

Team Udayavani, Apr 17, 2017, 11:48 AM IST
ಬೆಂಗಳೂರು: ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಗರಾಜ್ ಅಲಿಯಾಸ್ ಬಾಂಬ್ ನಾಗ ತಮಿಳುನಾಡಿನ ‘ಶಿಪ್‌ಯಾರ್ಡ್’ವೊಂದರಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಎ. 14ರಂದು ಪೊಲೀಸರ ದಾಳಿಯ ಮುನ್ಸೂಚನೆ ಪಡೆದಿದ್ದ ಆರೋಪಿ ನಾಗರಾಜ್ ಒಂದು ದಿನ ಮೊದಲೇ ತಮಿಳುನಾಡಿನ ಧರ್ಮಪುರಿಗೆ ಓಡಿ ಹೋಗಿದ್ದಾನೆ. ಬಳಿಕ ತನ್ನ ಸಂಬಂಧಿಕರು ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಕಪ್ಪು ಹಣ ದಂಧೆ ನಡೆಸುತ್ತಿರುವ ಕೆಲವು ಉದ್ಯಮಿಗಳ ಸಹಾಯ ಪಡೆದು ತನ್ನ ಮಕ್ಕಳೊಂದಿಗೆ ಶಿಪ್‌ಯಾರ್ಡ್‌ನಲ್ಲಿ ರಹಸ್ಯವಾಗಿ ನೆಲೆಸಿದ್ದಾನೆ. ಈ ನಡುವೆ ಪೊಲೀಸರು ಬಂಧಿಸುವ ಮೊದಲೇ ನಿರೀಕ್ಷಣಾ ಜಾಮೀನು ಪಡೆಯಲು ವಕೀಲರನ್ನು ಸಂಪರ್ಕಿಸಿದ್ದಾನೆ ಎನ್ನಲಾಗಿದೆ.
ಮತ್ತೂಂದೆಡೆ ನಾಗರಾಜ್‌ಗಾಗಿ ಹುಡುಕಾಟ ಆರಂಭಿಸಿರುವ ಪೊಲೀಸರ ತಂಡ ಖಚಿತ ಮಾಹಿತಿ ಮೇರೆಗೆ ತಮಿಳುನಾಡಿನ ರಾಣಿಪೇಟ್‌ಗೆ ತೆರಳಿದೆ. ಆದರೆ, ಶನಿವಾರದವರೆಗೆ ಆರೋಪಿಗಳ ಲೋಕೇಶನ್ ರಾಣಿಪೇಟ್‌ನಲ್ಲಿ ಪತ್ತೆಯಾಗುತ್ತಿತ್ತು. ರವಿವಾರ ಬೇರೆಡೆಯೇ ತೋರಿಸುತ್ತಿದೆ. ಹೀಗೆ ನಿತ್ಯ ತನ್ನ ಸ್ಥಳವನ್ನು ಆರೋಪಿ ಬದಲಾಯಿಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಶಿಪ್‌ಯಾರ್ಡ್’ನಲ್ಲೇ ವ್ಯವಹಾರ
ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯವನಾದ ನಾಗರಾಜ್ ಸ್ಥಳೀಯ ಕೆಲವು ಉದ್ಯಮಿಗಳ ಸಂಪರ್ಕ ಬೆಳೆಸಿಕೊಂಡಿದ್ದ. ಹಾಗೆಯೇ ಕೆಲವು ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಕೋರರ ಜತೆಯೂ ವ್ಯವಹಾರ ನಡೆಸುತ್ತಿದ್ದ. ಹಾಗಾಗಿ ಡಿಸೆಂಬರ್‌ನಿಂದಲೇ ಈತ ಅಮಾನ್ಯಗೊಂಡ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ರಾಜಕೀಯ ಮುಖಂಡರು, ಉದ್ಯಮಿಗಳ ಕಪ್ಪು ಹಣವನ್ನು ಶೇ. 25ರಷ್ಟು ಕಮಿಷನ್ ಆಧಾರದ ಮೇಲೆ ಬದಲಾವಣೆ ಮಾಡಿಕೊಡುತ್ತಿದ್ದ. ನೋಟುಗಳ ಬದಲಾವಣೆಗೆ ಬಂದ ಉದ್ಯಮಿಗಳಿಗೆ ಬೆದರಿಸಿ ಸಂಗ್ರಹಿಸಿಟ್ಟಿದ್ದ ಕೋಟ್ಯಂತರ ರೂ. ಹಳೆ ನೋಟುಗಳನ್ನು ತಮಿಳುನಾಡಿನ ಶಿಪ್‌ಯಾರ್ಡ್‌ಗಳಿಗೆ ಕೊಂಡೊಯ್ದು ಅಂತಾರಾಜ್ಯ ದಂಧೆಕೋರರ ಮೂಲಕ ಶೇ. 30ರಷ್ಟು ಕಮಿಷನ್‌ಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದ. ಇದಕ್ಕಾಗಿಯೇ ತಮಿಳುನಾಡು ಹಾಗೂ ರಾಜ್ಯದ ಬಹಳಷ್ಟು ಜನ ಅನಿವಾಸಿ ಭಾರತೀಯರನ್ನು ಸಂಪರ್ಕಿಸಿ ಅವರಿಗೂ ಶೇಕಡಾ ಪ್ರಮಾಣದಲ್ಲಿ ಕಮಿಷನ್ ಕೊಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ವಕೀಲರ ಸಂಪರ್ಕ
ಪೊಲೀಸರ ಬಂಧನಕ್ಕೂ ಮೊದಲೇ ನಿರೀಕ್ಷಣಾ ಜಾಮೀನು ಪಡೆಯಲು ತನ್ನ ಸಂಬಂಧಿಕರ ಮೂಲಕ ವಕೀಲರನ್ನು ಸಂಪರ್ಕಿಸಿದ್ದಾನೆ ಎನ್ನಲಾಗಿದೆ. ಆದರೆ, ಈಗಾಗಲೇ ಆರೋಪಿ ನಾಗನ ಪ್ರತಿ ಚಲನವಲನಗಳ ಬಗ್ಗೆ ನಿಗಾವಹಿಸಿರುವ ಪೊಲೀಸರು ಸದ್ಯದಲ್ಲೇ ಆತನನ್ನು ಬಂಧಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಸಂಪರ್ಕ?
ನಾಗರಾಜ್‌ನ ಪತ್ತೆಗಾಗಿ ತೀವ್ರ ಹುಡುಕಾಟ ಆರಂಭಿಸಿರುವ ಪೊಲೀಸರ ಕಾರ್ಯಾಚರಣೆ ಕಂಡು ಆತಂಕ್ಕೊಳಗಾಗಿರುವ ನಾಗ ನಿರಂತರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕದಲ್ಲಿದ್ದಾನೆ. ಮೂಲಗಳ ಪ್ರಕಾರ ಎ. 20ರಂದು ನಗರಕ್ಕೆ ಬಂದು ತಾನೇ ಪೊಲೀಸರಿಗೆ ಶರಣಾಗುತ್ತೇನೆಂದು ಕೇಳಿಕೊಂಡಿದ್ದಾನೆ ಎನ್ನಲಾಗಿದೆ.
Ad
ಎಲ್.ಕೆ.ಆಡ್ವಾಣಿ ಯಾತ್ರೆಗೂ ಮುನ್ನ ಸ್ಫೋಟ ನಡೆಸಿದ್ದ ಉಗ್ರ ವಿಜಯಪುರದಲ್ಲಿ ಸೆರೆ
ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಜತೆ ಸಿಎಂ ಸಿದ್ದರಾಮಯ್ಯ ಮಾತುಕತೆ
Congress Govt: ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ: ಶಿವಲಿಂಗೇಗೌಡ
ಮೈಸೂರು, ಬನ್ನೇರುಘಟ್ಟ ಮೃಗಾಲಯದ ಪ್ರವೇಶ ಶುಲ್ಕ ಹೆಚ್ಚಳ: ಸಚಿವ ಈಶ್ವರ ಖಂಡ್ರೆ
ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಪರ ಸಚಿವರ ದಂಡು
ಎಲ್.ಕೆ.ಆಡ್ವಾಣಿ ಯಾತ್ರೆಗೂ ಮುನ್ನ ಸ್ಫೋಟ ನಡೆಸಿದ್ದ ಉಗ್ರ ವಿಜಯಪುರದಲ್ಲಿ ಸೆರೆ
ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಜತೆ ಸಿಎಂ ಸಿದ್ದರಾಮಯ್ಯ ಮಾತುಕತೆ
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ
Congress Govt: ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ: ಶಿವಲಿಂಗೇಗೌಡ
World Population Day: ಜನಸಂಖ್ಯೆ ಹೊರೆ ಅಲ್ಲ ವರವಾಗಿ ಪರಿವರ್ತಿಸೋಣ
You seem to have an Ad Blocker on.
To continue reading, please turn it off or whitelist Udayavani.