ತಗ್ಗಿದ ಮಳೆ ಅಬ್ಬರ; ತಗ್ಗದ ಅವಾಂತರ


Team Udayavani, Oct 22, 2020, 12:23 PM IST

bng-tdy-5

ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಪ್ಯಾಲೇಸ್‌ ಗ್ರೌಂಡಿನಲ್ಲಿ ನೀರು ತುಂಬಿಕೊಂಡಿರುವುದು.

ಬೆಂಗಳೂರು: ನಗರದಲ್ಲಿ ಬುಧವಾರ ಮಳೆ ಅಬ್ಬರ ಇರಲಿಲ್ಲ; ಆದರೆ, ಅದು ಸೃಷ್ಟಿಸಿದ ಅವಾಂತರ ಮುಂದುವರಿದಿತ್ತು! ಮಂಗಳವಾರ ತಡರಾತ್ರಿವರೆಗೂ ಸುರಿದ ಭಾರಿ ಮಳೆಗೆ ನಗರದಕೆಲವು ಭಾಗಗಳು ಜಾಗರಣೆ ಮಾಡಿದವು. ರಸ್ತೆಗಳು, ಅಂಡರ್‌ಪಾಸ್‌ಗಳು, ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌, ತಗ್ಗು ಪ್ರದೇಶ ಗಳು ಜಲಾವೃತಗೊಂಡು ಅಲ್ಲಲ್ಲಿ ಸಣ್ಣ ಕೆರೆಗಳಾಗಿ ಮಾರ್ಪಟ್ಟಿದ್ದವು. ಕೋರಮಂಗಲ, ಹೊರ ಮಾವು,ಬಾಗಲೂರುಸುತ್ತಲಿನಪ್ರದೇಶಗಳ ರಸ್ತೆಗಳಲ್ಲಿ ನಾಲ್ಕೈದು ಅಡಿ ನೀರು ನಿಂತು ಕೆರೆಯಂತಾಗಿತ್ತು. ಬಿಬಿಎಂಪಿಯ 28ವಾರ್ಡ್‌ ಗಳಲ್ಲಿ ಸುಮಾರು 75 ಮಿ.ಮೀ.ಗೂ ಅಧಿಕ ಮಳೆ ಸುರಿದಿದೆ.

ರಾಜರಾಜೇಶ್ವರಿನಗರ, ದತ್ತ ಲೇಔಟ್‌, ಕೋರ ಮಂಗಲ 1ನೇ ಬ್ಲಾಕ್‌, ರುಕ್ಮಿಣಿನಗರ, ರಾಯಲ್‌ ಎನ್‌ಕ್ಲೈವ್‌, ಸಿಡೇದಹಳ್ಳಿ, ಉಲ್ಲಾಳ ‌ ಮತ್ತು ಸುತ್ತಲಿನ ಪ್ರದೇಶ, ಉಪನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿತ್ತು. ಕೋರಮಂಗಲದ 1ನೇ ಬ್ಲಾಕ್‌, 4ನೇ ಬ್ಲಾಕ್‌ ಸೇರಿದಂತೆ ಸುತ್ತ ಮುತ್ತಲಪ್ರದೇಶಗಳಲ್ಲಿ ಮನೆ ಹಾಗೂ ಅಪಾರ್ಟ್‌ ಮೆಂಟ್‌ ಬೇಸ್‌ಮೆಂಟ್‌ಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ರಸ್ತೆಯಲ್ಲಿ ಮೂರು ಅಡಿ ನೀರು ಹಾಗೂ ಕೆಸರು ತುಂಬಿದ್ದರಿಂದ ವಾಹನಸವಾರರು ಪರದಾಡಿದರು.

ತೇಲಿದ ಅಡುಗೆ ಸಾಮಗ್ರಿ;ಅತಿಥಿಗಳ ಪರದಾಟ: ರಾಜರಾಜೇಶ್ವರಿ ನಗರ ಸಮೀಪದ ಮೀನಾಕ್ಷಿ ಕಲ್ಯಾಣ ಮಂಟಪದ ಊಟದ ಸಭಾಂಗಣ, ಬೇಸ್‌ಮೆಂಟ್‌ಗೆ ನೀರು ನುಗ್ಗಿದ ಪರಿಣಾಮ ಕುರ್ಚಿ, ಟೇಬಲ್‌, ಅಡುಗೆಪಾತ್ರೆಗಳು ನೀರಿನಲ್ಲಿ ತೇಲಿದವು. ರಾತ್ರಿ ರಿಸೆಪ್ಷನ್‌ಗೆ ಬಂದಿದ್ದ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲು ಮದುವೆ ಮನೆಯವರು ಪರದಾಡಿದರು.

ಅರಮನೆ ಮೈದಾನಕ್ಕೆ ನೀರು :  ರಾತ್ರಿ ಸುರಿದ ಮಳೆಗೆ ಅರಮನೆ ಮೈದಾನಕ್ಕೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿತು. ಇಲ್ಲಿನ ನಲಪಾಡ್‌ ಪೆವಿಲಿಯನ್‌ ಆವರಣದಲ್ಲಿ ಅಪಾರ ನೀರು ತುಂಬಿದ್ದರಿಂದ ಮೊಟರ್‌ ಬಳಸಿಕೊಂಡು ನೀರನ್ನು ಹೊರಹಾಕಲಾಯಿತು. ಗಾಳಿಸಹಿತ ಸುರಿದ ಮಳೆಗೆ ನಗರದ ಮಲ್ಲೇಶ್ವರ, ಬನಶಂಕರಿ, ಜೆ.ಪಿ.ನಗರ, ಜಯನಗರ, ಜೆ.ಪಿನಗರ ಸೇರಿದಂತೆ ವಿವಿಧೆಡೆ 12 ಮರಗಳು ಧರೆಗುರುಳಿದ್ದು, 53 ರಂಬೆಗಳು ನೆಲಕಚ್ಚಿವೆ.

ನೀರಿನಲ್ಲಿ ಮುಳುಗಿದ ವಾಹನಗಳು :

ಬೆಳ್ಳಂದೂರು ಸಮೀಪದಕಸವನಹಳ್ಳಿಕೆರೆ ತುಂಬಿಹರಿದ ಪರಿಣಾಮಕೆರೆಯ ಸುತ್ತಲಿನ ಮನೆಗಳು, ಬೇಗೂರು, ಮಂಗಲಮ್ಮನಪಾಳ್ಯದ ಬಹುತೇಕ ಮನೆಗಳಿಗೆ ನೀರು ನುಗ್ಗಿತು. ಇದರಿಂದ ಬೇಸ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರುಗಳು, ದ್ವಿಚಕ್ರ ವಾಹನಗಳು ಜಲಾವೃತಗೊಂಡವು. ಸುಮಾರು 800ಮನೆಗಳಿರುವಅಪಾರ್ಟ್‌ಮೆಂಟ್‌ಗೆನೀರುನುಗ್ಗಿದ ಪರಿಣಾಮ ಬೇಸ್‌ಮೆಂಟ್‌ನ ಸಂಪುಗಳಿಗೆ ಕೊಳಚೆ ನೀರು ತುಂಬಿಕೊಂಡಿತ್ತು. ಎಲೆಕ್ಟ್ರಿಕಲ್‌ ಕೊಠಡಿಯೂ ಜಲಾವೃತವಾದ ಪರಿಣಾಮ ಫ್ಲ್ಯಾಟ್‌ಗಳ ವಿದ್ಯುತ್‌ ಸಂಪರ್ಕವೂ ಕಡಿತವಾಗಿತ್ತು. ಅದೇ ರೀತಿ, ಹೊಸಕೆರೆಹಳ್ಳಿಯ ರಾಜಕಾಲುವೆಯಲ್ಲಿ ನೀರು ಪ್ರಯಾಣ ಹೆಚ್ಚಾಗಿ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿತ್ತು. ರಾಜಕಾಲುವೆ ಸಮೀಪದ ಮನೆಗಳು, ಕಟ್ಟಡ ಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾಯದ ಸ್ಥಿತಿ ತುಲುಪಿವೆ. ಬೆಳ್ಳಂದೂರು ವಾರ್ಡ್‌ನ ಹರಳೂರು ಕೆರೆ ಕೋಡಿ ಒಡೆದಿದ್ದು, ಶುಭ ಎನ್‌ಕ್ಲೈವ್‌ಬಡಾವಣೆಗೆ ನೀರು ನುಗ್ಗಿತ್ತು

 ದಿಢೀರ್‌ ನೆರೆ ತಪ್ಪಿಸಲು ಇಂಗುಗುಂಡಿ :

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಾಗ್ಗೆ ಉಂಟಾಗುವ “ದಿಢೀರ್‌ ನೆರೆ ತಪ್ಪಿಸಲು ‌ ಅಲ್ಲಲ್ಲಿ ಇಂಗುಗುಂಡಿ (ರಿಚಾರ್ಜಿಂಗ್‌ ಪಿಟ್‌)ಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದುಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ ತಿಳಿಸಿದರು.

ಮಂಗಳವಾರ ಸುರಿದ ಭಾರಿ ಮಳೆಯಿಂದ ಹಾನಿ ಉಂಟಾದ ಆರ್‌.ಆರ್‌. ನಗರ ಗುರುದತ್ತ ಲೇಔಟ್‌ಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ರಾಜಕಾಲುವೆಗಳಲ್ಲಿ ನೀರಿನಹರಿವುಈ ಮೊದಲು ಶೇ. 40ರಷ್ಟಿತ್ತು.ಅದಕ್ಕೆ ತಕ್ಕಂತೆ ರಾಜಕಾಲುವೆಗಳೂಇದ್ದವು. ಆದರೆ, ಈಗಕಾಂಕ್ರೀಟ್‌ಮಯದಿಂದ ಹರಿವಿನ ಮಟ್ಟ ಶೇ. 94ರಷ್ಟಾಗಿದೆ. ಇದರಿಂದ ಒತ್ತಡಹೆಚ್ಚಿದ್ದು, ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಹೇಳಿದರು.

ಮಂಗಳವಾರ ರಾತ್ರಿ ಸುಮಾರು 75ರಿಂದ 150 ಮಿ.ಮೀ. ಮಳೆ ಸುರಿದಿದೆ.ಈಮಧ್ಯೆ ಪಾಲಿಕೆ ವತಿಯಿಂದ ರಾಜಕಾಲುವೆ ಹಾಗೂ ಜಲಮಂಡಳಿಯಿಂದ ಸ್ಯಾನಿಟರಿ ಕಾಮಗಾರಿ ನಡೆಯುತ್ತಿದೆ ಎಂದ ಅವರು, ಉದ್ದೇಶಿತ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಬೇಕಿದೆ.ಅದನ್ನುಕೂಡಲೇಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ1,100ಕಟ್ಟಡಗಳನ್ನು ತೆರವು ಮಾಡಲಾಗಿದ್ದು, 700 ಕಟ್ಟಡಗಳ ತೆರವು ಕಾರ್ಯನಡೆಯಬೇಕಿದೆ. ಕೋವಿಡ್‌ ಹಿನ್ನೆಲೆ ನವೆಂಬರ್‌ ವರೆಗೂ ಯಾವುದೇ ತೆರವು ಕಾರ್ಯ ನಡೆಸದಂತೆ ನ್ಯಾಯಾಲಯ ಸೂಚನೆ ನೀಡಿದೆ. ನವೆಂಬರ್‌ ನಂತರ ತೆರವು ಕಾರ್ಯ ಪುನಾರಂಭಗೊಳ್ಳಲಿದೆ ಎಂದರು.

ನಗರದಲ್ಲಿ 842 ಕಿ.ಮೀ ಇದ್ದು, ಈಗಾಗಲೇ 400 ಕಿ.ಮೀ ಉದ್ದದ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಿ, ಆರ್‌ಸಿಸಿ ಗೋಡೆ ನಿರ್ಮಿಸಲಾಗಿದೆ. ಇನ್ನುಳಿದ 400 ಕಿ.ಮೀ. ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಮಾತನಾಡಿ, ಗುರುದತ್‌ ಲೇಔಟ್‌ನಲ್ಲಿಯರಾಜಕಾಲುವೆ ತಡೆಗೋಡೆಯು ಸುಮಾರು 20 ವರ್ಷಗಳ ಹಿಂದೆ ಕಟ್ಟಿದ್ದು. ಇದನ್ನು ತೆರವುಗೊಳಿಸಿ, ಹೊಸದಾಗಿ ಕಟ್ಟುವ ಕೆಲಸ ನಡೆಯುತ್ತಿದೆ. ಜತೆಗೆಜಲಮಂಡಳಿಯಿಂದಒಳ ಚರಂಡಿ ಕೆಲಸ ನಡೆಸುತ್ತಿದೆ. ಈ ಮಧ್ಯೆ ಸುರಿದ ಭಾರೀ ಮಳೆಗೆ ರಾಜಕಾಲುವೆಯ

ನೀರಿನ ರಭಸ ಹಾಗೂ ಜಲಮಂಡಳಿಯ

ಕಾಮಗಾರಿಯಿಂದನೀರುಹೆಚ್ಚುಬಂದು, ತಡೆಗೋಡೆ ಜಾಗದಲ್ಲಿ ಮಣ್ಣುಕೊರೆತ ಉಂಟಾಗಿ ಕುಸಿದುಬಿದ್ದಿದೆ. ಗೋಡೆ ಕುಸಿತದಿಂದ ಬಾಧಿತವಾಗಿರುವ ಎರಡು ಮನೆಗಳಲ್ಲಿ ಎಂಟು ಕುಟುಂಬಗಳಿದ್ದು, ಅವರನ್ನು ಬೇರೆಡೆ ಸ್ಥಳಾಂತರಿಸಿ, ಕಾಮಗಾರಿ ಮುಗಿದ ಬಳಿಕ ವಾಪಾಸ್‌ ಕರೆಸಲಾಗುವುದು ಎಂದರು.

ವಲಯ ಜಂಟಿ ಆಯುಕ್ತರು ನಾಗರಾಜ್‌, ಮುಖ್ಯ ಎಂಜಿನಿಯರ್‌ (ರಾಜಕಾಲುವೆ) ಪ್ರಹ್ಲಾದ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಐನ್‌ ಸ್ಟೈನ್ ಇನ್ನೊಮ್ಮೆ ವಿಜಯಿಯಾದರೆ?

ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?

ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿ

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೊಮೆಟೋ ದರ ಮತ್ತೆ ಏರಿಸಿದ ಮಳೆ

ಟೊಮೆಟೋ ದರ ಮತ್ತೆ ಏರಿಸಿದ ಮಳೆ

ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ

ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ಐನ್‌ ಸ್ಟೈನ್ ಇನ್ನೊಮ್ಮೆ ವಿಜಯಿಯಾದರೆ?

ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?

ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.