ಕೌನ್ ಬನೇಗ ಕರೋಡ್ ಪತಿಯಲ್ಲಿ 25 ಲಕ್ಷ ರೂ. ಗೆದ್ದಿದ್ದಿರಿ ಎಂದು ಯುವತಿಗೆ ವಂಚನೆ
Team Udayavani, May 26, 2022, 3:20 PM IST
ಬೆಂಗಳೂರು: ಕೌನ್ ಬನೇಗ ಕರೋಡ್ ಪತಿಯಲ್ಲಿ 25 ಲಕ್ಷ ರೂ. ಗೆದ್ದದ್ದಿರಿ ಎಂದು ಯುವತಿಯೊಬ್ಬರಿಗೆ ಸೈಬರ್ ವಂಚಕರು ಸಾವಿರಾರು ರೂ. ವಂಚಿಸಿದ್ದಾರೆ.
ಈ ಸಂಬಂಧ ವಿಲ್ಸನ್‌ಗಾರ್ಡ್‌ನ್ ನಿವಾಸಿ ಸರೋಜಾ ಕುಮಾರಿ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸರೋಜಾ ಕುಮಾರಿಗೆ ಕೌನ್ ಬನೇಗ ಕರೋಡ್ ಪತಿ(ಕೆಬಿಸಿ) 25 ಲಕ್ಷ ರೂ. ಗೆದ್ದಿದ್ದಿರಿ ಎಂದು ಠಾಣಾ ಪ್ರತಾಪ್ ಸಿಂಗ್ ಎಂಬಾತ ಕರೆ ಮಾಡಿ ನಂಬಿಸಿದ್ದಾರೆ. ಬಳಿಕ ಲಕ್ಕಿ ಡ್ರಾ ಕೆಬಿಸಿ ಲಾಟರಿ ಟಿಕೆಟ್ ಅನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಾನೆ.
ಇದನ್ನೂ ಓದಿ: 10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ
ಕೆಲ ಹೊತ್ತಿನ ಬಳಿಕ ಈ ಹಣ ಪಡೆಯಲು ಕೆಲವೊಂದು ಶುಲ್ಕ ಪಾವತಿಸಬೇಕು ಎಂದು ಮೇ 13ರಿಂದ 18ರವರೆಗೆ 55 ಸಾವಿರ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.