ಕಮಿಷನ್ ಆಸೆಗೆ ಬ್ಯಾಂಕನ್ನೇ ದೋಚಿದ ವ್ಯವಸ್ಥಾಪಕಿ ಸೆರೆ
Team Udayavani, Jan 30, 2023, 1:24 PM IST
ಬೆಂಗಳೂರು: ವಿಮಾ ಬಾಂಡ್ ಮಾಡಲು ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆಮಾಡಿ ವಂಚಿಸಿದ ಖಾಸಗಿ ಬ್ಯಾಂಕೊಂದರ ರಿಲೇಶನ್‌ಶಿಪ್ ಮ್ಯಾನೇಜರ್‌ನನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಣಸೆಮಾರೇನಹಳ್ಳಿ ನಿವಾಸಿ ಸಜೀಲಾ ಗುರುಮೂರ್ತಿ(34) ಬಂಧಿತೆ. ಈಕೆಯಿಂದಶಾಖೆಯ ಒಂದು ಕಂಪ್ಯೂಟರ್, 23 ಲಕ್ಷರೂ. ಮೌಲ್ಯದ ವಿಮಾ ಬಾಂಡ್ ವಶಕ್ಕೆಪಡೆಯಲಾಗಿದೆ. ಈಕೆ, ನಗರದ ಖಾಸಗಿಬ್ಯಾಂಕ್‌ನಲ್ಲಿ ರಿಲೇಶಿಪ್ ಮ್ಯಾನೇಜರ್‌ಆಗಿದ್ದು, ಗ್ರಾಹಕರಿಗೆ ಮಾಹಿತಿ ನೀಡದೆ 4.92ಲಕ್ಷ ರೂ. ಅನ್ನು ಬೇರೆ ಗ್ರಾಹಕರ ಖಾತೆಗಳಿಗೆ ವರ್ಗಾವಣೆ ಮಾಡಿ, ಬಳಿಕ ವಿಮಾ ಬಾಂಡ್ ಮಾಡಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಮಿಷನ್ ರೋಡ್‌ನಲ್ಲಿರುವ ಬ್ಯಾಂಕ್ ಮ್ಯಾನೇಜರ್ ಎಸ್.ಎನ್.ಸಂಗಮೇಶ್ವರ್ ದೂರಿನ ಮೇರೆಗೆಆರೋಪಿತೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಈ ಖಾಸಗಿ ಬ್ಯಾಂಕ್‌ಅನ್ನು ಎಲ್‌ಐಸಿ ಜತೆ ವಿಲೀನ ಮಾಡಲಾಗಿದ್ದು, ಹೀಗಾಗಿ ಬ್ಯಾಂಕ್‌ನ ರಿಲೇಶನ್‌ಶಿಪ್ ಮ್ಯಾನೇಜರ್‌ಗೆ ಮಾಸಿಕ ಇಂತಿಷ್ಟು ವಿಮಾ ಮಾಡಿಸಲುಟಾರ್ಗೆಟ್ ಕೊಡಲಾಗಿತ್ತು. ಹೀಗಾಗಿ ಸಜೀಲಾ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡುವ ಗ್ರಾಹಕರಖಾತೆಗಳನ್ನು ಟಾರ್ಗೆಟ್ ಮಾಡಿಕೊಂಡು ಆಯ್ಕೆಮಾಡಿಕೊಳ್ಳುತ್ತಿದ್ದಳು. ಬಳಿಕ ನಿರ್ದಿಷ್ಟ ಗ್ರಾಹಕನಖಾತೆಯಲ್ಲಿರುವ ಹಣವನ್ನು ಬೇರೆ ಖಾತೆಗೆ ವರ್ಗಾವಣೆಮಾಡಿಕೊಂಡು ವಿಮಾ ಬಾಂಡ್ ಮಾಡಿಸುತ್ತಿದ್ದಳು. ಬಳಿಕ ಈ ವಿಮಾ ಬಾಂಡ್‌ಗಳನ್ನು ಅಡಮಾನ ಇಟ್ಟು ನಿಶ್ಚಿತ ಠೇವಣಿ ಖಾತೆಗೆವರ್ಗಾವಣೆ ಮಾಡುತ್ತಿದ್ದಳು. ಅದು ಸರಿದೂಗದಿದ್ದಾಗ ಇನ್ನಷ್ಟು ಖಾತೆಗಳ ಹಣವರ್ಗಾವಣೆ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದರು.
ಒಂದೇ ದಿನ 4.92 ಕೋಟಿ ವರ್ಗಾವಣೆ: ತಮಿಳುನಾಡು ಮೂಲದ ಸಜೀಲಾ ಗುರುಮೂರ್ತಿ,ಮಿಷನ್ ರೋಡ್ ಶಾಖೆಯಲ್ಲಿ 2022ರ ಜೂ. 13ರಿಂದಡಿ. 31ರ ಅವಧಿಯಲ್ಲಿ ಈ ವೇಳೆಯಲ್ಲಿ ಬ್ಯಾಂಕ್‌ನಪ್ರತಿಷ್ಠಿತ ಗ್ರಾಹಕರ ಖಾತೆಗಳಿಂದ ಅವರ ಗಮನಕ್ಕೆ ಬಾರದೆ, ಖಾತೆಯಿಂದ ಹಣ ತೆಗೆದು ಎಲ್‌ಐಸಿ ಬಾಂಡ್ ಗಳಲ್ಲಿ ತೊಡಗಿಸಿ ಒಟ್ಟು 1,44 ಕೋಟಿ ರೂ. ಅನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು. ಈ ಹಿಂದೆ ಗಾಂಧಿನಗರದಲ್ಲಿರುವ ಶಾಖೆಯಲ್ಲಿ ಕೆಲಸ ಮಾಡುವಾಗಲೂ ಇದೇ ರೀತಿ ಎಲ್‌ಐಸಿ ಬಾಂಡ್‌ಗಳನ್ನು ಮಾಡಿಸಲು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರು. ಅದನ್ನು ಸರಿದೂಗಿಸಲು ಡಿ.23ರಂದುಒಂದೇ ದಿನ 4,92,50 ರೂ. ಅನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಗ್ರಾಹಕರು ಮತ್ತು ಬ್ಯಾಂಕ್‌ಗೆ ವಂಚಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಇತ್ತೀಚೆಗೆ ಶಾಖೆಯಮ್ಯಾನೇಜರ್ ಸಂಗಮೇಶ್ವರ ಬ್ಯಾಂಕ್ ಖಾತೆಗಳ ಪರಿಶೀಲನೆ ವೇಳೆ ಈ ವಿಚಾರ ಗೊತ್ತಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಲಸೂರು ಗೇಟ್ ಎಸಿಪಿ ವಿ.ನಾರಾಯಣಸ್ವಾಮಿನೇತೃತ್ವದಲ್ಲಿ ಸಂಪಂಗಿರಾಮ ನಗರ ಠಾಣಾಧಿಕಾರಿಎಂ.ಎ.ಹರೀಶ್ ಕುಮಾರ್ ಮತ್ತು ಪಿಎಸ್‌ಐ ಶಿವಕುಮಾರ್ ತಂಡ ಕಾರ್ಯಾಚರಣೆ ನಡೆಸಿದೆ.
ಟಾರ್ಗೆಟ್, ಕಮಿಷನ್ ಆಸೆಗಾಗಿ ಕೃತ್ಯ : ಸಜೀಲಾ ಗುರುಮೂರ್ತಿಗೆ ವಿಮಾ ಮಾಡಿಸಲುಇಂತಿಷ್ಟು ಟಾರ್ಗೆಟ್ ಕೊಡಲಾಗಿತ್ತು. ಆದರೆ,ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ.ಹೀಗಾಗಿ ಈ ಮಾರ್ಗಕಂಡುಕೊಂಡಿದ್ದರು. ಅದರಿಂದ ತನಗೆ ಸಿಗುವ ಕಮಿಷನ್ ಪಡೆದುಕೊಳ್ಳುತ್ತಿದ್ದರು. ಜತೆಗೆ ಬ್ಯಾಂಕ್‌ಗೂ ಲಾಭ ಕೊಡಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಪ್ರಿಲ್ ಮೊದಲ ವಾರ ಬಿಜೆಪಿ ಪಟ್ಟಿ: ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್ ಪಟ್ಟಿ
ಅಂತಿಮವಾಗದ ಸಿದ್ದರಾಮಯ್ಯ ಕ್ಷೇತ್ರ: ಇಂದು ಬಾದಾಮಿಯಲ್ಲಿ 2. ಕಿ. ಮೀ. ರೋಡ್ ಶೋ
ರಾಜಧಾನಿಯಲ್ಲಿ ಇಂದು ಶಾ, ನಾಳೆ ಪ್ರಧಾನಿ ಮೋದಿ
ಪಂಚಮಸಾಲಿಗೆ ಸಿಗುವುದೇ ಮೀಸಲಾತಿ? ಇಂದು ಬೊಮ್ಮಾಯಿ ಸರಕಾರದ ಕೊನೇ ಸಂಪುಟ ಸಭೆ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ