ಬಿಎಂಟಿಸಿ ಸ್ಮಾರ್ಟ್‌ಕಾರ್ಡ್‌ಗೆ ಮತ್ತೆ ಹಿನ್ನಡೆ


Team Udayavani, Apr 10, 2019, 3:00 AM IST

bmtc-mart

ಬೆಂಗಳೂರು: ಹಲವು ತಾಂತ್ರಿಕ ಸಮಸ್ಯೆಗಳ ಮುಂದುವರಿದ ಹಿನ್ನೆಲೆಯಲ್ಲಿ ಸ್ಮಾರ್ಟ್‌ಕಾರ್ಡ್‌ಗಳನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಈ ವರ್ಷವೂ ಹಿನ್ನಡೆ ಆಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೂಡ ಎಂದಿನಂತೆ ವಿದ್ಯಾರ್ಥಿಗಳು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಾಗಿಲಿಗೇ ಹೋಗುವುದು ಅನಿವಾರ್ಯವಾಗಿದೆ.

ಸ್ಮಾರ್ಟ್‌ ಕಾರ್ಡ್‌ಗಳನ್ನು ನಗರದ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ತಲುಪಿಸಲು ಕಳೆದ ಬಾರಿ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಪೋಸ್ಟ್‌ಮನ್‌ ಮನೆಗೆ ಹೋದಾಗ, ಅಲ್ಲಿ ಯಾರೂ ಇರುತ್ತಿರಲಿಲ್ಲ. ಕೆಲವೊಮ್ಮೆ ವಿಳಾಸವೇ ತಪ್ಪಾಗಿರುತ್ತಿತ್ತು.

ಇನ್ನು ಹಲವು ಬಾರಿ ಅಂಚೆ ಕಚೇರಿಯಿಂದಲೇ ಸಕಾಲದಲ್ಲಿ ಡೆಲಿವರಿ ಆಗುತ್ತಿರಲಿಲ್ಲ. ಫ‌ಲಾನುಭವಿಯು ಸೆಲ್ಫಿà ಅಥವಾ ಫೆವರಿಟ್‌ ಸ್ಟಾರ್‌ ಜತೆ ತೆಗೆಸಿಕೊಂಡ ಫೋಟೋ ಕಳುಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೂಡ ಬಿಎಂಟಿಸಿ ಕೌಂಟರ್‌ಗಳಲ್ಲಿಯೇ ವಿದ್ಯಾರ್ಥಿಗಳ ಸ್ಮಾರ್ಟ್‌ಕಾರ್ಡ್‌ ವಿತರಿಸಲು ತಿರ್ಮಾನಿಸಲಾಗಿದೆ ಎಂದು ಮೂಲಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿವೆ.

ಅದರಂತೆ ಸ್ಥಳದಲ್ಲಿಯೇ ಫೋಟೋ ಕ್ಲಿಕ್ಕಿಸಿ ಸ್ಮಾರ್ಟ್‌ಕಾರ್ಡ್‌ ಸಿದ್ಧಪಡಿಸಿ ಕೊಡಲಾಗುವುದು. ಇದರಿಂದ ಪ್ರಸಕ್ತ ಸಾಲಿನಲ್ಲೂ ವಿದ್ಯಾರ್ಥಿ ಪಾಸು ವಿತರಣೆ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಮೇ 1ರಿಂದ ವಿತರಣೆ – ಎಂಡಿ: ಕಳೆದ ವರ್ಷದಿಂದ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ನೀಡುವ ರಿಯಾಯ್ತಿ ಪಾಸುಗಳ ಬದಲಿಗೆ ಸ್ಮಾರ್ಟ್‌ಕಾರ್ಡ್‌ ವ್ಯವಸ್ಥೆ ಜಾರಿಗೊಳಿಸಲಾಯಿತು. ಅಷ್ಟೇ ಅಲ್ಲ, ಸ್ಮಾರ್ಟ್‌ಕಾರ್ಡ್‌ ಹೊಂದುವುದು ಕಡ್ಡಾಯಗೊಳಿಸಲಾಯಿತು. ಶಾಲೆಗಳಿಂದ ಪ್ರಮಾಣೀಕರಿಸಿ, ಸ್ವತಃ ಬಿಎಂಟಿಸಿಯು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಇದನ್ನು ತಲುಪಿಸುವುದಾಗಿ ಹೇಳಿತು.

ಅದರಂತೆ 2018ರ ಶೈಕ್ಷಣಕ ವರ್ಷದಲ್ಲಿ ಮೂರೂವರೆ ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗಿದೆ (ನಿರಂತರ ಆರು ತಿಂಗಳು ವಿತರಣಾ ಪ್ರಕ್ರಿಯೆ ನಡೆಯಿತು!). ಇನ್ನೂ ಒಂದರಿಂದ ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಈ ಕಾರ್ಡ್‌ಗಳು ತಲುಪಿಲ್ಲ. ಹೊಸದಾಗಿ ಪಡೆಯುವವರ ಜತೆಗೆ ಈಗಾಗಲೇ ಕಾರ್ಡ್‌ ಹೊಂದಿದವರು ಈ ವರ್ಷ ನವೀಕರಿಸಬೇಕು.

ಮೇ 1ರಿಂದ ಈ ಪ್ರಕ್ರಿಯೆಗೆ ಬಿಎಂಟಿಸಿ ಚಾಲನೆ ನೀಡಲಿದ್ದು, ಇದಕ್ಕಾಗಿ 50ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ. ಪ್ರಸಾದ್‌ ತಿಳಿಸಿದರು.

ನವೀಕರಣಕ್ಕೆ 2-3 ನಿಮಿಷ ಬೇಕಾಗುತ್ತದೆ. ಹೊಸದಾಗಿ ವಿತರಿಸಲು 10 ನಿಮಿಷ ಸಮಯ ಹಿಡಿಯುತ್ತದೆ. ಸ್ಮಾರ್ಟ್‌ಕಾರ್ಡ್‌ ವಿತರಣೆ ಪ್ರಕ್ರಿಯೆ ತ್ವರಿತವಾಗಿ ನಡೆಯಲು “ಬೆಂಗಳೂರು ಒನ್‌’ ನೆರವು ಕೋರಲಾಯಿತು. ಪೂರಕ ಸ್ಪಂದನೆ ಸಿಗಲಿಲ್ಲ. ಈಗ ಅನಿವಾರ್ಯವಾಗಿ ಹೆಚ್ಚು ಕೌಂಟರ್‌ಗಳನ್ನು ತೆರೆದು ವಿತರಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಸ್ಮಾರ್ಟ್‌ಕಾರ್ಡ್‌ ಪಡೆಯುವುದು ಹೀಗೆ: ವಿದ್ಯಾರ್ಥಿಗಳು ಮೊದಲು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಅದನ್ನು ಭರ್ತಿ ಮಾಡಿ, ಆನ್‌ಲೈನ್‌ನಲ್ಲೇ ಸಲ್ಲಿಸಬೇಕು. ಆಗ ವಿದ್ಯಾರ್ಥಿಗೆ ಅರ್ಜಿ ನಂಬರ್‌ ಸಹಿತ ಸ್ವೀಕೃತಿ ಬಗ್ಗೆ ಸಂದೇಶ ಬರುತ್ತದೆ. ತದನಂತರ ಆ ಅರ್ಜಿಯನ್ನು ಬಿಎಂಟಿಸಿಯು ಸಂಬಂಧಿಸಿದ ಶಾಲೆ ಅಥವಾ ಕಾಲೇಜಿಗೆ ಕಳುಹಿಸುತ್ತದೆ.

ಅಲ್ಲಿಂದ ಅನುಮೋದನೆಗೊಂಡು ಬಂದ ಮೇಲೆ ವಿದ್ಯಾರ್ಥಿಗೆ ಅಪ್‌ಡೇಟ್‌ ಮಾಡಲಾಗುವುದು. ವಿದ್ಯಾರ್ಥಿಯು ಬಿಎಂಟಿಸಿಯ ಹತ್ತಿರದ ಕೌಂಟರ್‌ಗೆ ಬಂದು ಸ್ಥಳದಲ್ಲೇ ಫೋಟೋ ತೆಗೆಸಿಕೊಂಡು ಸ್ಮಾರ್ಟ್‌ಕಾರ್ಡ್‌ ಪಡೆಯಬಹುದು. ನವೀಕರಣ ಕೂಡ ನೇರವಾಗಿ ಕೌಂಟರ್‌ನಲ್ಲಿಯೇ ಅಪ್‌ಡೇಟ್‌ ಮಾಡಿಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸ್ಮಾರ್ಟ್‌ಕಾರ್ಡ್‌ಗೂ ಟ್ರೈಮ್ಯಾಕ್ಸ್‌ ಬಿಸಿ!: ಈ ಮಧ್ಯೆ ಸಂಸ್ಥೆಯ “ಚತುರ ಸಾರಿಗೆ ವ್ಯವಸ್ಥೆ’ (ಐಟಿಎಸ್‌) ಸೇವಾ ನಿರ್ವಹಣೆಯನ್ನು ಗುತ್ತಿಗೆ ಪಡೆದ ಟ್ರೈಮ್ಯಾಕ್ಸ್‌ ಕಂಪೆನಿ ಆರ್ಥಿಕ ದಿವಾಳಿಯಾಗಿದ್ದು, ಈಗಿರುವ ಐಟಿ ವ್ಯವಸ್ಥೆಯನ್ನು ಅಪ್‌ಗೈಡ್‌ ಮಾಡುವ ಕಾರ್ಯಕ್ಕೂ ಹಿನ್ನಡೆ ಆಗಿದೆ. ಅಷ್ಟೇ ಅಲ್ಲ, ಸ್ಮಾರ್ಟ್‌ಕಾರ್ಡ್‌ಗಳನ್ನು ಊರ್ಜಿತಗೊಳಿಸಬೇಕಾದ ಇಟಿಎಂಗಳ ಕೊರತೆ ಇದೆ. ನಿಧಾನವಾಗಿ ಇಟಿಎಂಗಳನ್ನು ಆ್ಯಂಡ್ರಾಯ್ಡಗೆ ಪರಿವರ್ತಿಸುವ ಕೆಲಸ ನಡೆದಿದೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.