ರಾಜ್ಯದ ಎಲ್ಲಯಾತ್ರಿಕರೂ ಸುರಕ್ಷಿತ

Team Udayavani, Jul 5, 2018, 12:02 PM IST

blore-5.jpg

ಬೆಂಗಳೂರು: ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ ಎಲ್ಲ 259 ಕೈಲಾಸ ಮಾನಸ ಸರೋವರ ಯಾತ್ರಿಗಳೂ ಸುರಕ್ಷಿತ ಸ್ಥಳದಲ್ಲಿದ್ದು, ಬುಧವಾರ ತಮ್ಮ ಊರುಗಳಿಗೆ ಹಿಂತಿರುಗುವ ಸಿದ್ಧತೆಯಲ್ಲಿದ್ದಾರೆ. ಯಾತ್ರಿಕರೆಲ್ಲರೂ ವಿವಿಧ ತಂಡಗಳಲ್ಲಿ ದೆಹಲಿ, ಕಠ್ಮಂಡು, ಸಿಮಿಕೋಟ್‌ ಮತ್ತಿತರ ಕಡೆಗಳಲ್ಲಿ ಸುರಕ್ಷಿತವಾಗಿದ್ದಾರೆ. ವಿಮಾನ, ರೈಲುಗಳ ಮೂಲಕ ಬಂದು ತಲುಪಲಿದ್ದಾರೆ. ಈ ಪೈಕಿ ಜಿಗಣಿಯಿಂದ ತೆರಳಿದ್ದ 35 ಜನರ ತಂಡ ಬುಧವಾರ ರಾತ್ರಿಯೇ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

“ಸ್ವಲ್ಪದರಲ್ಲೇ ಬಚಾವ್‌’: ಬೆಂಗಳೂರಿಗೆ ಬಂದಿಳಿದ ಆ ತಂಡದ ನಾಗೇಶ್‌ “ಉದಯವಾಣಿ’ಯೊಂದಿಗೆ ಮಾತನಾಡಿ, “15 ದಿನಗಳ ಹಿಂದೆಯೇ ನಾವು ಜಿಗಣಿಯಿಂದ ವೈಷ್ಣವಿದೇವಿ ದರ್ಶನಕ್ಕೆ ತೆರಳಿದ್ದೆವು. ಅಮರನಾಥ ಯಾತ್ರೆಗೆ ತೆರಳುವ ಪ್ಲಾನ್‌ ಇತ್ತು. ಆದರೆ, ಅಲ್ಲಿ ಸಾಕಷ್ಟು ಮಳೆಯಾಗುತ್ತಿದೆ ಎಂಬ
ಮಾಹಿತಿ ಬಂತು. ಹಾಗಾಗಿ, ಆ ಪ್ರವಾಸ ಮೊಟಕುಗೊಳಿಸಿ, ಅಮೃತಸರದಿಂದ ವಿಮಾನದಲ್ಲಿ ಬಂದಿಳಿದೆವು’ ಎಂದು ಹೇಳಿದರು. 

“ನನ್ನ ಅಣ್ಣ ಸೋಮಪ್ರಸಾದ್‌ ಮತ್ತು ಅತ್ತಿಗೆ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಈಗ ಅವರು ಸಿಮಿಕೋಟ್‌ನಲ್ಲಿ ಸುರಕ್ಷಿತವಾಗಿದ್ದಾರೆ. ದೂರವಾಣಿ ಮೂಲಕ ಮಾತನಾಡಿದೆ. ಗುರುವಾರ ಬೆಂಗಳೂರಿಗೆ ಹಿಂತಿರುಗಲಿದ್ದಾರೆ’ ಎಂದು ಪ್ರಭು ಪ್ರಸಾದ್‌ ನಿಟ್ಟುಸಿರುಬಿಟ್ಟರು.

ಯಾರ್ಯಾರು ಎಲ್ಲೆಲ್ಲಿದ್ದಾರೆ?: “ಸಂಕಷ್ಟದಲ್ಲಿ ಸಿಲುಕಿರುವ ಬಹುತೇಕ ಎಲ್ಲರನ್ನೂ ಬುಧವಾರ ಸಂಪರ್ಕಿಸಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಇನ್ನು ಕೆಲವರು ಮಾನಸ ಸರೋವರ ಯಾತ್ರೆಯಿಂದ ವೈಷ್ಣವಿದೇವಿ ದರ್ಶನ ಪ್ರವಾಸಕ್ಕೆ ತೆರಳಿದ್ದಾರೆ. ಸಂಧ್ಯಾ ಅವರ ನೇತೃತ್ವದಲ್ಲಿ ನೂರು ಜನರ ಒಂದು ತಂಡವು ಸಿಮಿಕೋಟ್‌ನ ಸುರಕ್ಷಿತ ಜಾಗದಲ್ಲಿದೆ. ಬೆಂಗಳೂರಿನ ಜೆ.ಪಿ. ನಗರದ ಅಣ್ಣಪ್ಪ ಸೇರಿದಂತೆ 80 ಜನರ ತಂಡ ವೈಷ್ಣವಿದೇವಿ ದರ್ಶನಕ್ಕೆ ಪ್ರಯಾಣ ಬೆಳೆಸಿದ್ದಾರೆ.

ರಾಮನಗರದ ರೇವಮ್ಮ ಮತ್ತು ಸಿದ್ದರೇವಯ್ಯ ದೆಹಲಿಯಲ್ಲಿದ್ದಾರೆ. ನಗರದ ವಿನಾಯಕ ಭಟ್‌ ನೇತೃತ್ವದ 7 ಜನರ ತಂಡ ಕಠ್ಮಂಡು ವಿನಲ್ಲಿದೆ. ಮೈಸೂರಿನ ಛಾಯಾ ದೇವಿ ಸೇರಿ 15 ಜನರ ತಂಡ ನೇಪಾಳ ದಾಟಿ ಪ್ರವಾಸಕ್ಕೆ ತೆರಳಿದ್ದಾರೆ’ ಎಂದು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.

ಹವಾಮಾನ ವೈಪರಿತ್ಯ ದಿಂದ ನೇಪಾಳದ ಸಿಮಿಕೋಟ್‌ನಲ್ಲಿ ಭಾರಿ ಮಳೆಯಿಂದ ಕರ್ನಾಟಕ ಮೂಲದ 259 ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಯುದ್ಧವಿಮಾನಗಳ ಮೂಲಕ ಅವರೆಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ಕರೆತರಲಾಯಿತು.

Ad

ಟಾಪ್ ನ್ಯೂಸ್

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

Subhanshu’s contribution to India’s space future: A new chapter in space exploration

ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಶುಭಾಂಶು ಕೊಡುಗೆ: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ

Rain; ದ.ಕ. ,ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಜು.16 ರಂದು “ಆರೆಂಜ್‌ ಅಲರ್ಟ್‌’

Rain; ದ.ಕ. ,ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಜು.16 ರಂದು “ಆರೆಂಜ್‌ ಅಲರ್ಟ್‌’

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

ಕಲಾವಿದನಿಗೆ ನಿಂದನೆ: ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿರುದ್ಧ ಪ್ರಕರಣ

ಕಲಾವಿದನಿಗೆ ನಿಂದನೆ: ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿರುದ್ಧ ಪ್ರಕರಣ

7

Arrested: ಮಸಾಜ್‌ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಮಹಿಳೆ ಸೆರೆ, ನಾಲ್ವರ ರಕ್ಷಣೆ

Bengaluru: ದಾರಿ ಬಿಡದಿದ್ದಕ್ಕೆ ಸವಾರನ ಮೇಲೆ ಹಲ್ಲೆ

Bengaluru: ದಾರಿ ಬಿಡದಿದ್ದಕ್ಕೆ ಸವಾರನ ಮೇಲೆ ಹಲ್ಲೆ

5

Tragic: ಪುತ್ರಿಯ ಆತ್ಮಹತ್ಯೆ ಕಂಡು ತಾಯಿಯೂ ಆತ್ಮಹ*ತ್ಯೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

12-holehonnur

Holehonnuru: ಹಾವು ಕಚ್ಚಿ ಯುವಕ ಸಾ*ವು

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

11-hunsur

Hunsur: ಕೋಳಿ ಫಾರಂ ರೈಟರ್ ನಾಪತ್ತೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.