ಕಾರು ಢಿಕ್ಕಿಗೆ 7 ಅಡಿ ಮೇಲೆ ಹಾರಿ ಬಿದ್ದ ಯುವತಿ

Team Udayavani, Feb 5, 2023, 3:20 PM IST

tdy-11

ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೊಬ್ಬರುಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ಆರ್‌.ವಿ.ಕಾಲೇಜು ಬಳಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ಮೂಲದ ಸ್ವಾತಿ(21) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫೆ.2ರಂದು ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕ ಎಂಬಿಬಿಎಸ್‌ವಿದಾರ್ಥಿ ಕೃಷ್ಣ (20) ಎಂಬಾತನನ್ನು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಬಂಧಿಸಲಾಗಿತ್ತು.ಕಾರು ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿನಿ ಏಳೆಂಟುಅಡಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಾಳು ಸ್ವಾತಿ ತಂದೆ ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸ ಮಾಡಲೆಂದು ಬೆಂಗಳೂರಿಗೆ ಬಂದಿದ್ದು, ಪಟ್ಟಣಗೆರೆಯ ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸವಾಗಿದ್ದರು. ಮೈಸೂರು ರಸ್ತೆಯ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು ಮುಂಭಾಗ ಇರುವಬೆಂಗಳೂರು ಇನ್ಸ್‌ಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌(ಬಿಐಎಂಎಸ್‌) ಕಾಲೇಜಿನಲ್ಲಿಮೊದಲ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಫೆ.2ರಂದು ಮಧ್ಯಾಹ್ನ 1.30ರ ಸುಮಾರಿಗೆ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು ಕಡೆಯಿಂದ ಬಿಐಎಂಎಸ್‌ ಕಾಲೇಜಿಗೆ ತೆರಳಲು ರಸ್ತೆದಾಟುವಾಗ ಕೆಂಗೇರಿ ಕಡೆಯಿಂದ ಅತೀ ವೇಗವಾಗಿ ಬಂದ ಕಾರು ಸ್ವಾತಿಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಮುಂದೆ ಹೋಗಿತ್ತು.  ಪರಿಣಾಮ ಏಳೆಂಟು ಅಡಿಗಳಷ್ಟು ಮೇಲಕ್ಕೆ ಹಾರಿ ರಸ್ತೆಗೆ ಬಿದ್ದ ಸ್ವಾತಿ ಕಾಲು, ಕೈ, ಬೆನ್ನು ಸೇರಿ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ಸದ್ಯ ಆಕೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್‌ ಆಗಿದೆ. ಸ್ವಾತಿ ರಸ್ತೆ ದಾಟುವಾಗ ಕೆಂಗೇರಿ ಕಡೆಯಿಂದ ಬರುವ ಕೆಂಪುಬಣ್ಣದ ಕಾರು ಸ್ವಾತಿಗೆ ಡಿಕ್ಕಿ ಹೊಡೆದು ಮುಂದೆ ಸಾಗುತ್ತದೆ. ಡಿಕ್ಕಿಯ ರಭಸಕ್ಕೆ ಸ್ವಾತಿ ಏಳೆಂಟು ಅಡಿಮೇಲಕ್ಕೆ ಹಾರಿ ರಸ್ತೆಗೆ ಬೀಳುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾರು ನಿಲ್ಲಿಸದೇ ಕಾಲೇಜಿನೊಳಗೆ ನುಗ್ಗಿಸಿದ್ದ  :

ಅಪಘಾತ ಎಸೆಗಿದ ಕಾರು ಚಾಲಕ ಕೃಷ್ಣ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್‌ ಓದುತ್ತಿದ್ದಾನೆ. ಘಟನೆ ಬಳಿಕ ಕಾರು ನಿಲ್ಲಿಸದೆ ಗಾಬರಿಯಲ್ಲಿ ಆರ್‌. ವಿ.ಎಂಜಿನಿಯರಿಂಗ್‌ ಕಾಲೇಜು ಆವರಣದೊಳಗೆ ಕಾರು ನುಗ್ಗಿಸಿದ್ದ. ಬಳಿಕ ಆತನನ್ನು ಬಂಧಿಸಿ ಕಾರನ್ನು ಜಪ್ತಿ ಮಾಡಲಾಗಿತ್ತು. ಇದೀಗ ಆರೋಪಿಯನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆಕಂಡು ಬಂದಿದೆ. ವಿಚಾರಣೆ ವೇಳೆ ಆರೋಪಿ, ಘಟನೆ ವೇಳೆ ಜನ ಸೇರಿದ್ದರಿಂದ ಹೆದರಿ ಪರಾರಿಯಾಗಿದ್ದೆ ಎಂದಿದ್ದಾನೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ರೈಲು ಗಾಡಿಗೆ ಅಡ್ಡ ಬಂದ ಪಾದಾಚಾರಿ: ಜೀವ ಉಳಿಸಿದ ರೈಲ್ವೆ ಸಿಬ್ಬಂದಿ

ರೈಲು ಗಾಡಿಗೆ ಅಡ್ಡ ಬಂದ ಪಾದಾಚಾರಿ: ಜೀವ ಉಳಿಸಿದ ರೈಲ್ವೆ ಸಿಬ್ಬಂದಿ

ಸೀಕ್ವೇರಿಯಂನಲ್ಲಿ 50 ವರ್ಷ ಬಂಧಿಯಾಗಿದ್ದ ಲೋಲಿಟ ಇನ್ನು ಬಂಧ ಮುಕ್ತ…!

ಸೀಕ್ವೇರಿಯಂನಲ್ಲಿ 50 ವರ್ಷ ಬಂಧಿಯಾಗಿದ್ದ ಲೋಲಿಟ ಇನ್ನು ಬಂಧ ಮುಕ್ತ…!

ಖಾಸಗಿ ಚಾಟ್‌ಗೆ “ಬೀಗ’ ಹಾಕಿ ಅಡಗಿಸಿಡಿ! ವಾಟ್ಸ್‌ಆ್ಯಪ್‌ನಿಂದ ಹೊಸ “ಲಾಕ್‌ ಚಾಟ್‌’ ಫೀಚರ್‌

ಖಾಸಗಿ ಚಾಟ್‌ಗೆ “ಬೀಗ’ ಹಾಕಿ ಅಡಗಿಸಿಡಿ! ವಾಟ್ಸ್‌ಆ್ಯಪ್‌ನಿಂದ ಹೊಸ “ಲಾಕ್‌ ಚಾಟ್‌’ ಫೀಚರ್‌

ಗೂಗಲ್‌ ಉದ್ಯೋಗಿಗಳ ಸವಲತ್ತುಗಳಿಗೆ ಕತ್ತರಿ

ಗೂಗಲ್‌ ಉದ್ಯೋಗಿಗಳ ಸವಲತ್ತುಗಳಿಗೆ ಕತ್ತರಿ

ಮರುಮದುವೆ ಪರಿಹಾರ ನಿರಾಕರಣೆಗೆ ಕಾರಣವಲ್ಲ: ಬಾಂಬೆ ಹೈಕೋರ್ಟ್‌

ಮರುಮದುವೆ ಪರಿಹಾರ ನಿರಾಕರಣೆಗೆ ಕಾರಣವಲ್ಲ: ಬಾಂಬೆ ಹೈಕೋರ್ಟ್‌

ವಿಶ್ವವಿಖ್ಯಾತ ಅಮರನಾಥ ಯಾತ್ರೆ 60 ದಿನಕ್ಕೇರಿಕೆ?

ವಿಶ್ವವಿಖ್ಯಾತ ಅಮರನಾಥ ಯಾತ್ರೆ 60 ದಿನಕ್ಕೇರಿಕೆ?

ಹೇಮನಾಥ ಶೆಟ್ಟಿ ದಿಲ್ಲಿಗೆ: ಕಾಂಗ್ರೆಸ್‌ನಲ್ಲಿ ಏರಿದ ಕಾವು!

ಹೇಮನಾಥ ಶೆಟ್ಟಿ ದಿಲ್ಲಿಗೆ: ಕಾಂಗ್ರೆಸ್‌ನಲ್ಲಿ ಏರಿದ ಕಾವು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr. Lekhan Pandit appointed to Ayurveda Board

ಆಯುರ್ವೇದ ಮಂಡಳಿಗೆ ಡಾ.ಲೇಖನ ಪಂಡಿತ್‌ ನೇಮಕ

tdy-6

ಗಾಂಜಾ ಕೊಡುವಂತೆ ಪೀಡಿಸಿದ್ದಕ್ಕೆ ಯುವಕನ ಕೊಲೆ

tdy-5

ಸ್ನೇಹಿತನ ಕೈಕಾಲು ಕಟ್ಟಿ ಬಾಯಿಗೆ ಟೇಪ್‌ ಸುತ್ತಿ ಹತ್ಯೆ

tdy-4

ನೇಪಾಳಕ್ಕೆ ತೆರಳಿ ಕನ್ನಗ್ಯಾಂಗ್‌ ಬಂಧಿಸಿದ ಖಾಕಿ

rape

ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಯುವತಿಯ ಗ್ಯಾಂಗ್ ರೇಪ್

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ