ಅಶ್ಲೀಲ ಚಿತ್ರಗಳಿಗೆ ಮಕ್ಕಳ ಬಳಕೆ: ತನಿಖೆ ಸಿಐಡಿಗೆ

Team Udayavani, Jan 22, 2020, 3:07 AM IST

highcourt

ಬೆಂಗಳೂರು: ರಾಜ್ಯದಲ್ಲಿ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿಕೊಳ್ಳಲಾಗಿದೆ ಎನ್ನಲಾದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ರಾಜ್ಯ ಪೊಲೀಸ್‌ ಇಲಾಖೆ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತಂತೆ ಹೈಕೋರ್ಟ್‌ ದಾಖಲಿಸಿ ಕೊಂಡಿರುವ ಸ್ವಯಂ ಪ್ರೇರಿತ ಹಾಗೂ ಬಚಪನ್‌ ಬಚಾವೋ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಪ್ರತ್ಯೇಕ 2 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್‌.ಓಕಾ ಹಾಗೂ ನ್ಯಾ.ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ಪೀಠಕ್ಕೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌.ರಾಜು ಪ್ರಮಾಣಪತ್ರ ಸಲ್ಲಿಸಿದ್ದಾರೆ.

ವಿಚಾರಣೆ ವೇಳೆ ಸರ್ಕಾರಿ ವಕೀಲರು ಡಿಜಿಪಿ ಸಲ್ಲಿಸಿದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಒದಗಿಸಿದರು. ಅದರಲ್ಲಿ ರಾಜ್ಯದಲ್ಲಿ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿಕೊಂಡಿರುವ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಎಲ್ಲಿಯೂ ಅಂತಹ ಘಟನೆ ವರದಿಯಾಗಿಲ್ಲ. ಆದರೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ವರದಿ ಉಲ್ಲೇಖವಿಲ್ಲದೆ ಸಿಐಡಿ ವಿಭಾಗದ ಡಿಜಿಪಿ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಯಲಿದ್ದು, ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಹ 2019ರ ಡಿ.17ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೇಂದ್ರದ ವರದಿಯಲ್ಲಿನ ಆರೋಪಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರು. ಕೇಂದ್ರದ ವರದಿಯಲ್ಲಿ ಹೇಳಿರುವ ಕೃತ್ಯ ನಡೆದಿಲ್ಲ ಎಂದು ಡೀಸಿಗಳೂ ವರದಿ ನೀಡಿದ್ದರು. ಎಫ್ಐಆರ್‌ ದಾಖಲಿಸಿ ತನಿಖೆ ನಡೆಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸಬೇಕಿದೆ. ಅದರಂತೆ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಎಲ್ಲಿಯೂ ಅಂತಹ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.

ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ಒಂದೇ ದಿನದಲ್ಲಿ ತನಿಖೆ ಮುಗಿಸಿ ವರದಿ ನೀಡಿರುವ ಪೊಲೀಸ್‌ ಅಧಿಕಾರಿಗಳ ನಡೆ ಬೇಜವಾಬ್ದಾರಿತನದಿಂದ ಕೂಡಿದೆ. ಸಿಆರ್‌ಪಿಸಿ ಸೆಕ್ಷನ್‌ 154(1) ಪ್ರಕಾರ ಯಾವುದೇ ಅಪರಾಧದ ಬಗ್ಗೆ ಮಾಹಿತಿ ಲಭ್ಯವಾದರೆ, ಆದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಬಹುದು. ಪೊಲೀಸರಿಗೆ ಈ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.

ಜತೆಗೆ, ಕೇಂದ್ರದ ವರದಿ ಹಾಗೂ ಹೈಕೋರ್ಟ್‌ ಸೂಚನೆ ನಿರ್ಲಕ್ಷಿಸಿ ಎಫ್ಐಆರ್‌ ದಾಖಲಿಸುವಲ್ಲಿ ವಿಳಂಬ ಮಾಡಲಾಗಿದೆ. ಕರ್ತವ್ಯಲೋಪ ಎಸಗಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿತು.

ಟಾಪ್ ನ್ಯೂಸ್

5-hunsur

HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ

Manipur: ಬಂಡುಕೋರರ ಗುಂಡಿನ ದಾಳಿ: ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

4-mangaluru

Mangaluru: ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

asia cup 2023

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-7

ಪತ್ನಿಯ ಶೀಲ ಶಂಕಿಸಿ ಗುಪ್ತಾಂಗಕ್ಕೆ ಇರಿದು ಹತ್ಯೆ

tdy-6

ನಿಮಿಷದಲ್ಲಿ ಸಾವಿರ ಸಸಿ ನೆಡುವ ಅಭಿಯಾನ

ನಕಲಿ ಪತ್ರ ನೀಡಿ ವಂಚನೆ: 7 ಮಂದಿ ಸೆರೆ

ನಕಲಿ ಪತ್ರ ನೀಡಿ ವಂಚನೆ: 7 ಮಂದಿ ಸೆರೆ

ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನೇ ಡ್ರಗ್ಸ್‌ ವ್ಯಸನಿ!  

ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನೇ ಡ್ರಗ್ಸ್‌ ವ್ಯಸನಿ!  

ಪ್ರೇಯಸಿ ಕೊಂದು ಸಹಜ ಸಾವು ಕಥೆ ಕಟ್ಟಿದ

ಪ್ರೇಯಸಿ ಕೊಂದು ಸಹಜ ಸಾವು ಕಥೆ ಕಟ್ಟಿದ

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

5-hunsur

HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ

ಹಾರೋಹಳ್ಳಿ: ಬೋನಿಗೆ ಬಿದ್ದ ಹತ್ತು ವರ್ಷದ ಗಂಡು ಚಿರತೆ

ಹಾರೋಹಳ್ಳಿ: ಬೋನಿಗೆ ಬಿದ್ದ ಹತ್ತು ವರ್ಷದ ಗಂಡು ಚಿರತೆ

Manipur: ಬಂಡುಕೋರರ ಗುಂಡಿನ ದಾಳಿ: ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

ನಿರ್ವಹಣೆ ಕೊರತೆ: ಸೊರಗುತ್ತಿದೆ ಮಾಸ್ತಿ ಗ್ರಂಥಾಲಯ

ನಿರ್ವಹಣೆ ಕೊರತೆ: ಸೊರಗುತ್ತಿದೆ ಮಾಸ್ತಿ ಗ್ರಂಥಾಲಯ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ