ನೊಂದವರಿಗೆ ವರವಾದ ಸಾಮಾಜಿಕ ಜಾಲತಾಣ

ಸಿಟಿ ಪೊಲೀಸರಿಗೆ ಸೋಷಿಯಲ್‌ ಮೀಡಿಯಾ ದೂರಿನ ಪ್ರಮಾಣ ಹೆಚ್ಚಳ

Team Udayavani, Jan 23, 2023, 12:35 PM IST

ನೊಂದವರಿಗೆ ವರವಾದ ಸಾಮಾಜಿಕ ಜಾಲತಾಣ

ಕಾಲವೊಂದಿತ್ತು, ಸಣ್ಣ ಪುಟ್ಟ ಅಪರಾಧ ಪ್ರಕರಣ ನಡೆದರೂ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿ ಆ ನಂತರ ಅದರ ಬೆನ್ನಟ್ಟಿ ಆರೋಪಿಗಳ ಪತ್ತೆ ಅಥವಾ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಪೊಲೀಸ್‌ ಠಾಣೆಗಳಿಗೆ ದಿನಗಟ್ಟಲೆ ಅಲೆಯಬೇಕಿತ್ತು. ಸಾಕ್ಷ್ಯ ಹೆಸರಿನಲ್ಲಿ ನಾನಾ ಹಿಂಸೆ ಅನುಭವಿಸಬೇಕಿತ್ತು. ಆದರೆ, ಇದೀಗ ರಾಜಧಾನಿ ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಯಾರೇ ನಾಗರಿಕರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಏನೇ ತೊಂದರೆ ಎದುರಾದರೆ ಕ್ಷಣದಲ್ಲಿ ದೂರು ಕೊಡಬಹುದು. ತಕ್ಷಣ ಸ್ಪಂದನೆಯೂ ದೊರೆತು ಆರೋಪಿಗಳ ಪತ್ತೆ ಕಾರ್ಯವೂ ಶೀಘ್ರಗತಿಯಲ್ಲಿ ಆಗುತ್ತದೆ. ಇದಕ್ಕೆ ಕೊಂಡಿಯಾಗಿರುವುದು ಸಾಮಾಜಿಕ ಜಾಲತಾಣ. ಹೌದು, ಸಾರ್ವಜನಿಕ ಸ್ಥಳಗಳಲ್ಲಿ ಪುಂಡರಿಂದ ಲೈಂಗಿಕ ದೌರ್ಜನ್ಯ, ವಂಚನೆ, ನಿರ್ದಿಷ್ಟ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆ, ಪ್ರಭಾವಿಗಳಿಂದ ತೊಂದರೆಗಳು, ಬೆದರಿಕೆಗಳು, ಲಂಚಕ್ಕೆ ಬೇಡಿಕೆ, ಸಾರ್ವಜನಿಕ ಪ್ರದೇಶಗಳಲ್ಲಿ ದಾಂದಲೆ ಹೀಗೆ ಹತ್ತು-ಹಲವು ಸಮಸ್ಯೆಗಳ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಆದ ತಕ್ಷಣ ನೊಂದವರಿಗೆ ಸಿಗುತ್ತಿದೆ ಪರಿಹಾರ. ವಾಟ್ಸ್‌ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಂ, ಟೆಲಿಗ್ರಾಮ್‌ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳು ಇದೀಗ ನೊಂದವರಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಜನ ಸಾಮಾ ನ್ಯರು ಏನೇ ತೊಂದರೆಯಾದರೂ ತಕ್ಷಣ ಅದನ್ನು ಸೋಷಿಯಲ್‌ ಮೀಡಿಯಾ ದಲ್ಲಿ ಹಂಚಿಕೊಳ್ಳುವುದು ಟ್ರೆಂಡ್‌ ಆಗಿಬಿಟ್ಟಿದೆ.

ಪೊಲೀಸ್‌ ವಿಭಾಗಕ್ಕೆ ಶೇ. 70 ದೂರುಗಳು: ಐಟಿ-ಬಿಟಿ, ಸಿಲಿಕಾನ್‌ ಸಿಟಿ ಎಂಬ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿಯಲ್ಲೇ ಅತೀ ಹೆಚ್ಚು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಪೈಕಿ ಶೇ.70 ಪ್ರಕರಣಗಳು ಬೆಂಗಳೂರು ಪೊಲೀಸ್‌ ವಿಭಾಗಕ್ಕೆ ಸೇರಿದ್ದಾಗಿದೆ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸರು ಪ್ರತ್ಯೇಕವಾಗಿ ತಮ್ಮ ವಿಭಾಗದ ಹೆಸರಿನಲ್ಲಿ ಅಧಿಕೃತ ಟ್ವಿಟರ್‌, ಫೇಸ್‌ಬುಕ್‌ ಖಾತೆ ತೆರೆದಿದ್ದಾರೆ. ಇದರ ನಿರ್ವಹಣೆಗೂ ಕೆಲ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ. ಈ ಖಾತೆಗಳಿಗೆ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬರುತ್ತಿವೆ. ಸಾರ್ವಜನಿಕರು ತಮಗಾದ ಅನ್ಯಾಯದ ಬಗ್ಗೆ ವಿಡಿಯೋ ಮಾಡಿ ಸಂಬಂಧಿಸಿದ ಪೊಲೀಸ್‌ ವಿಭಾಗದ ಟ್ವಿಟರ್‌, ಫೇಸ್‌ಬುಕ್‌ ಖಾತೆಗೆ ಟ್ಯಾಗ್‌ ಮಾಡಿ ನ್ಯಾಯ ಕೇಳುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರ ತೊಂದರೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲು, ಪರಿಹಾರಕ್ಕೆ ಮನವಿ ಮಾಡಲು ಹಾಗೂ ಪ್ರಶ್ನಿಸಲು ಸಹಕಾರಿಯಾಗಿದೆ. ತೊಂದರೆಗೆ ಸಿಲುಕಿರುವವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಕೆಲ ಹೊತ್ತಿನಲ್ಲೇ ವೈರಲ್‌ ಆಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸಾರ್ವಜನಿಕ ಆಕ್ರೋಶಗಳು ಬುಗಿಲೇಳಲು ಪ್ರಾರಂಭವಾಗುತ್ತಿದ್ದಂತೆ ಆರೋಪಿ ಎಷ್ಟೇ ಪ್ರಭಾವಿಯಾದರೂ ಪೊಲೀಸರಿಗೆ ಆತನ ವಿರುದ್ಧ ಕ್ರಮವಹಿಸುವ ಅನಿವಾರ್ಯತೆ ನಿರ್ಮಾಣವಾಗುತ್ತಿದೆ.

ಸಂಚಾರ ನಿರ್ವಹಣೆಗೆ ಸಹಕಾರಿ : ಬೆಂಗಳೂರು ಸಂಚಾರ ವಿಭಾಗದ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸೆಂಟರ್‌ನಲ್ಲಿ ಸೊಷಿಯಲ್‌ ಮೀಡಿಯಾ ನಿರ್ವಹಣೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಂದ ಪ್ರತಿನಿತ್ಯ ಹತ್ತಾರು ದೂರುಗಳು ಬರುತ್ತಿರುತ್ತವೆ. ಇದನ್ನು ನಿರ್ವಹಣೆ ಮಾಡುವ ಸಿಬ್ಬಂದಿ ಕೂಡಲೇ ಸಂಬಂಧಿ ಸಿದ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುವ ಸಂದರ್ಭದಲ್ಲಿ ಟ್ವಿಟರ್‌ ಮೂಲಕ ಸಾರ್ವಜನಿಕರು ಮಾಹಿತಿ ನೀಡುತ್ತಿದ್ದಾರೆ. ನಾವು ಕೂಡಲೇ ಆ ಪ್ರದೇಶಗಳಿಗೆ ಸಿಬ್ಬಂದಿಯನ್ನು ಕಳುಹಿಸಿ ಸಾಕಷ್ಟು ಭಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೇವೆ ಎಂದು ಬೆಂಗಳೂರು ಸಂಚಾರ ವಿಭಾಗದ ವಿಶೇಷ ಪೊಲೀಸ್‌ ಆಯಕ್ತ ಡಾ.ಎಂ.ಎ.ಸಲೀಂ “ಉದಯವಾಣಿ’ಗೆ ಮಾಹಿತಿ ನೀಡಿದರು.

ಸಾವಿರಾರು ಮಂದಿಗೆ ಸಿಕ್ಕಿದ ನ್ಯಾಯ : ಅನ್ಯಾಯಕ್ಕೊಳಗಾಗಿ ಎಲ್ಲೂ ನ್ಯಾಯ ಸಿಗದ್ದಾಗ ಕೊನೆಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಹಾರ ಕಂಡುಕೊಂಡ ನೂರಾರು ಉದಾಹರಣೆಗಳು ದೇಶದಲ್ಲಿದೆ. 2 ವರ್ಷಗಳಿಂದ ಇಂತಹ ಘಟನೆಗಳಿಂದ ಸ್ಫೂರ್ತಿ ಪಡೆದಿರುವ ಲಕ್ಷಾಂತರ ಮಂದಿ ಕುಗ್ರಾಮಗಳಲ್ಲೇ ಕುಳಿತುಕೊಂಡು ತಮಗಾದ ಅನ್ಯಾಯದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಗಳಲ್ಲಿ ಹರಿಯಬಿಡಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೊಂದವರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಮೂಡಿದೆ. ಸಾಮಾಜಿಕ ಮಾಧ್ಯಮ ಬಳಸಿಕೊಂಡು ಕೆಲವರು ಸರ್ಕಾರವನ್ನು ಪ್ರಶ್ನಿಸುತ್ತಾರೆ. ಕೆಲವೊಮ್ಮೆ ಖುದ್ದು ಸರ್ಕಾರಿ ಅಧಿಕಾರಿಗಳೇ ಉತ್ತರ ನೀಡುತ್ತಾರೆ.

ದೂರು ನೀಡಲು ಸಾಮಾಜಿಕ ಜಾಲತಾಣಗಳ ಬಳಕೆ ? :

  • ನಿಮ್ಮ ಫೋನ್‌, ಪರ್ಸ್‌ ಮತ್ತು ಯಾವುದೇ ಅತಿಮುಖ್ಯವಾದ ದಾಖಲೆಗಳು ಕಳೆದುಹೋದಲ್ಲಿ “ಇ-ಲಾಸ್ಟ್‌ ರಿಪೋರ್ಟ್‌’ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ದೂರು ದಾಖಲಿಸಬಹುದು. „ ನಗರದಲ್ಲಿ ಸಂಚಾರ ನಿಯಮ ಉಲ್ಲಂ ಸಿರುವುದು ಗಮನಕ್ಕೆ ಬಂದರೆ ಪಬ್ಲಿಕ್‌ ಐ ಆ್ಯಪ್‌ ಮೂಲಕ ಪೊಲೀಸರಿಗೆ ಮಾಹಿತಿ ನೀಡಬಹುದು.
  • ಪೊಲೀಸ್‌ ಸಿಬ್ಬಂದಿ ಕಿರುಕುಳ ಕೊಟ್ಟರೆ, ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಪೊಲೀಸ್‌ ವಿಭಾಗದ ಅಧಿಕೃತ ಟ್ವಿಟರ್‌, ಫೇಸ್‌ ಬುಕ್‌ ಮೂಲಕ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು.
  • ಸಂಚಾರ ಸಮಸ್ಯೆ, ಅಪರಾಧ ಪ್ರಕರಣಗಳಲ್ಲಿ ಅಮಾಯಕರಿಗೆ ಅನ್ಯಾಯ ಆಗಿ ನ್ಯಾಯ ಸಿಗದಿದ್ದರೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕರಣ ಬೆಳಕಿಗೆ ತರಲು ಅವಕಾಶಗಳಿವೆ.

ಸದ್ದು ಮಾಡಿದ ಕೆಲ ಪ್ರಕರಣ :

  • ಜ.17ರಂದು ಸ್ಕೂಟರ್‌ಗೆ ಜೋತುಬಿದ್ದ ವೃದ್ದನನ್ನು ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
  • 2022 ಡಿ.8 ರಂದು ರಾತ್ರಿ 12.30ಕ್ಕೆ ಸ್ನೇಹಿತನ ಜನ್ಮದಿನ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ದಂಪತಿಯನ್ನು ತಡೆದ ಸಂಪಿಗೆಹಳ್ಳಿ ಠಾಣೆಯ ಹೊಯ್ಸಳ ವಾಹನದ ಇಬ್ಬರು ಕಾನ್‌ಸ್ಟೇಬಲ್‌ಗ‌ಳು ಬೆದರಿಸಿ 1 ಸಾವಿರ ರೂ. ಪಡೆದಿದ್ದರು. ಈ ಕುರಿತು ನೊಂದ ಕಾರ್ತಿಕ್‌ ಪಾತ್ರಿ ಎಂಬುವವರು ಸರಣಿ ಟ್ವೀಟ್‌ ಮಾಡಿದ್ದರು. ಇದು ರಾಜ್ಯಾದ್ಯಂತ ವೈರಲ್‌ ಆಗಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹೆಡ್‌ಕಾನ್‌ ಸ್ಟೆಬಲ್‌ ರಾಜೇಶ್‌ ಹಾಗೂ ಕಾನ್‌ಸ್ಟೇಬಲ್‌ ನಾಗೇಶ್‌ ಅವರನ್ನು ಅಮಾನತುಪಡಿಸಲಾಗಿತ್ತು.
  • 2022 ನ.26 ರಂದು ಶಂಕರ್‌ ಮಿಶ್ರಾ ನ್ಯೂಯಾರ್ಕ್‌ನಿಂದ ದೆಹಲಿಗೆ ಏರ್‌ ಇಂಡಿಯಾ ವಿಮಾನದಲ್ಲಿ ಬರುತ್ತಿದ್ದಾಗ ಕುಡಿದ ಮತ್ತಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಆತನ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಲಾಗಿತ್ತು.
  • 2023 ಜ.13ರಂದು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ರ್ಯಾಪಿಡೋ ವಾಹನದಲ್ಲಿ ಹೋಗುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿ ಬ್ಯಾಗ್‌ ಪರಿಶೀಲಿಸಿ ಗಾಂಜಾ ಇದೆ ಎಂದು ಹೇಳಿ 2,500 ರೂ. ಪಡೆದಿದ್ದಾರೆ ಎಂದು ಆರೋಪಿಸಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಟ್ವೀಟ್‌ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ.
  • 2023 ಜ.21 ಕಸವನಹಳ್ಳಿ ಕಡೆಯ ರಸ್ತೆಗಳಲ್ಲಿ ಎಮ್ಮೆಗಳ ಕಾಟ ಜೋರಾಗಿದ್ದು, ರಸ್ತೆಗಳಲ್ಲಿ ಓಡಾಡುವ ಎಮ್ಮೆಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಕ್ರಮಕ್ಕೆ ಕೆಲ ಟೆಕಿಗಳು ಟ್ವೀಟ್‌ ಮಾಡಿ ಸಂಚಾರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದಾರೆ.
  • ಬೆಂಗಳೂರಿನ ರಸ್ತೆಯೊಂದರಲ್ಲಿ ಅಳವಡಿಸಿದ್ದ ಹೊಸ ಟ್ರಾಫಿಕ್‌ ಫ‌ಲಕವನ್ನು ಪ್ರಶ್ನಿಸಿ ಆ.1ರಂದು ವ್ಯಕ್ತಿಯೊಬ್ಬರು ಟ್ವೀಟ್‌ ಮೂಲಕ ಪೊಲೀಸರನ್ನು ಪ್ರಶ್ನಿಸಿದ್ದರು. ಇದನ್ನು ಹೋಪ್‌ಫಾರ್ಮ್ ಸಿಗ್ನಲ್‌ಗೆ ಕೊಂಚ ಮೊದಲು ಈ ಸಿಂಬಲ್‌ ಅಳವಡಿಸುವುದಾಗಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
  • ಕಬ್ಬನ್‌ಪಾರ್ಕ್‌ ಠಾಣಾ ವ್ಯಾಪ್ತಿಯಲ್ಲಿ ಎರಡು ಹುಡುಗರ ಗುಂಪುಗಳ ನಡುವೆ ಹುಡುಗಿ ಪ್ರೀತಿಯ ವಿಚಾರಕ್ಕೆ ಕಿತ್ತಾಡಿಕೊಂಡಿರುವ ವಿಡಿಯೋ ಸೆ.20ರಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ಭಾರಿ ಸುದ್ದಿಯಾಗಿದ್ದವು.
  • 2022 ಡಿ.18ರಂದು ಜೆಪಿ ನಗರದ ನಿವಾಸಿ ನೆಮೋ ಎಂಬಾತ ತನ್ನ ಮನೆಯ ಪಕ್ಕದಲ್ಲಿ ಸಾಕು ಕೋಳಿಗಳು ಕೂಗುವುದರಿಂದ ತಮಗೆ ನಿದ್ರಿಸಲೂ ಸಾಧ್ಯವಾಗುತ್ತಿಲ್ಲ. 2 ವರ್ಷದ ಮಗುವಿಗೆ ನಿದ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾನೆ. ಇದು ಅಚ್ಚರಿಗೆ ಕಾರಣವಾಗಿತ್ತು.
  • 2022 ಡಿ.21ರಂದು ಮಾರತಹಳ್ಳಿ ಪಬ್‌ವೊಂದರಲ್ಲಿ ತಡರಾತ್ರಿ 12 ಗಂಟೆ ನಂತರ ಜೋರಾಗಿ ಡಿಜೆ ಸೌಂಡ್‌ ಹಾಕುತ್ತಾರೆ. ಪ್ರತಿನಿತ್ಯ ಪಬ್‌ನಿಂದ ಸಮಸ್ಯೆಯಾಗುತ್ತಿದೆ ಎಂದು ಟ್ವೀಟ್‌ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು.
  • ಕೆಲ ದಿನಗಳ ಹಿಂದೆ ಸಿಐಡಿ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ ಪಿಎಸ್‌ಐ ಹಗರಣದ ಅಭ್ಯರ್ಥಿಯು ಜ.21ರಂದು ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷನಾಗಿ ಕೆಲ ನಾಯಕರು ಹಗರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಸಾಮಾಜಿಕ ಜಾಲತಾಣಗಳಿಂದ ಜನರಿಗೆ ಸಾಕಷ್ಟು ಉಪಯೋಗವಾಗಿದೆ. ಸಂಚಾರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳ ಬಗ್ಗೆ ಈ ಹಿಂದೆ ಹಲವು ಬಾರಿ ಸೋಷಿಯಲ್‌ ಮೀಡಿಯಾ ಮೂಲಕ ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದಾರೆ. – ಡಾ.ಎಂ.ಎ.ಸಲೀಂ, ವಿಶೇಷ ಆಯುಕ್ತ, ಬೆಂಗಳೂರು ಸಂಚಾರ ವಿಭಾಗ

– ಅವಿನಾಶ್‌ ಮೂಡಂಬಿಕಾನ

ಟಾಪ್ ನ್ಯೂಸ್

accident 2

ನಿಂತಿದ್ದ ಲಾರಿಗೆ ಕ್ರೂಸರ್‌ ಢಿಕ್ಕಿ: ಐವರ ಸಾವು

mobile

ನಕಲಿ ಬ್ಯಾಂಕ್‌ ಅಧಿಕಾರಿಗಳ “KYC ಅಪ್‌ಡೇಟ್‌” ಖೆಡ್ಡಾ !

HDK HDD

ಸೋಲು ಶಾಶ್ವತ ಅಲ್ಲ- ಮರಳಿ ಪಕ್ಷ ಕಟ್ಟೋಣ: ಆತ್ಮಾವಲೋಕನ ಸಭೆಯಲ್ಲಿ HDD, HDK ಕರೆ

cow

Karnataka: ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌- ಮುಂದುವರಿದ ಗೊಂದಲ

applle

iOS 17 ವರ್ಷನ್‌ ಬಿಡುಗಡೆ

CC CAMERAS

ಕಾಸರಗೋಡು: AI ಕೆಮರಾ ನಿಗಾ ಆರಂಭ- ಮೊದಲ ದಿನ 1,040 ನಿಯಮ ಉಲ್ಲಂಘನೆ

trainJharkhand; ರೈಲು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ…!

Jharkhand; ರೈಲು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-7

ಪತ್ನಿಯ ಶೀಲ ಶಂಕಿಸಿ ಗುಪ್ತಾಂಗಕ್ಕೆ ಇರಿದು ಹತ್ಯೆ

tdy-6

ನಿಮಿಷದಲ್ಲಿ ಸಾವಿರ ಸಸಿ ನೆಡುವ ಅಭಿಯಾನ

ನಕಲಿ ಪತ್ರ ನೀಡಿ ವಂಚನೆ: 7 ಮಂದಿ ಸೆರೆ

ನಕಲಿ ಪತ್ರ ನೀಡಿ ವಂಚನೆ: 7 ಮಂದಿ ಸೆರೆ

ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನೇ ಡ್ರಗ್ಸ್‌ ವ್ಯಸನಿ!  

ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನೇ ಡ್ರಗ್ಸ್‌ ವ್ಯಸನಿ!  

ಪ್ರೇಯಸಿ ಕೊಂದು ಸಹಜ ಸಾವು ಕಥೆ ಕಟ್ಟಿದ

ಪ್ರೇಯಸಿ ಕೊಂದು ಸಹಜ ಸಾವು ಕಥೆ ಕಟ್ಟಿದ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

accident 2

ನಿಂತಿದ್ದ ಲಾರಿಗೆ ಕ್ರೂಸರ್‌ ಢಿಕ್ಕಿ: ಐವರ ಸಾವು

mobile

ನಕಲಿ ಬ್ಯಾಂಕ್‌ ಅಧಿಕಾರಿಗಳ “KYC ಅಪ್‌ಡೇಟ್‌” ಖೆಡ್ಡಾ !

HDK HDD

ಸೋಲು ಶಾಶ್ವತ ಅಲ್ಲ- ಮರಳಿ ಪಕ್ಷ ಕಟ್ಟೋಣ: ಆತ್ಮಾವಲೋಕನ ಸಭೆಯಲ್ಲಿ HDD, HDK ಕರೆ

cow

Karnataka: ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌- ಮುಂದುವರಿದ ಗೊಂದಲ

applle

iOS 17 ವರ್ಷನ್‌ ಬಿಡುಗಡೆ