ಅಪ್ಪೆ ಮಿಡಿ ಮಾವು ಮೇಳ ಆಯೋಜನೆ

Team Udayavani, Apr 10, 2023, 2:36 PM IST

tdy-12

ಬೆಂಗಳೂರು: ದಕ್ಷಿಣ ಭಾರತದಲ್ಲಿ ಅಪ್ಪೆ ಮಿಡಿ ಮಾವಿಗೆ ಕರ್ನಾಟಕ ಜನಪ್ರಿಯತೆ ಪಡೆದಿದೆ. ಅಪ್ಪೆ ಮಿಡಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿಸುವ ನಿಟ್ಟಿನಲ್ಲಿ ಹೆಸರುಘಟ್ಟದ ಭಾರತೀಯ ತೋಟ ಗಾರಿಕಾ ಸಂಶೋಧನಾ ಸಂಸ್ಥೆ ಹೆಜ್ಜೆಯಿರಿಸಿದ್ದು ಇದೇ ಮೊದಲ ಬಾರಿಗೆ “ಅಪ್ಪೆಮಿಡಿ’ ಮಾವು ಮೇಳ ಆಯೋಜಿಸಲು ಮುಂದಾಗಿದೆ.

ಒಂದೇ ಸೂರಿನಡಿ ಮಲೆನಾಡು ಭಾಗದಲ್ಲಿ ಸಿಗುವ ನೂರಕ್ಕೂ ಅಧಿಕ ಅಪ್ಪೆ ಮಿಡಿ ಮಾವಿನ ತಳಿಗಳು ದೊರೆಯಲಿವೆ. ಏ. 12, 13ರಂದು ಹೆಸರುಘಟ್ಟದಲ್ಲಿ ಮೇಳ ನಡೆಯಲಿದ್ದು, ಅಪ್ಪೆಮಿಡಿ ಬೆಳೆಗಾರರ ಮತ್ತು ಉದ್ಯಮಿಗಳ ಸೇತುವೆ ಆಗಲಿದೆ. ರಾಜ್ಯದಲ್ಲಿ ಸುಮಾರು 250ಕ್ಕೂ ಅಧಿಕ ಅಪ್ಪೆ ಮಿಡಿಗಳ ತಳಿಗಳಿವೆ. ಆದರೆ ಮೇಳದಲ್ಲಿ 100ಕ್ಕೂ ಅಧಿಕ ಬಗೆಯ ಅಪ್ಪೆಮಿಡಿ ಮಾವುಗಳ ಪ್ರದರ್ಶನ ಮತ್ತು ಮಾರಾಟ ಇರಲಿವೆ ಎಂದು ತೋಟಗಾರಿಕಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಲೆನಾಡು ಭಾಗದಲ್ಲಿ ಅಪ್ಪೆ ಮಿಡಿ ಉದ್ಯಮ ವನ್ನಾಗಿ ಸ್ವೀಕರಿಸಿದವರಿದ್ದಾರೆ. ಸಾಗರ, ಶಿರಸಿ, ಶಿಕಾರಿಪುರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಅಪ್ಪೆ ಮಿಡಿ ಮಾವಿನ ಉಪ್ಪಿನ ಕಾಯಿ ತಯಾರಕರಿ ದ್ದಾರೆ ಅವರು ಕೂಡ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪ್ಪೆ ಮಿಡಿಯಿಂದ ತಯಾರಿಸಲಾಗುವ ಖಾದ್ಯಗಳ ಪ್ರದರ್ಶನವೂ ಇರಲಿದೆ. ಮಲೆನಾಡು ಭಾಗದ ಅಪ್ಪೆಮಿಡಿ ಬೆಳೆವ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬೇಡಿಕೆಯಷ್ಟು ಅಪ್ಪೆ ಮಿಡಿ ಪೂರೈಕೆ ಆಗುತ್ತಿಲ್ಲ: ಅಪ್ಪೆಮಿಡಿ ಮಾವಿನ ಕಾಯಿಯಿಂದ ತಯಾರಿಸಿದ ಉಪ್ಪಿನಕಾಯಿಗಳು ಸೊಗಸಾದ ಪಾಕಶಾಲೆಯ ಅನುಭವ ನೀಡುತ್ತದೆ. ಅಪ್ಪೆ ಮಿಡಿ ಮಾರುಕಟ್ಟೆ ಯಲ್ಲಿ ಬೇಡಿಕೆ ಹತ್ತನೇ ಒಂದು ಭಾಗದಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಬೇಡಿಕೆ ಮತ್ತು ಲಭ್ಯತೆ ಆಧಾರದ ಮೇಲೆ ಅಪ್ಪೆ ಮಿಡಿ ಮಾವಿನ ಬೆಲೆ ಕ್ವಿಂಟಲ್‌ಗ‌ಳ ಮೇಲೆ ನಿಗದಿಯಾಗುತ್ತದೆ ಎಂದು ಹೆಸರುಘಟ್ಟದ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಣ್ಣುಗಳ ವಿಭಾಗದ ಪ್ರಧಾನ ವಿಜ್ಞಾನಿ ಎಂ.ಶಂಕರ್‌ ಹೇಳುತ್ತಾರೆ. ಅಪ್ಪೆಮಿಡಿ ಮಾವನ್ನು ವಿಶೇಷವಾಗಿ ಶಿರಸಿ, ಸಾಗರ, ಸಿದ್ದಾಪುರ, ತೀರ್ಥಹಳ್ಳಿ, ಹೊಸನಗರ, ಕುಮಟಾ, ಹೊನ್ನಾವರ, ಸಕಲೇಶಪುರ, ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಬೆಳೆಯಲಾಗುತ್ತದೆ ಎನ್ನುತ್ತಾರೆ ಅವರು.

ಐದು ತಳಿಗಳ ಸಂಶೋಧನೆ: ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಕೂಡ ಅಪ್ಪೆಮಿಡಿ ಮಾವಿನ ಐದು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಬಾಳೆಕೊಪ್ಪ , ಸೂಡೂರು ಅಪ್ಪೆಮಿಡಿ ತಳಿಗಳು ಇದರಲ್ಲಿ ಸೇರಿದೆ. ಅವುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದು ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ತಳಿಗಳು ಭೂಮಿಗೆ ನಾಟಿ ಮಾಡಿದ 4-5 ವರ್ಷಗಳಲ್ಲಿ ಫ‌ಸಲು ಬಿಡಲಿವೆ. ಆರಂಭದಲ್ಲಿ ನಾಲ್ಕರಿಂದ ಐದು ಕೆ.ಜಿ.ಅಪ್ಪೆ ಮಿಡಿ ಮಾವು ದೊರೆಯಲಿವೆ. ನಂತರ ವರ್ಷ ಕಳೆದಂತೆ ಫ‌ಸಲಿನ ಪ್ರಮಾಣ ಅಧಿಕವಾಗಿರಲಿದೆ. ಸೀಮಿತ ಸಂಖ್ಯೆಯಲ್ಲಿ ಈ ತಳಿಯ ಸಸಿಗಳಿದ್ದು ಮೊದಲು ನೋಂದಣಿ ಮಾಡಿಕೊಂಡವರಿಗೆ ಖರೀದಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಅಪ್ಪೆಮಿಡಿ ಮಾವಿನಲ್ಲಿ 250ಕ್ಕೂ ಅಧಿಕ ತಳಿಗಳಿವೆ. ಅವುಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಕೆಲಸ ನಡೆದಿದೆ. ಕರ್ನಾಟಕ, ಗೋವಾ, ತಮಿಳುನಾಡು ಮತ್ತು ಕೇರಳದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಅಪ್ಪೆ ಮಿಡಿ ಮಾವಿನ ತಳಿ ಅಪಾಯದಲ್ಲಿದ್ದು, ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇದೆ ಮೊದಲ ಬಾರಿಗೆ ಅಪ್ಪೆಮಿಡಿ ಮಾವಿನ ಮೇಳ ಆಯೋಜಿಸಲಾಗಿದೆ. ●ಶಂಕರ್‌, ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಣ್ಣುಗಳ ವಿಭಾಗದ ಪ್ರಧಾನ ವಿಜ್ಞಾನಿ

●ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

Road mishap: ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್‌ ಸವಾರ ಸಾವು

Road mishap: ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್‌ ಸವಾರ ಸಾವು

Bangalore Karaga: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ

Bangalore Karaga: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ

Bengaluru: ಬೆಂಗಳೂರಿನಲ್ಲಿ 1.35 ಕೋಟಿ ರೂ. ನಗದು ವಶ

Bengaluru: ಬೆಂಗಳೂರಿನಲ್ಲಿ 1.35 ಕೋಟಿ ರೂ. ನಗದು ವಶ

Bengaluru: ಬಸ್‌ನಲ್ಲಿ ಮೊಬೈಲ್‌ ಕದಿಯುತ್ತಿದ್ದ ಗ್ಯಾಂಗ್‌ ಸೆರೆ

Bengaluru: ಬಸ್‌ನಲ್ಲಿ ಮೊಬೈಲ್‌ ಕದಿಯುತ್ತಿದ್ದ ಗ್ಯಾಂಗ್‌ ಸೆರೆ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.