ರೀಲ್ಸ್‌ನಲ್ಲಿ ಪರಿಚಯವಾದವನ ಜತೆ ಪತ್ನಿ ಪರಾರಿ: ಪತಿ ದೂರು

Team Udayavani, Feb 5, 2023, 3:26 PM IST

ರೀಲ್ಸ್‌ನಲ್ಲಿ ಪರಿಚಯವಾದವನ ಜತೆ ಪತ್ನಿ ಪರಾರಿ: ಪತಿ ದೂರು

ಬೆಂಗಳೂರು: ಇತ್ತೀಚೆಗೆ ಚಿಕ್ಕಮಕ್ಕಳಿಂದ ವೃದ್ಧವರೆಗಿನ ಎಲ್ಲ ವಯಸ್ಸಿನವರು ರೀಲ್ಸ್‌ (ಮನರಂಜನೆ ಮೊಬೈಲ್‌ ಆ್ಯಪ್‌)ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಮಹಿಳೆ ಪತಿಯನ್ನು ತೊರೆದು ರೀಲ್ಸ್‌ನಲ್ಲಿ ಪರಿಚಯವಾದ ವ್ಯಕ್ತಿ ಜತೆ ನಾಪತ್ತೆಯಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.

ಈ ಘಟನೆಯಿಂದ ವಿಚಲಿತಗೊಂಡಿರುವ ಪತಿ, ಸುಬೇದಾರಪಾಳ್ಯ ನಿವಾಸಿ ಜೋಸೆಫ್ ಆಂಟೋನಿ ಎಂಬುವರು ಪತ್ನಿ ನಮಿತಾ ಕುಮಾರಿ ಮತ್ತು ನಾಲ್ಕು ವರ್ಷದ ಮಗನನ್ನು ಹುಡುಕಿಕೊಡುವಂತೆ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಎಲೆಕ್ಟ್ರೀಷಿಯನ್‌ ಕೆಲಸ ಮಾಡುವ ಜೋಸೆಫ್ ಆಂಟೋನಿ 9 ವರ್ಷಗಳ ಹಿಂದೆ ಜಾರ್ಖಂಡ್‌ ಮೂಲದ ನಮೀತಾ ಕುಮಾರಿ ಜತೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಈ ಮಧ್ಯೆ ನಮೀತಾ ಕುಮಾರಿ ಮೊಬೈಲ್‌ ಆ್ಯಪ್‌ಗಳ ಮೂಲಕ ರೀಲ್ಸ್‌ನಲ್ಲಿ ಹಾಡು, ಕುಣಿತದ ಹವ್ಯಾಸ ಇಟ್ಟುಕೊಂಡಿದ್ದರು. ಇದೇ ವೇಳೆ ಆರು ತಿಂಗಳ ಹಿಂದೆ ದೆಹಲಿ ಮೂಲದ ದೀಪಕ್‌ ಮೊಹರಾ ಎಂಬಾತನ ಪರಿಚಯವಾಗಿದೆ. ನಂತರ ಇಬ್ಬರು ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಾಗೂ ವಿಡಿಯೋ ಕಾಲ್‌ನಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲದೆ, ಜ.8ರಂದು ದೀಪಕ್‌ ಮೇಹರಾ ಬೆಂಗಳೂರಿಗೆ ಬಂದು ನಮೀತಾ ಕುಮಾರಿಯನ್ನು ಭೇಟಿಯಾಗಿ ಹೋಗಿದ್ದ. ಈ ವಿಚಾರ ತಿಳಿದ ಜೋಸೆಫ್ ಪತ್ನಿಗೆ ಬುದ್ಧಿವಾದ ಹೇಳಿದ್ದರು ಎಂದು ಪೊಲೀಸರು ಹೇಳಿದರು.

ಮೊಬೈಲ್‌ ಒಡೆದು ಹಾಕಿ ನಾಪತ್ತೆ: ಆದರೂ ನಮೀತಾ ಕುಮಾರಿ, ಜ.26 ಮುಂಜಾನೆ 5 ಗಂಟೆ ಸುಮಾರಿಗೆ ಪತಿಯ ಮೊಬೈಲ್‌ ಅನ್ನು ನೀರಿನಲ್ಲಿ ಹಾಕಿ, ಆಕೆಯ ಮೊಬೈಲ್‌ನನ್ನು ಒಡೆದು ಹಾಕಿದ್ದಾಳೆ. ನಂತರ ನಾಲ್ಕು ವರ್ಷದ ಎರಡನೇ ಪುತ್ರನ ಜತೆ ಯಾವುದೇ ಮಾಹಿತಿ ನೀಡದೆ ನಾಪತ್ತೆಯಾಗಿದ್ದಾರೆ. ಹೀಗಾಗಿ ಪತ್ನಿ ನಮೀತಾಕುಮಾರಿ ಮತ್ತು ನಾಲ್ಕು ವರ್ಷದ ಮಗ ದೀಪಕ್‌ ಮೊಹರಾ ಜತೆಯೇ ಹೋಗಿರಬಹುದು. ಇಬ್ಬರನ್ನು ಹುಡುಕಿಕೊಡುವಂತೆ ಎಂದು ದೂರು ನೀಡಿದ್ದಾರೆ. ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಹೇಮನಾಥ ಶೆಟ್ಟಿ ದಿಲ್ಲಿಗೆ: ಕಾಂಗ್ರೆಸ್‌ನಲ್ಲಿ ಏರಿದ ಕಾವು!

ಹೇಮನಾಥ ಶೆಟ್ಟಿ ದಿಲ್ಲಿಗೆ: ಕಾಂಗ್ರೆಸ್‌ನಲ್ಲಿ ಏರಿದ ಕಾವು!

ಅಭಿಪ್ರಾಯ ಸಂಗ್ರಹ ಮಧ್ಯೆಯೇ ಬಿ ಪ್ಲ್ರಾನ್‌?

ಅಭಿಪ್ರಾಯ ಸಂಗ್ರಹ ಮಧ್ಯೆಯೇ ಬಿ ಪ್ಲ್ರಾನ್‌?

ಜಾಂಬಿಯದ ಅಜ್ಜನ ಮನೆ ಹುಡುಕಿಕೊಂಡು ಹೋದ ಕಮಲಾ ಹ್ಯಾರಿಸ್‌

ಜಾಂಬಿಯದ ಅಜ್ಜನ ಮನೆ ಹುಡುಕಿಕೊಂಡು ಹೋದ ಕಮಲಾ ಹ್ಯಾರಿಸ್‌

ಎ. 15ರ ವರೆಗೆ ತೀರ್ಥಹಳ್ಳಿ- ಕುಂದಾಪುರ ಸಂಚಾರ ರದ್ದು

ಎ. 15ರ ವರೆಗೆ ತೀರ್ಥಹಳ್ಳಿ- ಕುಂದಾಪುರ ಸಂಚಾರ ರದ್ದು

“ವೋಗ್‌’ ಮುಖಪುಟದಲ್ಲಿ ಮಿಂಚಿದ 106ರ ಟ್ಯಾಟೂ ಕಲಾವಿದೆ!

“ವೋಗ್‌’ ಮುಖಪುಟದಲ್ಲಿ ಮಿಂಚಿದ 106ರ ಟ್ಯಾಟೂ ಕಲಾವಿದೆ!

ರಕ್ಷಣಾ ರಫ್ತು ವಿಕ್ರಮ; 15,920 ಕೋಟಿ ಮೌಲ್ಯದ ಪರಿಕರ ಎಕ್ಸ್‌ಪೋರ್ಟ್‌

ರಕ್ಷಣಾ ರಫ್ತು ವಿಕ್ರಮ; 15,920 ಕೋಟಿ ಮೌಲ್ಯದ ಪರಿಕರ ಎಕ್ಸ್‌ಪೋರ್ಟ್‌

ಹಾಡು ಪ್ರಸಾರ ಮಾಡಿದ್ದಕ್ಕೆ ರೇಡಿಯೋ ಬಂದ್‌!

ಹಾಡು ಪ್ರಸಾರ ಮಾಡಿದ್ದಕ್ಕೆ ರೇಡಿಯೋ ಬಂದ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr. Lekhan Pandit appointed to Ayurveda Board

ಆಯುರ್ವೇದ ಮಂಡಳಿಗೆ ಡಾ.ಲೇಖನ ಪಂಡಿತ್‌ ನೇಮಕ

tdy-6

ಗಾಂಜಾ ಕೊಡುವಂತೆ ಪೀಡಿಸಿದ್ದಕ್ಕೆ ಯುವಕನ ಕೊಲೆ

tdy-5

ಸ್ನೇಹಿತನ ಕೈಕಾಲು ಕಟ್ಟಿ ಬಾಯಿಗೆ ಟೇಪ್‌ ಸುತ್ತಿ ಹತ್ಯೆ

tdy-4

ನೇಪಾಳಕ್ಕೆ ತೆರಳಿ ಕನ್ನಗ್ಯಾಂಗ್‌ ಬಂಧಿಸಿದ ಖಾಕಿ

rape

ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಯುವತಿಯ ಗ್ಯಾಂಗ್ ರೇಪ್

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ