19 ಕ್ಷೇತ್ರಗಳಲ್ಲಿ ಖರ್ಚು ವೆಚ್ಚ ಗುರುತು

Team Udayavani, Mar 30, 2023, 11:57 AM IST

TDY-6

ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಖರ್ಚಿನ ಮೇಲೆ ಹೆಚ್ಚಿನ ನಿಗಾವಹಿಸಲಾಗು ತ್ತಿದ್ದು, ಅದಕ್ಕಾಗಿ 19 ವಿಧಾನಸಭಾ ಕ್ಷೇತ್ರಗಳನ್ನು ಖರ್ಚು-ವೆಚ್ಚದ ಸೂಕ್ಷ್ಮ ಕ್ಷೇತ್ರಗಳನ್ನಾಗಿ ಗುರುತಿ ಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ತಡೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಚುನಾವಣಾ ವೆಚ್ಚದ ಮೇಲೆ ನಿಗಾವಹಿಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 19 ಕ್ಷೇತ್ರಗಳನ್ನು ಖರ್ಚು-ವೆಚ್ಚದ ಸೂಕ್ಷ್ಮ ಕ್ಷೇತ್ರಗಳನ್ನಾಗಿ ಗುರುತಿಸಲಾಗಿದೆ. ಆ ಕ್ಷೇತ್ರ ವ್ಯಾಪ್ತಿಯಲ್ಲಿನ ಚುನಾವಣಾ ಖರ್ಚು-ವೆಚ್ಚದ ಮೇಲೆ ನಿಗಾವಹಿಸಲು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಸಹಾಯಕ ಚುನಾವಣಾಧಿಕಾರಿ, ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿ, ಲೆಕ್ಕಾಧಿಕಾರಿಗಳ ತಂಡವನ್ನು ರಚಿಸಲಾಗಿದೆ. 19 ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನೂ ಎರಡು ವಿಧಾನಸಭಾ ಕ್ಷೇತ್ರಗಳನ್ನು ಖರ್ಚು-ವೆಚ್ಚ ಸೂಕ್ಷ್ಮ ಕ್ಷೇತ್ರಗಳು ಎಂದು ಪರಿಗಣಿಸುವಂತೆ ಚುನಾ ವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಖರ್ಚು-ವೆಚ್ಚದ ಸೂಕ್ಷ್ಮ ಕ್ಷೇತ್ರಗಳ ವಿವರ: ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್‌, ಕೆ.ಆರ್‌.ಪುರ, ಮಲ್ಲೇಶ್ವರ, ಹೆಬ್ಟಾಳ, ಸರ್ವಜ್ಞನಗರ, ಸಿ.ವಿ. ರಾಮನನಗರ, ರಾಜರಾಜೇಶ್ವರಿ ನಗರ, ಶಿವಾಜಿ ನಗರ, ಶಾಂತಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಪದ್ಮನಾಭನಗರ, ಬಿಟಿಎಂಲೇಔಟ್‌, ಜಯನಗರ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಖರ್ಚು-ವೆಚ್ಚ ಸೂಕ್ಷ್ಮ ಕ್ಷೇತ್ರಗಳು ಎಂದು ಗುರುತಿಸಲಾಗಿದೆ.

 99 ಪ್ರಕರಣ ದಾಖಲು : ನೀತಿ ಸಂಹಿತೆ ಜಾರಿಗೂ ಮುನ್ನ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಿಕೆ ಮಾಡುವುದಕ್ಕೆ ಸಂಗ್ರಹಿಸಲಾದ ಸುಮಾರು 1.91 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು, 55.49 ಲಕ್ಷ ರೂ. ನಗದು, 29.22 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 99 ಪ್ರಕರಣ ದಾಖಲಿಸಲಾಗಿದೆ. ಅದರ ಜತೆಗೆ ಕಳೆದ ಮೂರು ದಿನಗಳ ಹಿಂದಷ್ಟೇ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3.66 ಕೋಟಿ ರೂ. ಮೊತ್ತದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಫ್ಲೆಕ್ಸ್‌, ಬ್ಯಾನರ್‌ ಕುರಿತು 27 ಪ್ರಕರಣ : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾದ ಸುಮಾರು 8 ಸಾವಿರ ಸ್ಥಳದಲ್ಲಿನ ಫ್ಲೆಕ್ಸ್‌-ಬ್ಯಾನರ್‌ ಗಳನ್ನು ತೆರವುಗೊಳಿಸಲಾಗಿದೆ. ಶೇ.95ರಷ್ಟು ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸಲಾಗಿದೆ. ಈ ಸಂಬಂಧ 27 ಪ್ರಕರಣ ದಾಖಲಿಸಲಾಗಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಆರ್‌ಒ- ಎಆರ್‌ಹೊಣೆ: ಅಕ್ರಮಗಳು ನಡೆಯುವುದು ಕಂಡು ಬಂದರೆ ಚುನಾವಣೆ ಅಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯನ್ನು ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

42 ಸಾವಿರ ಸಿಬ್ಬಂದಿ ಅಗತ್ಯ : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆ ಪ್ರಕ್ರಿಯೆಗೆ ಒಟ್ಟು 42 ಸಾವಿರ ಅಧಿಕಾರಿ, ಸಿಬ್ಬಂದಿಯ ಅಗತ್ಯವಿದೆ. ಆ ಪೈಕಿ 37ರಿಂದ 38 ಸಾವಿರ ಸಿಬ್ಬಂದಿ 8,615 ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದವರನ್ನು ಮೀಸಲು ಸಿಬ್ಬಂದಿಯಾಗಿ ಬಳಕೆ ಮಾಡಲಾಗುವುದು. ಈಗಾಗಲೇ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಬ್ಯಾಂಕ್‌ ಸೇರಿ ವಿವಿಧ ಇಲಾಖೆಗಳಿಂದ 62 ಸಾವಿರ ಅಧಿಕಾರಿ ಸಿಬ್ಬಂದಿಯ ಮಾಹಿತಿ ಪಡೆಯಲಾಗಿದೆ ಎಂದು ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್‌ ಕುಮಾರ್‌ ಘೋಷ್‌ ತಿಳಿಸಿದರು.

ಈಗಾಗಲೇ ಅಗತ್ಯವಿರುವ ವಿವಿ ಪ್ಯಾಟ್‌, ಕಂಟ್ರೋಲ್‌ ಯುನಿಟ್‌ ಹಾಗೂ ಬ್ಯಾಲೆಟ್‌ ಯುನಿಟ್‌ಗಳನ್ನು ಸಂಗ್ರಹಿಸಲಾಗಿದೆ. ಹೆಚ್ಚುವರಿಯಾಗಿ ಶೇ. 20ರಿಂದ 35ರಷ್ಟು ಯಂತ್ರಗಳನ್ನು ಕಾಯ್ದಿರಿಸಲಾಗಿದೆ. ಈಗಾಗಲೇ ಮತದಾರರಿಗೆ ಜಾಗೃತಿ ಮೂಡಲಾಗುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಶೇ. 5ರಷ್ಟು ಯಂತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿವಿಧ ಹಂತದಲ್ಲಿ ಚೆಕ್‌ಪೋಸ್ಟ್‌ : ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ರಾಜ್ಯ ಪ್ರವೇಶಿಸುವ 8 ಸ್ಥಳಗಳಲ್ಲಿ ಅಂತಾರಾಜ್ಯ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರ ಜಿಲ್ಲೆ ಸಂಪರ್ಕಿಸುವ ಸ್ಥಳಗಳಲ್ಲಿ 11 ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಜತೆಗೆ ನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ನಡುವೆ ಸಂಪರ್ಕಿಸುವ ಸ್ಥಳದಲ್ಲಿ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಪೊಲೀಸರು ಮತ್ತು ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿ ಮತ್ತು ವಾಹನಗಳನ್ನು ಪರಿಶೀಲಿಸಲಿದ್ದಾರೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

99 ಪ್ರಕರಣ ದಾಖಲು : ನೀತಿ ಸಂಹಿತೆ ಜಾರಿಗೂ ಮುನ್ನ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಿಕೆ ಮಾಡುವುದಕ್ಕೆ ಸಂಗ್ರಹಿಸಲಾದ ಸುಮಾರು 1.91 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು, 55.49 ಲಕ್ಷ ರೂ. ನಗದು, 29.22 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 99 ಪ್ರಕರಣ ದಾಖಲಿಸಲಾಗಿದೆ. ಅದರ ಜತೆಗೆ ಕಳೆದ ಮೂರು ದಿನಗಳ ಹಿಂದಷ್ಟೇ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3.66 ಕೋಟಿ ರೂ. ಮೊತ್ತದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

Tollywood: 16 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಪ್ರಭಾಸ್‌ – ನಯನತಾರಾ ನಟನೆ; ಯಾವ ಸಿನಿಮಾ?

Tollywood: 16 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಪ್ರಭಾಸ್‌ – ನಯನತಾರಾ ನಟನೆ; ಯಾವ ಸಿನಿಮಾ?

 NIAಯಿಂದ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್ ಆಸ್ತಿ ಜಪ್ತಿ

 NIAಯಿಂದ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್ ಆಸ್ತಿ ಜಪ್ತಿ

arrested

Manipur ; ಭಾರತದ ವಿರುದ್ಧ ಸಂಚು ರೂಪಿಸಿದ್ದ ಉಗ್ರನ ಬಂಧನ

Kota Srinivas Poojary: ರಾಜಕಾರಣದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ: ಕೋಟ

Kota Srinivas Poojary: ರಾಜಕಾರಣದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ: ಕೋಟ

congress

Karnataka Congress ; ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು 28 ವೀಕ್ಷಕರ ನೇಮಕ

vidhana-soudha

Cauvery ಜಲ ವಿವಾದ ; ಸೆ. 26 ರಂದು ಬೆಂಗಳೂರು ನಗರ ಬಂದ್ ಗೆ ಕರೆ

1wwewqe

Fraud Case ; ಚೈತ್ರಾ ಸೇರಿ 7 ಮಂದಿಗೆ ಅ. 6ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBMP Marshals: ವಾರ್ಡ್‌ ಮಾರ್ಷಲ್‌ ಇದ್ರೂ ಪ್ಲಾಸ್ಟಿಕ್‌ಗಿಲ್ಲ ತಡೆ

BBMP Marshals: ವಾರ್ಡ್‌ ಮಾರ್ಷಲ್‌ ಇದ್ರೂ ಪ್ಲಾಸ್ಟಿಕ್‌ಗಿಲ್ಲ ತಡೆ

tdy-5

Crime News: ಬೈಕ್‌ನಲ್ಲಿ ಬಂದು ಯುವಕನ ಹತ್ಯೆಗೈದ ದುಷ್ಕರ್ಮಿಗಳು

Road Mishap: ಬಿಎಂಡಬ್ಲ್ಯೂ ಬೈಕಲ್ಲಿ ಬರ್ತ್‌ಡೇ ಜಾಲಿ: 2 ಸಾವು

Road Mishap: ಬಿಎಂಡಬ್ಲ್ಯೂ ಬೈಕಲ್ಲಿ ಬರ್ತ್‌ಡೇ ಜಾಲಿ: 2 ಸಾವು

tdy-3

Tragic: 13ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ

2-bangalore

BMW ಬೈಕಲ್ಲಿ ಬರ್ತ್‌ಡೇ ಜಾಲಿ: 2 ಸಾವು

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

Tollywood: 16 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಪ್ರಭಾಸ್‌ – ನಯನತಾರಾ ನಟನೆ; ಯಾವ ಸಿನಿಮಾ?

Tollywood: 16 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಪ್ರಭಾಸ್‌ – ನಯನತಾರಾ ನಟನೆ; ಯಾವ ಸಿನಿಮಾ?

 NIAಯಿಂದ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್ ಆಸ್ತಿ ಜಪ್ತಿ

 NIAಯಿಂದ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್ ಆಸ್ತಿ ಜಪ್ತಿ

arrested

Manipur ; ಭಾರತದ ವಿರುದ್ಧ ಸಂಚು ರೂಪಿಸಿದ್ದ ಉಗ್ರನ ಬಂಧನ

Kota Srinivas Poojary: ರಾಜಕಾರಣದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ: ಕೋಟ

Kota Srinivas Poojary: ರಾಜಕಾರಣದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ: ಕೋಟ

congress

Karnataka Congress ; ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು 28 ವೀಕ್ಷಕರ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.