ಬಾಯಾರಿದ ಜನರ ಕಾವೇರಿ ಕನಸು


Team Udayavani, Apr 17, 2018, 12:05 PM IST

bayarida.jpg

ಬೆಂಗಳೂರು: ಇಲ್ಲಿ ನೀರು ಅಕ್ಷರಶಃ ಖಾಸಗೀಕರಣವಾಗಿದೆ. ಕುಡಿಯಲು ಮತ್ತು ನಿತ್ಯದ ಬಳಕೆಗೆ ಖಾಸಗಿ ನೀರು ಸರಬರಾಜು ಏಜೆನ್ಸಿಗಳೇ ಯಲಹಂಕ ವಲಯದ ಜನರಿಗೆ ಆಧಾರ!

ಎಂಟು ದಿನಗಳಿಗೊಮ್ಮೆ ಕೇವಲ ಎರಡು ತಾಸು ಬಿಬಿಎಂಪಿ ನೀರು ಬರುತ್ತದೆ. ಅದಕ್ಕೂ ತಿಂಗಳಿಗೊಮ್ಮೆ ನೀರು ಗಂಟಿ “ಖುಷಿಗೆ’ ಅಂತಾ ಇಂತಿಷ್ಟು ಹಣ ಕೊಡಬೇಕು. ಆದರೆ, ಒಂದೊಂದು ಕಟ್ಟಡದಲ್ಲಿ ನಾಲ್ಕಾರು ಮನೆಗಳಿರುವುದರಿಂದ ಎರಡು ದಿನಗಳಲ್ಲಿ ಆ ನೀರು ಖಾಲಿ. ಹಾಗಾಗಿ, ಟ್ಯಾಂಕರ್‌ಗಳ ಅವಲಂಬನೆ ಅನಿವಾರ್ಯ.

ಅದೇ ರೀತಿ, ಕುಡಿಯುವ ನೀರಿಗೆ “ಕಾವೇರಿ ಕನೆಕ್ಷನ್‌’ ಇದೆ. ಆದರೆ, ಅದರಲ್ಲಿ ನೀರು ಹರಿಯುವುದಿಲ್ಲ. ಆದ್ದರಿಂದ ಉಳ್ಳವರು ಮನೆಗೆ 30 ರೂ. ಕೊಟ್ಟು ಕ್ಯಾನ್‌ ನೀರು ತರಿಸಿಕೊಳ್ಳುತ್ತಾರೆ. ಬಡವರು, ಖಾಸಗಿ ಏಜೆನ್ಸಿಯೊಂದು ತೆರೆದಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 10 ರೂ. ಕೊಟ್ಟು 20 ಲೀ. ನೀರು ಪಡೆಯುತ್ತಾರೆ.

ಇದು ಯಲಹಂಕ ವಲಯದ ಮಾರುತಿನಗರದ ನೀರಿನ ಸ್ಥಿತಿ. ಸುಮಾರು ಒಂದು ಲಕ್ಷ ಜನಸಂಖ್ಯೆ ಹೊಂದಿರುವ ಈ ವಾರ್ಡ್‌ನಲ್ಲಿ ಮೂರು ಮುಖ್ಯ ರಸ್ತೆಗಳಿದ್ದು, ಅದರಲ್ಲಿ 40ಕ್ಕೂ ಅಧಿಕ ಟ್ಯಾಂಕರ್‌ಗಳಿವೆ. ಇದು ಇಲ್ಲಿನ ಟ್ಯಾಂಕರ್‌ಗಳಿಗೆ ಇರುವ ಬೇಡಿಕೆಯನ್ನು ಸೂಚಿಸುತ್ತದೆ. 350 ರೂ.ಗೆ ಒಂದು ಟ್ಯಾಂಕರ್‌ ನೀರು ಬರುತ್ತದೆ.

ಮಾರುತಿನಗರದ ಕೊನೆಯಲ್ಲಿ ದೊಡ್ಡ ಪ್ರಮಾಣದ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣಗೊಳ್ಳುತ್ತಿದೆ. ಮನೆ ಮುಂದೆ ಪೈಪ್‌ಲೈನ್‌ ಹಾದುಹೋಗಿದೆ. ಅಲ್ಲದೆ, ಮನೆ-ಮನೆಗೆ ಸಮೀಕ್ಷೆ ನಡೆಸಿ, ನಲ್ಲಿ ಸಂಪರ್ಕಕ್ಕೆ ಇಂತಿಷ್ಟು ಖರ್ಚಾಗಲಿದೆ ಎಂದೂ ಅಧಿಕಾರಿಗಳು ಹೇಳಿ ಹೋಗಿದ್ದಾರೆ. ಇದೆಲ್ಲವೂ “ಕಾವೇರಿ ಕನಸು’ ಚಿಗುರೊಡೆಯುವಂತೆ ಮಾಡಿದೆ ಎಂದು 1ನೇ ಮುಖ್ಯರಸ್ತೆ ನಿವಾಸಿ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಎಲೆಕ್ಷನ್‌ಗೆ ಜಯವಾಗಲಿ!: ಈ ಮೊದಲು 10-15 ದಿನಗಳಿಗೊಮ್ಮೆ ನೀರು ಬರುತ್ತಿತ್ತು. ಚುನಾವಣೆ ಘೋಷಣೆಯಾದ ನಂತರ ವಾರಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಆದರೆ, ಆ ನೀರು ಯಾವುದಕ್ಕೂ ಸಾಕಾಗುವುದಿಲ್ಲ. ಕೊಳವೆಬಾವಿಗಳಂತೂ ಒಂದೊಂದಾಗಿ ಬತ್ತುತ್ತಿವೆ. ಈ ಸಂದಿಗ್ಧ ಸ್ಥಿತಿಯಲ್ಲಿ ಮಳೆ ತುಸು ಬೇಗ ಬಂದಿದ್ದರಿಂದ ನಿಟ್ಟುಸಿರುವ ಬಿಡುವಂತಾಗಿದೆ ಎಂದು ಮೊದಲ ಮುಖ್ಯರಸ್ತೆ 23ನೇ ಅಡ್ಡರಸ್ತೆಯ ಮಂಜುನಾಥ್‌ ಹೇಳುತ್ತಾರೆ.

ಯಲಹಂಕ ನ್ಯೂಟೌನ್‌ನಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ, ಸಮಸ್ಯೆ ಗಂಭೀರವಾಗಿಲ್ಲ. ಆದರೆ, ಕಳೆದ ತಿಂಗಳು ಎರಡು ದಿನಗಳಿಗೊಮ್ಮೆ ಬರುತ್ತಿದ್ದ ನೀರು ಈಗ ಮೂರು ದಿನಗಳಿಗೆ ವಿಸ್ತರಣೆ ಆಗಿದೆ. ನೀರು ಬಿಡುವ ಅವಧಿ ಕೂಡ ತಗ್ಗಿದೆ.

ಬೇಸಿಗೆ ಇನ್ನೂ ಎರಡು ತಿಂಗಳು ಇರುವುದರಿಂದ ಆಗ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಡಾ.ವೆಂಕಟೇಶಯ್ಯ ಆತಂಕ ವ್ಯಕ್ತಪಡಿಸುತ್ತಾರೆ. ಅಟ್ಟೂರಿನಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದೆ. ಆದರೆ, ಅಲ್ಪ ಸಮಯ ಮಾತ್ರ ಸರಬರಾಜು ಆಗುತ್ತಿದ್ದು, ಸಾಕಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಾರೆ. 

ಪೂರೈಕೆಯಲ್ಲೂ ತಾರತಮ್ಯ?: ಬೇಸಿಗೆ ಬಂದರೆ ಸಾಕು, ನೀರುಗಂಟಿ ರಾಷ್ಟ್ರಪತಿಗಿಂತ ಬ್ಯುಸಿ ಆಗುತ್ತಾನೆ. ಕರೆ ಸ್ವೀಕರಿಸಲು ಅವರಿಗೆ ಸಮಯವೇ ಇರುವುದಿಲ್ಲ. ವಿಚಿತ್ರವೆಂದರೆ, ಮೂಲನಿವಾಸಿಗಳಿಗೆ ನೀರಿನ ಸಮಸ್ಯೆ ಆಗುವುದೇ ಇಲ್ಲ.

ಆದರೆ, ಬೇರೆ ಕಡೆಯಿಂದ ಇಲ್ಲಿಗೆ ಬಂದವರನ್ನು ಕಡೆಗಣಿಸಲಾಗುತ್ತದೆ. ತಿಂಗಳಿಗೆ ಪ್ರತಿ ಮನೆಯಿಂದ ನೀರು ಬಿಡುವವನಿಗೆ 50-100 ರೂ. “ಖುಷಿಗಾಗಿ’ ಕೊಡಬೇಕು. ಅಂದರೆ ಮಾತ್ರ ನೀರು ಬಿಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಮಾರುತಿನಗರದ ನಿವಾಸಿಯೊಬ್ಬರು ಅಸಹಾಯಕತೆ ತೋಡಿಕೊಂಡರು.  

ಸಮಸ್ಯೆ ಇಲ್ಲ: “ಯಲಹಂಕ ವಲಯದಲ್ಲಿ ನೀರಿನ ಸಮಸ್ಯೆ ಇದೆ ಎಂದು ಜಲಮಂಡಳಿ ಸಿಬ್ಬಂದಿಗೆ ಯಾವುದೇ ದೂರು ನೀಡಿಲ್ಲ. ಇದರರ್ಥ ಸಮಸ್ಯೆ ಇಲ್ಲ ಎಂದಾಯಿತು. ಎರಡು-ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮಾರುತಿನಗರದಲ್ಲೂ ಶೀಘ್ರದಲ್ಲೇ ಕಾವೇರಿ ನೀರು ಪೂರೈಕೆ ಆಗಲಿದೆ’ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

* ವಿಜಯಕುಮಾರ ಚಂದರಗಿ 

Ad

ಟಾಪ್ ನ್ಯೂಸ್

Kalaburagi: ಹಾಡಹಗಲೇ ಜ್ಯವೆಲರಿ ಶಾಪ್ ಗೆ ನುಗ್ಗಿ ಗನ್‌ ತೋರಿಸಿ ದರೋಡೆ

Kalaburagi: ಹಾಡಹಗಲೇ ಜ್ಯವೆಲರಿ ಶಾಪ್ ಗೆ ನುಗ್ಗಿ ಗನ್‌ ತೋರಿಸಿ ದರೋಡೆ

Stock : ಟ್ರಂಪ್‌ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ

Stock: ಟ್ರಂಪ್‌ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ

Argument over loan: Husband bites off wife’s nose

Channagiri: ಸಾಲದ ವಿಚಾರಕ್ಕೆ ಜಗಳ: ಪತ್ನಿಯ ಮೂಗನ್ನೇಕಚ್ಚಿ ತುಂಡರಿಸಿದ ಪತಿರಾಯ

14-tech

OnePlus Nord CE5, Nord 5 ಮತ್ತು Buds 4 ಖರೀದಿಗೆ ಲಭ್ಯ

Thirthahalli: ಗುಡ್ಡ ಕುಸಿಯುವ ಭೀತಿ… ಭಾರತೀಪುರ ಫ್ಲೈ ಓವರ್ ನ ಒಂದು ಭಾಗ ಬಂದ್!

Thirthahalli: ಧರೆ ಕುಸಿಯುವ ಭೀತಿ… ಭಾರತೀಪುರ ಫ್ಲೈ ಓವರ್ ನ ಒಂದು ಭಾಗ ಬಂದ್!

Vijayapura: ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ: ಬಂಧಿತರ 15ಕ್ಕೇರಿಕೆ, 39 ಕೆಜಿ ಚಿನ್ನ ಜಪ್ತಿ

Vijayapura: ಕೆನರಾಬ್ಯಾಂಕ್ ಕಳ್ಳತನ ಕೇಸ್: ಬಂಧಿತರ ಸಂಖ್ಯೆ15ಕ್ಕೇರಿಕೆ, 39KG ಚಿನ್ನ ಜಪ್ತಿ

ಅಮೃತಧಾರೆ ಸೀರಿಯಲ್​ ನಟಿಗೆ ಚಾಕು ಇರಿತ… ಆಸ್ಪತ್ರೆಗೆ ದಾಖಲು, ಪತಿ ಅರೆಸ್ಟ್

ಅಮೃತಧಾರೆ ಸೀರಿಯಲ್​ ನಟಿಗೆ ಚಾಕು ಇರಿತ… ಆಸ್ಪತ್ರೆಗೆ ದಾಖಲು, ಪತಿ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ವಂದೇ ಭಾರತ್‌ ರೈಲಿನಲ್ಲಿ ಕಳ್ಳತನ: ಆರೋಪಿ ಸೆರೆ, 49 ಮೊಬೈಲ್‌ ಜಪ್ತಿ

9-police

Bengaluru: ಪೊಲೀಸರ ಎಡವಟ್ಟು: ಗ್ಯಾಂಗ್‌ ಸ್ಟರ್‌ ಬಿಷ್ಣೋಯ್‌ ಸಹಚರರು ಪರಾರಿ!

8-fruad

Bengaluru: 2 ಫ್ಲ್ಯಾಟ್‌ ಸೇಲ್‌ ನೆಪದಲ್ಲಿ ಸಿಸ್ಟರ್‌ ಗೆ ಭಾರೀ ವಂಚನೆ!

7-bng

Bengaluru: ಪ್ರಸಿದ್ದ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಸರ್ಕಾರದ ವಶಕ್ಕೆ

4-bng

Bengaluru: ಮಹಿಳೆಯರ ಫೋಟೋ, ವಿಡಿಯೋ ಜಾಲತಾಣದಲ್ಲಿ ಹಾಕುತ್ತಿದ್ದವನ ಸೆರೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

14(1

Ranebennur: ಹತ್ತಿ ಬಿಟ್ಟು ಮೆಕ್ಕೆಜೋಳದತ್ತ ರೈತರ ಒಲವು

Kalaburagi: ಹಾಡಹಗಲೇ ಜ್ಯವೆಲರಿ ಶಾಪ್ ಗೆ ನುಗ್ಗಿ ಗನ್‌ ತೋರಿಸಿ ದರೋಡೆ

Kalaburagi: ಹಾಡಹಗಲೇ ಜ್ಯವೆಲರಿ ಶಾಪ್ ಗೆ ನುಗ್ಗಿ ಗನ್‌ ತೋರಿಸಿ ದರೋಡೆ

Stock : ಟ್ರಂಪ್‌ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ

Stock: ಟ್ರಂಪ್‌ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ

13

Gadag: ಕಪ್ಪತ್ತಗುಡ್ಡದಲ್ಲಿ ಅಡವಿ ಬೆಕ್ಕು, ಹಾವು,ಗೂಬೆಗಳ ಸಾವು; ಹೆಚ್ಚಿದ ಆತಂಕ

Shimoga: Firefighters rescue cow that fell into canal

Shimoga: ಕಾಲುವೆಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.