ಭಾರೀ ಚಳಿಯ ಪರಿಣಾಮ; ಜನವರಿಯಲ್ಲಿ ಕಾಶಿ ದರ್ಶನದ 3ನೇ ಟ್ರಿಪ್
ಡಿ.5ರ ನಂತರ ಉಷ್ಣಾಂಶವು ರಾತ್ರಿಯ ಹೊತ್ತು 5 ಡಿಗ್ರಿ ಸೆಲ್ಸಿಯಸ್ ಗೆ ತಲುಪುತ್ತದೆ
Team Udayavani, Nov 24, 2022, 11:25 AM IST
ಬೆಂಗಳೂರು: ಉತ್ತರ ಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಡಿಸೆಂಬರ್ ಬದಲಾಗಿ ಜನವರಿಯಲ್ಲಿ ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿನ ಮೂರನೇ ಟ್ರಿಪ್‌ಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲು ಪ್ರವಾಸದ ಎರಡನೇ ಯಾತ್ರೆಯ ಪ್ರಯಾಣಿಕರಿಗೆ ಬೀಳ್ಕೊಟ್ಟ ಬಳಿಕ ಮಾತನಾಡಿದ ಅವರು, ಡಿ.5ರ ನಂತರ ಉಷ್ಣಾಂಶವು ರಾತ್ರಿಯ ಹೊತ್ತು 5 ಡಿಗ್ರಿ ಸೆಲ್ಸಿಯಸ್ ಗೆ ತಲುಪುತ್ತದೆ. ಇಷ್ಟು ತೀವ್ರ ಚಳಿಯನ್ನು ದಕ್ಷಿಣ ಭಾರತದ ಜನರು ತಡೆದುಕೊಳ್ಳುವುದು ಬಹಳ ಕಷ್ಟ ಎಂದು ಹೇಳಿದರು.
ಐಆರ್‌ಸಿಟಿಸಿ ಉತ್ತರ ಭಾರತದ ಕಡೆಯ ತನ್ನ ಎಲ್ಲಾ ಪ್ರವಾಸಿ ರೈಲುಗಳನ್ನು ದಕ್ಷಿಣ ಮತ್ತು ಪಶ್ಚಿಮ ಭಾರತದ ಕಡೆಗೆ ಮಾರ್ಪಾಡು ಮಾಡುತ್ತದೆ. ಹೀಗಾಗಿ ಕಾಶಿ ದರ್ಶನ ರೈಲನ್ನು ಡಿಸೆಂಬರ್ ಬದಲಾಗಿ ಜನವರಿ ತಿಂಗಳಲ್ಲಿ ಯೋಜಿಸುವಂತೆ ಐಆರ್ ಸಿಟಿಸಿ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ. ನಮ್ಮ ಯಾತ್ರಾರ್ಥಿಗಳಲ್ಲಿ ಹೆಚ್ಚಿನ ಜನರು ಹಿರಿಯ ನಾಗರೀಕರಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ಜ.20ರ ನಂತರ 3ನೇ ಟ್ರಿಪ್ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಚಾರ್ಧಾಮ್ ಯಾತ್ರೆ: ಚಾರ್ಧಾಮ್ ಯಾತ್ರೆ ಇತ್ತೀಚೆಗೆ ಮುಗಿದಿದ್ದು, ಇಲಾಖೆಯ ಕಾಲಾವಧಿಯಂತೆಯೇ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಯಾವಾಗಲೂ ನವೆಂಬರ್‌ನಲ್ಲಿ ಪ್ರಾರಂಭವಾಗಿ, ಏಪ್ರಿಲ್ ತಿಂಗಳವರೆಗೆ ನಡೆಯುತ್ತದೆ. ಈ ಯೋಜನೆಗೂ ಸರ್ಕಾರದ ಸಹಾಯಧನವಿದ್ದು ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಚಾರ್ಧಾಮ್ ಯಾತ್ರೆ ಇತ್ತೀಚೆಗೆ ಮುಗಿದಿರುವ ಹಿನ್ನೆಲೆಯಲ್ಲಿ ಅರ್ಜಿ ಅಹ್ವಾನಿಸುವ ಪ್ರಕ್ರಿಯೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ನಟಿ ತಾರಾ ಅನುರಾಧ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಎಲ್ಲಾ ಸೀಟುಗಳ ಭರ್ತಿ
ಕಾಶಿಗೆ ಸಂಚಾರ ಮಾಡುವ ಈ ರೈಲಿನಲ್ಲಿ ಒಂದು ಟ್ರಿಪ್‌ಗೆ ಗರಿಷ್ಠ 600 ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದ್ದು, 100 ಮಂದಿ ರೈಲ್ವೆ ಸಿಬ್ಬಂದಿ ಇರಲಿದ್ದಾರೆ. ಈ ಬಾರಿಯೂ ರೈಲಿನ ಎಲ್ಲ ಸೀಟುಗಳೂ ಭರ್ತಿಯಾಗಿದ್ದು, ರೈಲಿನಲ್ಲಿ ಭಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾಶಿ ಯಾತ್ರೆಯ ರೈಲನ್ನು ಸಂಪೂರ್ಣವಾಗಿ ಧಾರ್ಮಿಕ ಪುಣ್ಯ ಕ್ಷೇತ್ರಗಳ ಪೋಟೋಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ
ವಿದ್ಯಾವಂತರಿಗೆ ಸರಕಾರ ಉದ್ಯೋಗ ನೀಡದೆ ನರೇಗಾ ಕೆಲಸಕ್ಕೆ ತಳ್ಳಿದೆ : ಶಾಸಕ ಗಣೇಶ್
ಅಧಿಕಾರಕ್ಕೆ ಬರುವುದೇ ಡೌಟು… ಆದರೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ: ಕಟೀಲ್
ಸಂಪೂರ್ಣ ಕೇಸರಿಮಯವಾದ ಮಹಾಲಿಂಗಪುರ… ಯುವಶಕ್ತಿ ಸಮಾಗಮ
7 ನೂತನ ವಿ.ವಿ.ಗಳಿಗೆ ಕುಲಪತಿಗಳ ನೇಮಕ: ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ
MUST WATCH
ಹೊಸ ಸೇರ್ಪಡೆ
ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ:ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು
ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ
ವಿದ್ಯಾವಂತರಿಗೆ ಸರಕಾರ ಉದ್ಯೋಗ ನೀಡದೆ ನರೇಗಾ ಕೆಲಸಕ್ಕೆ ತಳ್ಳಿದೆ : ಶಾಸಕ ಗಣೇಶ್
ಬಿದರಹಳ್ಳಿಯ ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ
ಅಧಿಕಾರಕ್ಕೆ ಬರುವುದೇ ಡೌಟು… ಆದರೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ: ಕಟೀಲ್