
ಮತ್ತು ಬರುವ ಜ್ಯೂಸ್ ಕುಡಿಸಿ ಅತ್ಯಾಚಾರ
Team Udayavani, Jun 9, 2023, 1:30 PM IST

ಬೆಂಗಳೂರು: ಮೊಬೈಲ್ ವಾಪಸ್ ಕೊಡುವುದಾಗಿ ಪ್ರೇಯಸಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಆಕೆ ಮೇಲೆ ಪ್ರಿಯಕರನೇ ಅತ್ಯಾಚಾರ ಎಸಗಿರುವ ಘಟನೆ ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ತುಮಕೂರಿನ ಕೊರಟಗೆರೆ ಮೂಲದ ಪುರುಷೋತ್ತಮ್ (22) ಮತ್ತು ಗಿರಿನಗರ ಸಮೀಪದ ಈರಣ್ಣಗುಡ್ಡೆಯ ನಿವಾಸಿ ಚೇತನ್(22) ಬಂಧಿತರು.
ತುಮಕೂರಿನ ಕೊರಟಗೆರೆ ಮೂಲದ 19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಿಯಕರ ಪುರುಷೋತ್ತಮ್ ಮತ್ತು ಈತನ ಸ್ನೇಹಿತ ಚೇತನ್ ಎಂಬುವರನ್ನು ಬಂಧಿಸಲಾಗಿದೆ.
ಆರೋಪಿ ಪುರುಷೋತ್ತಮ್ ರ್ಯಾಪಿಡೋ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಚೇತನ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಗಿರಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಆರೋಪಿ ಪುರುಷೋತ್ತಮ್ ತುಮಕೂರಿನ ಕಾಲೇಜುವೊಂದರಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಬೆಂಗಳೂರಿಗೆ ಕರೆಸಿಕೊಂಡು ಕೃತ್ಯ: ಕೆಲ ದಿನಗಳ ಹಿಂದೆ ತುಮಕೂರಿಗೆ ಹೋಗಿದ್ದ ಪುರುಷೋತ್ತಮ್ ಸಂತ್ರಸ್ತೆಯನ್ನು ಭೇಟಿಯಾಗಿ, ಬೆಂಗಳೂರಿಗೆ ಬರುವಾಗ ಆಕೆಯ ಮೊಬೈಲ್ ಪಡೆದುಕೊಂಡು ಬಂದಿದ್ದ. ನಂತರ ಮೊಬೈಲ್ ವಾಪಸ್ ಕೊಡುವಂತೆ ಸಂತ್ರಸ್ತೆ ಕೇಳಿದ್ದಳು. ಬೆಂಗಳೂರಿಗೆ ಬಂದರೆ ಮೊಬೈಲ್ ಹಿಂತಿರುಗಿಸುವುದಾಗಿ ಪುರುಷೋತ್ತಮ್ ಹೇಳಿದ್ದ. ಹೀಗಾಗಿ ಜೂನ್ 7 ರಂದು ನಗರಕ್ಕೆ ಬಂದಿದ್ದಳು. ರಾತ್ರಿ 8.30 ಸಮಯದಲ್ಲಿ ಮೆಜೆಸ್ಟಿಕ್‌ಗೆ ಬಂದಿದ್ದ ಆಕೆಯನ್ನು ನೇರ ಈರಣ್ಣ ಗುಡ್ಡೆಯಲ್ಲಿರುವ ಸ್ನೇಹಿತ ಚೇತನ್ ಮನೆಗೆ ರಾತ್ರಿ 10 ಗಂಟೆಗೆ ಕರೆದುಕೊಂಡು ಹೋಗಿದ್ದ. ಸಂತ್ರಸ್ತೆ ನನ್ನ ಮೊಬೈಲ್ ಕೊಡು ಊರಿಗೆ ಹೋಗುತ್ತೇನೆ ಎಂದು ಹೇಳಿದ್ದಾಗ, ಇಂದು ತನ್ನೊಂದಿಗೆ ಉಳಿದುಕೊಳ್ಳುವಂತೆ ಆರೋಪಿ ಒತ್ತಾಯಿಸಿದ್ದಾನೆ. ಆದರೆ, ಸಂತ್ರಸ್ತೆ ಅದಕ್ಕೆ ನಿರಾಕರಿಸಿದ್ದರು. ಹೀಗಾಗಿ ಆಕೆಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿದ್ದ. ಸಂತ್ರಸ್ತೆ ನಿದ್ರಾಹೀನ ಸ್ಥಿತಿಗೆ ತಲುಪಿದ ಕೂಡಲೇ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆ ನಂತರ ಆತನ ಸ್ನೇಹಿತ ಚೇತನ್ ಕೂಡ ಆಕೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಎಚ್ಚರಗೊಂಡ ಆಕೆ, ಚೇತನ್ ನನ್ನು ತಳ್ಳಿ ಹೊರಗಡೆ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?

Katapadi: ಕೊರಗಜ್ಜನಿಗೆ ಲಾರಿ, ಟೆಂಪೋ ಮಾಲಕರ ಮೊರೆ

World Cup; ಲೆಗ್ ಸ್ಪಿನ್ನರ್ ಚಾಹಲ್ ಕಡೆಗಣಿಸಿರುವುದು ತಪ್ಪು : ಯುವರಾಜ್ ಸಿಂಗ್

Mangaluru ಪ್ರತಿ ಟನ್ ಗೆ 150 ರೂ. ಬಾಡಿಗೆ ಏರಿಕೆ ಭರವಸೆ: ಮುಷ್ಕರ ಹಿಂತೆಗೆದ ಲಾರಿ ಯೂನಿಯನ್

ICC World Cup 2023; ಎಲ್ಲಾ ಹತ್ತು ತಂಡಗಳ ಆಟಗಾರರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ