ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಮುಖ್ಯಸ್ಥನ ವಿರುದ್ಧ ದೂರು

Team Udayavani, May 12, 2019, 3:00 AM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಿಟ್ಲರ್‌ನ ಹೋಲಿಕೆ ಬರುವ ರೀತಿಯಲ್ಲಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿರುವ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಶ್ರೀವತ್ಸ ವಿರುದ್ಧ ರಾಜ್ಯ ಬಿಜೆಪಿ, ಮಲ್ಲೇಶ್ವರ ಪೊಲೀಸರಿಗೆ ಶನಿವಾರ ದೂರು ನೀಡಿದೆ.

ಬಿಜೆಪಿ ಸಾಮಾಜಿಕ ಜಾಲತಾಣದ ರಾಜ್ಯ ಸಹ ಸಂಚಾಲಕ ಸಿದ್ದು ಪುಂಡಿಕಾಳ್‌ ಎಂಬವರು ದೂರು ನೀಡಿದ್ದು, ಹಿಟ್ಲರ್‌ ಹೋಲಿಕೆ ಬರುವಂತೆ ತಿರುಚಿದ ಪ್ರಧಾನಿ ಮೋದಿ ಅವರ ಚಿತ್ರವನ್ನು ಶ್ರೀವತ್ಸ, ಟ್ವೀಟರ್‌ ಖಾತೆಯಲ್ಲಿ ಹಾಕಿದ್ದಾರೆ. ಅಲ್ಲದೆ, “ಸಬ್ಸೆ ಬಡಾ ಜೂಟಾ ಮೋದಿ’ (ಮಹಾನ್‌ ಸುಳ್ಳುಗಾರ ಮೋದಿ) ಎಂದು ಅವಹೇಳನಾಕಾರಿಯಾಗಿ ಪೋಸ್ಟ್‌ ಮಾಡಿದ್ದಾರೆ.

ಟ್ವಿಟರ್‌ ಪ್ರೊಫೈಲ್‌ನಲ್ಲಿ ತಾವು ಕಾಂಗ್ರೆಸ್‌ ಪಕ್ಷದ ಪ್ರಚಾರದ ಉಸ್ತುವಾರಿ ಎಂದು ಹಾಕಿಕೊಂಡಿರುವ ಶ್ರೀವತ್ಸ ಅವರನ್ನು ಬಂಧಿಸಿ, ಟ್ವಿಟರ್‌ನಲ್ಲಿ ಹಾಕಲಾಗಿರುವ ಎಲ್ಲಾ ಪೋಸ್ಟ್‌ಗಳನ್ನು ತೆಗೆಸುಬೇಕು ಎಂದು ಸಿದ್ದು ದೂರಿನಲ್ಲಿ ಒತ್ತಾಯಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಯಲಹಂಕ: ರಾಜ್ಯದಲ್ಲಿ ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಯಲಹಂಕ...

  • ಬೆಂಗಳೂರು: ಹೈದರಾಬಾದ್‌ನ ಪಶು ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಳಿಕ ಮಹಿಳಾ ಸುರಕ್ಷತೆ ಬಗ್ಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ನಗರ ಪೊಲೀಸರು ಕೈಗೊಳ್ಳುತ್ತಿದ್ದಾರೆ....

  • ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಕಾವು ಜೋರಿದೆ. ಆದರೆ, ಉದ್ಯಾನ ನಗರಿಯ ವಾತಾವರಣಇದಕ್ಕೆ ಭಿನ್ನವಾಗಿದ್ದು, ಸ್ಪಲ್ಪ ಯಾಮಾರಿದರು ಆಸ್ಪತ್ರೆ ಮೆಟ್ಟಿಲೇರಬಹುದು...

  • ಬೆಂಗಳೂರು: ನಗರದ 24 ಪ್ರಮುಖ ಮೇಲ್ಸೇತುವೆ, ಅಂಡರ್‌ ಪಾಸ್‌ ಮತ್ತು ತೂಗು ಸೇತುವೆಗಳಲ್ಲಿನ ಲೋಪ ಸರಿಪಡಿಸಲು ಬಿಬಿಎಂಪಿ 40 ಕೋಟಿ ರೂ. ಮೀಸಲಿರಿಸಿದ್ದು, ಟೆಂಡರ್‌ ಕರೆಯಲು...

  • ಬೆಂಗಳೂರು: ಉಪ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ, ಮದ್ಯ ಮಾರಾಟ ನಿಷೇಧ ಹಾಗೂ ಈ ಭಾಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ...

ಹೊಸ ಸೇರ್ಪಡೆ