

Team Udayavani, May 26, 2024, 12:44 PM IST
ಬೆಂಗಳೂರು: ತುಮಕೂರಿನ ನ್ಯೂ ಎಕ್ಸ್‌ಟೆನ್ಶನ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣ ಸಂಬಂಧ ಯೂನೊಕಾಯಿನ್ ಟೆಕ್ನಾಲ ಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್ (ಸದ್ಯದ ಮಾರುಕಟ್ಟೆ ಮೌಲ್ಯ 34.82 ಕೋಟಿ ಮೌಲ್ಯ) ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿ ರಾಬಿನ್ ಖಂಡೇನ್ ವಾಲನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ರಾಬಿನ್ ಖಂಡೇನ್ ವಾಲ, ಕರೆನ್ಸಿ ವಿನಿಮಯ ಕೆಲಸ ಮಾಡುತ್ತಿದ್ದ. ಅಲ್ಲದೆ, ಆನ್‌ಲೈನ್ ಸರ್ವೀಸ್ ಹೆಸರಿನಲ್ಲಿ ಕಂಪನಿ ಸಹ ನಡೆಸುತ್ತಿದ್ದ. ಪ್ರಕರಣದ ಪ್ರಮುಖ ಆರೋಪಿ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (29) ಕಡೆಯಿಂದ ಬಿಟ್ ಕಾಯಿನ್‌ಗಳನ್ನು ಪಡೆದುಕೊಂಡು, ರೂಪಾಯಿಗೆ ವಿನಿಮಯ ಮಾಡಿ ಕೊಟ್ಟಿದ್ದ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
2017ರಲ್ಲಿ ತುಮಕೂರಿನಲ್ಲಿರುವ ಯೂನೊಕಾ ಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕಂಪನಿ ನಿರ್ದೇಶಕ ಬಿ.ವಿ.ಹರೀಶ್ ತುಮಕೂರಿನ ನ್ಯೂ ಎಕ್ಸ್‌ಟೆನ್ಶನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡು ತಾಂತ್ರಿಕ ಪುರಾವೆಗಳನ್ನು ಆಧರಿಸಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ವೇಳೆ ರಾಬಿನ್ ಖಂಡೇನ್‌ವಾಲ ಹೆಸರು ಆರೋಪಿ ಬಾಯಿಬಿಟ್ಟಿದ್ದ. ಹೀಗಾಗಿ ಶ್ರೀಕಿ ಮತ್ತು ರಾಬಿನ್ ಖಂಡೇನ್‌ವಾಲ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ ಕಾಯ್ದೆ) ಅಡಿ ಹೆಚ್ಚುವರಿ ಸೆಕ್ಷನ್ ಅಳವಡಿಸಿಕೊಂಡು ತನಿಖೆ ಮುಂದುವರಿಸಲಾಗಿತ್ತು. ಇದೀಗ ರಾಜಸ್ತಾನದಲ್ಲಿ ತಲೆಮರೆಸಿಕೊಂಡಿದ್ದ ರಾಬಿನ್ ಖಂಡೇನ್‌ವಾಲನನ್ನು ಬಂಧಿಸಲಾಗಿದೆ ಎಂದುಸಿಐಡಿ ಮೂಲಗಳು ತಿಳಿಸಿವೆ.
Ad
ಮುಂಬಯಿ ಜೈಲಿನಲ್ಲಿ ಗುಂಪಿನ ನಡುವೆ ಘರ್ಷಣೆ: ಗ್ಯಾಂಗ್‌ಸ್ಟಾರ್ ಸುರೇಶ್ ಪೂಜಾರಿ ಮೇಲೆ ಹಲ್ಲೆ
Koratagere: ಕೈಕೊಟ್ಟ ಮಳೆರಾಯ; ಬಿತ್ತನೆ ಕಾರ್ಯ ಮುಗಿಸದ ರೈತ; ತಾಲೂಕಿನಲ್ಲಿ ಬರದ ಛಾಯೆ
Mudigere: ಕಾಡು ಹಂದಿ ದಾಳಿಗೆ ರೈತನ ಕೈ ಬೆರಳು ತುಂಡು, ಅಧಿಕಾರಿಗಳ ನಿರ್ಲಕ್ಷ್ಯ
Childhood: ಬೇಸಗೆಯ ಸುವರ್ಣ ಬಾಲ್ಯ; ಗೋಲಿ, ಮಂಡಕ್ಕಿ ಮತ್ತು ಅಪ್ಪನ ಏಟು!
Harapanahalli: ಅಡವಿ ಮಲ್ಲಾಪುರದಲ್ಲಿ ಸೌಲಭ್ಯಗಳ ಕೊರತೆ
You seem to have an Ad Blocker on.
To continue reading, please turn it off or whitelist Udayavani.