ್ ಬಳಿ ತೆರಳಿದ್ದ ರುಹೂಲ್, ಸಂಬಳ ನೀಡುವಂತೆ ಕೋರಿದ್ದರು. ಅದಕ್ಕೆ ಕೋಪಗೊಂಡ ರಂಜಾನ್, ನೀನು ಅಯೋಗ್ಯ. ನಿನಗೆ ಕೆಲಸ ಕೊಟ್ಟಿ ರುವುದೇ ಹೆಚ್ಚು. ಸಂಬಳ ಕೇಳುತ್ತಿಯಾ’ ಎಂದು ನಿಂದಿಸಿದ್ದಾನೆ. ಇದರಿಂದ ನೊಂದ ರುಹೂಲ್ ಮನೆಯಲ್ಲೇ ಲುಂಗಿಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ವಿಚಾರ ತಿಳಿದ ಆರೋಪಿಗಳಾದ ರಸಲ್ ಮತ್ತು ಮೊಹಮ್ಮದ್ ರಂಜಾನ್ ಆತ್ಮ ಹತ್ಯೆ ಪ್ರಕರಣದಲ್ಲಿ ತನ್ನನ್ನು ಪೊಲೀಸರು ಬಂಧಿಸಬಹುದೆಂದು ತಿಳಿದು, ಮೃತ ದೇಹವನ್ನು ಮುಸ್ಲಿಂ ವಿಧಿ- ವಿಧಾನ ದಂತೆ ಅಲಂಕರಿಸಿ ಖಾಜಿಸೊನ್ನೇನ ಹಳ್ಳಿಯ ಖಬಸ್ತಾನ್‌ಕ್ಕೆ ಕೊಂಡೊಯ್ದು ಅಲ್ಲಿಯ ಸಿಬ್ಬಂದಿಯ ದಿಕ್ಕು ತಪ್ಪಿಸಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಕಾಡುಗೋಡಿ ಪೊಲೀಸರು ರೂಹುಲ್ ಸಂಬಂಧಿಕರನ್ನು ಕರೆಸಿ ಪ್ರಕರಣ ದಾಖ ಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.
ನಂತರ ಕೋರ್ಟ್ ಅನುಮತಿ ಪಡೆದು ಖಾಜಿಸೊನ್ನೇನಹಳ್ಳಿಯ ಖಬರ್‌ಸ್ತಾನದಲ್ಲಿದ್ದ ಹೂತಿಟಿದ್ದ ಮೃತ ದೇಹವನ್ನು ಹೊರಗೆ ತೆಗೆದು, ಪುನಃ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ
ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…
ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು